ಶುಕ್ರವಾರ, ಆಗಸ್ಟ್ 18, 2017

ಮುದ್ದು ಗಲ್ಲದ ಮೇಲೆ ಜೇನಿನಂತ ಸವಿಯುಂಟು,
ನೋಡಕಷ್ಟೇ ಪುಣ್ಯ,ಸವಿಯಲು ಹೋದರೆ ನಾ ತೊಡಿಸಿದ್ದ ಉಂಗುರ ತೊಟ್ಟಿದ್ದ ಬೆರಳುಗಳೆ ಮಧ್ಯೆ ಪ್ರವೇಶಿಸುವುದು....|

ಕಾಯುವಿಕೆ,ತಾಳ್ಮೆಗಳೆ ಸಹನೆಕಳೆದುಕೊಂಡವು ಇಬ್ಬರಲ್ಲೂ |
ನಿಶ್ಚಿತಾರ್ಥ ಮುಗಿದಮೇಲೆ ಎಲ್ಲವೂ ಮುಗಿದಂತಯೇ ಎನ್ನುವುದು ಇವನ ವಾದ....|
ಕಾಲುಂಗುರವನ್ನು ತೊಡಿಸುವ ತನಕ ಕಾಯಬೇಕು ಎನ್ನುವುದು ಇವಳ ವಾದ||
ಬಲಾತ್ಕಾರ ಸವಿ ಉಣ್ಣಲು ಹೋಗಿ,ಕೆನ್ನೆ ಕೆಂಪಾದವು ಇವನದು|

ಅವಳ ಕಣ್ಣೀರ ಹನಿಗಳೆ,ಇವಳ ಕಪಾಳ ಮೋಕ್ಷ ಮಾಡುತ್ತಿದ್ದವು|
ನಾಳೆ ಕೊಡಬೇಕಾಗಿದ್ದನು ,ಇಂದೇ ಕೊಟ್ಟಿದ್ದರಾಗಿತ್ತು ಎಂದು ಜರಿದವು|
   ಅವನ ನೆನೆದು ಕೋಡಿಯಂತೆ ಹರಿಯುತ್ತಿದ್ದ ವರ್ಷಿಣಿಯ ಕಣ್ಣಿರು |
ನೆಲಕ್ಕೆ ತಾಗದಂತೆ ತನ್ನ ಕೈಯ ಬೊಗಸೆಯಲ್ಲಿ ಹಿಡಿಯುತ್ತಿದ್ದನು ಅಭಿಲಾಷ|

ಅಭಿಲಾಷ್ ಟಿ ಬಿ
ತಿಪಟೂರು


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ