ಬುಧವಾರ, ಏಪ್ರಿಲ್ 5, 2017

ಕೂಡಿ ಬಂತು ಕಾಲ|

ಕೂಡಿ ಬಂತು ಕಾಲ|


ಕೂಡಿ ಬಂತು ಕಾಲ|
ನಿನ್ನ ಸ್ಮರಿಸಲು ಹರಿಯೇ ||

ತುಂಬಿ ಹರಿಯಿತು  ಪಾಪ ತುಂಬಿದ ಕೊಡವು |
ಅಂದು ದಾನ ಮಾಡದಿರಲು,ಇಂದು ನಿನ್ನ ಧ್ಯಾನಿಸುತಿಹುದು |
ದಾನವಾಂತಕ ನೀ ಇರುವೆನು ಎಂಬುದನ್ನು ಅರಿಯದೆ |
ದಾನವ ಧರ್ಮವ ಪಾಲಿಸಿದೆನಲ್ಲಯ್ಯ ಹರಿಯೇ||

ನಡೆಯುವ ಕಾಲದಲ್ಲಿ ನಿನ್ನ ನಾಮವ ಮರೆತೆ|
ನಡೆಯದ ಕಾಲದಲ್ಲಿ ನಿನ್ನ ನಂಬಿ ಬಂದಿರುವೆ ||
ನಡೆ,ನುಡಿ,ನೆಂಟರಲ್ಲೂ ನಿಷ್ಠೂರವತ್ತು ಕೂತಿರುವೆ|
ನೆರವು ಕೊಡದೆ ಹೋಗದಿರಯ್ಯ ನಾರಾಯಣ ದೇವನೇ||

ಅಭಿಲಾಷ್ ಟಿ ಬಿ
ತಿಪಟೂರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ