ಶುಕ್ರವಾರ, ಆಗಸ್ಟ್ 18, 2017

ಮೇಘಗಳು ಮಧುರವಾದ ಮಳೆಯನ್ನು ಸುರಿಸಿವೆ|
ಮೂಡಣದ ಎದುರಿಗೆ ಕಿತ್ತಲೆಯ ಸೂರ್ಯ ಹೊಳೆಯುತ್ತಿದ್ದಾನೆ||
ಮಳೆಬಿಲ್ಲು ಮಹಾದೇವನ ಮಂದಿರಕ್ಕೆ ಬಣ್ಣದ ಪ್ರಭಾವಳಿಯನ್ನು ಮುಡಿಸಿದೆ|
ಮಹಾನದಿ ಗಂಗೆ ಮೌನದಿಂದ ಮಹಾದೇವನ ಧ್ಯಾನಿಸುತ್ತಾ ಹರಿಯುತ್ತಿದ್ದಾಳೆ||

ಮಾತುಗಳನ್ನಾಡಲು ಪದಗಳಿಗೇನೂ ಬರವಿಲ್ಲ,ಆಡುವವರು ಬೇಕಲ್ಲ|
"ಲೋಕಮಾತೆಯಾದರೇನಂತೆ,ಎಷ್ಟೆಯಾದರೂ ಗಂಗೆಗೆ ಅವಳು ಸವತಿಯೇ ||
ಸವತಿ ಎನೆಂದುಕೊಂಡಾಳು ಎನ್ನುವ ಭಯದಿಂದಲೋ ಎನೊ |
ಮಹಾದೇವ ಮಂದಿರದ ಮುಂದೆಯೇ ಬಲಕ್ಕೆ ತಿರುಗಿ ಓಡಿಹೋಗುತ್ತಿದ್ದಾಳೆ,ಮಹಾನದಿ||
ಸಂಜೆಮಲ್ಲಿಗೆಯೂ ದುಂಡುಮಲ್ಲಿಗೆಯಷ್ಟು ಕಂಪನ್ನು ಬೀಸುತ್ತಿದೆ|
ಮಾಮರದಲ್ಲಿ ಕೋಗಿಲೆಗಳ ವಿದ್ವತ್ತು ಷಡ್ಜ ,ರಿಷಭಗಳನ್ನೂ ದಾಟಿದೆ|
ಜೋಯಿಸರು ಮಂದಿರಕ್ಕೆ ಭಕ್ತರನ್ನು ಕಾಯುತ್ತಿದ್ದರೆ|
ಪ್ರಕೃತಿ ಮಹಾದೇವ ,ಮಹಾನದಿಯರ ಚೈತನ್ಯವನ್ನು ತುಂಬಿಕೊಳ್ಳುವ ಮಹಾತಪಸ್ವಿಗಾಗಿ ಕಾಯುತ್ತಿದೆ.

ಅಭಿಲಾಷ್ ಟಿ ಬಿ
ತಿಪಟೂರು


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ