ಶುಕ್ರವಾರ, ಆಗಸ್ಟ್ 18, 2017

ನಲಿದಾಡಿತು,ಕುಣಿದಾಡಿತು ತಾಯಿ ಹಕ್ಕಿಯು|
ಮರಿ   ನೀಲಿ ಹಕ್ಕಿಯು    ರೆಕ್ಕೆ ಬಡಿದು ಹಾರಾಡುವ ಕಂಡು ||
ಮತ್ತೆ ತರಬೇತಿ ನೀಡಿತು,ಮತ್ತಷ್ಟು ಉತ್ಸುಕತೆಯಿಂದಲೀ|
ಬಾನಿನಲಿ ದೊಡ್ಡ ಗಿಡುಗನ ಕೈಗೆ ಸಿಗದಿರಲೆಂದು ||

ದೂರದ ಕಾಡೊಂದರ ಚಂದ್ರನ ಬೆಳಕಿಗೆ ಸೋತಿತು|
ಅಮ್ಮನ ರೊಟ್ಟಿ,ಉಂಡೆ ಬೆಣ್ಣೆಯ ಮರೆತಿತು ನೀಲಿ ಮರಿ ಹಕ್ಕಿಯು||
ಅಮ್ಮನ ತುತ್ತು,ಅಮ್ಮನ ಜೋಗುಳ,ಅಮ್ಮನ ಬೆಚ್ಚನೆಯ ಬಂಧನ|
ಬಿಸಿಯಾಯಿತು ಮರುಭೂಮಿಯ ಮರಳಿನಷ್ಟು |
ಮರಿ ಹಕ್ಕಿಗೆ ||

ಪರಿಪರಿಯಾಗಿ ಬೇಡಿತು ,ಕೋಡಿಯಷ್ಟು ಕಣ್ಣಿರ ಹರಿಸಿತು ತಾಯಿ ಹಕ್ಕಿಯು|
ಸಂಬಂಧಗಳಿಗೆ ಬಂಧನವಿರಬಾರದೆಂದು ನುಡಿಯಿತು ಮರಿಹಕ್ಕಿಯು||
ನೋಡುತಾ,ನೋಡುತಾ ಬಲವಾಗಿ ರೆಕ್ಕೆ ಬಡಿಯಿತು|
ಅಮ್ಮನ ಕೈಯನ್ನು ಕಲಚಿ ದೂರದ ಕಾಡಿಗೆ ಹಾರಿತು |

ಅಭಿಲಾಷ್ ಟಿ ಬಿ
ತಿಪಟೂರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ