ಗುರುವಾರ, ಏಪ್ರಿಲ್ 6, 2017

ಸ್ವರಾಭಿಷೇಕ ನಮ್ಮ ಶ್ರೀರಂಗಗೆ.................

ಸ್ವರಾಭಿಷೇಕ ನಮ್ಮ ಶ್ರೀರಂಗಗೆ.................


ಸ ರಿ ಗ ಮ ಪದ ನಿ ಸ್ವರಾಭಿಷೇಕ ಮಾಡಿದೆ|
ಶ್ರೀಕೃಷ್ಣಗೆ ,ನಮ್ಮ ಶ್ರೀರಂಗಗೆ ||

ಅಂಬೆಗಾಲಿಡುವ ಯಶೋಧೆ ದೇವಿಯ ಪುಟ್ಟ ಕಂದನು |
ಮಲಗಿರುವಾಗ ಲಾಲಿ ಪದಗಳಿಂದ ಜೋಗುಳವಾಡಿದೆ||
ಗೋಪಾಲ,ಗೋಪಿಯರಗೂಡಿ ನರ್ತಿಸುವಾಗ |
ಘಲ್ಲು ,ಘಲ್ಲು ಗೆಜ್ಜೆಯ ನಾದವ ಮಾಡಿದೆ|
ನಮ್ಮ ಶ್ರೀರಂಗಗೆ,

ಕಾಳಿಂಗನ ಶಿರದಲ್ಲಿ ಪುಟ್ಟ ಪಾದದಿಂದ ನರ್ತಿಸುವಾಗ|
ರುದ್ರವೀಣೆಯಿಂದ ಸ್ವರಗಳ ಹೊರಹೊಮ್ಮಿಸಿದೆ||
ಚಾಣೂರನ ಜೊತೆ ಮಲ್ಲಯುದ್ಧಕ್ಕೆ ಬಂದ|
ನಮ್ಮ ಕೃಷ್ಣಗೆ ಕಹಳೆಯ ಊದಿ ಸ್ವಾಗತಿಸಿದೆ||
ನಮ್ಮ ಕೃಷ್ಣಗ

ರುಕ್ಮಿಣಿದೇವಿಯೊಡೆನೆ ನಂದನದಲ್ಲಿದ್ದ |
ಗೋಪಾಲನಿಗೆ ಕೊಳಲಿನ ಗಾನದಿಂದ ಶೃಂಗಾರ ಮಾಡಿದೆ|
ಉಡುಪಿಯ ಗುಡಿಯಲ್ಲಿ ನಿಂತಿರುವ ನಮ್ಮ ಕೃಷ್ಣಗೆ|
ಪಾಂಚಜನ್ಯ ಮೊಳಗಿಸುತ್ತಾ ಹೊರ ಬಾರೋ ಎಂದು ಬೇಡಿದೆ,ಶಂಖ ಚಕ್ರ ಧರನಿಗೆ||

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ