ಶುಕ್ರವಾರ, ಆಗಸ್ಟ್ 18, 2017

ಚುಂಬನ....

ಹೂವಿನ ಮಕರಂದಕ್ಕೆ ದುಂಬಿಯ ಚುಂಬನ|
ಸಕ್ಕರೆಯ ಸವಿಗೆ ಸಾಲು ಇರುವೆಗಳ ಚುಂಬನ||
ಕತ್ತಲೆಯ ಇರುಳಿಗೆ ಚುಕ್ಕಿಗಳ ಬೆಳಕಿನ ಚುಂಬನ|
ಗುಡಿಯ ದೇವರಿಗೆ ಗಂಟೆಯ ನಾದದ ಚುಂಬನ||

ಸಾಗರದ ಅಲೆಗಳಿಗೆ ಚಂದ್ರಕಿರಣಗಳ ಚುಂಬನ |
ಮರುಭೂಮಿಯ ಮರಳಿಗೆ ಸೂರ್ಯನ ಶಾಖದ ಚುಂಬನ||
ಖಾಲಿ ಹಾಳೆಗಳಿಗೆ ಕವಿಯ ಅಕ್ಷರಗಳ ಚುಂಬನ|
ಸಡಗರದ ಜಾತ್ರೆಗೆ ಜನರ ನಗುವಿನ ಚುಂಬನ||

ನಿನ್ನ ಜಡೆಗೆ ನೀ ಮುಡಿದಿರುವ ಮಲ್ಲಿಗೆಯ ಚುಂಬನ|
ನಿನ್ನ ಪಾದಗಳಿಗೆ ನಿನ್ನ ಕಾಲ್ಗೆಜ್ಜೆಗಳ ಚುಂಬನ||
ನಿನ್ನ ಕೊರಳಿಗೆ ನಾ ಕಟ್ಟಿರುವ ಮಾಂಗಲ್ಯ ಸರ ಚುಂಬಿಸುವುದ |
ನೋಡುವುದು ಎಷ್ಟು ಚೆನ್ನ, ಆ ಸೌಭಾಗ್ಯ ವ    ಬೇಗ  ಕೊಡು ಚಿನ್ನ||

ಆಭಿಲಾಷ್ ಟಿ ಬಿ
ತಿಪಟೂರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ