ಭಾನುವಾರ, ಮಾರ್ಚ್ 26, 2017

ಕಮಲಾಕ್ಷ

" ಮರದ ಮೇಲಿನ ಮಂಗವೂ ರಾಮ ,ರಾಮ ಅಂತ ಅನ್ನುತ್ತೆ,ಮಂಗನಿಂದ ಮಾನವರಾಗಿರುವ ನಾವೂ ಯಾಕೆ ರಾಮನಾಮ ಜಪಿಸಬಾರದು."

ನುಡಿ,ನಡೆ,ನರರಲ್ಲೂ ನಾರಾಯಣನ ಕಾಣಿರೋ|
ಮರದ ಮೇಲಿನ ಮಂಗವೂ ರಾಮನ ಧ್ಯಾನಿಸುತಿಹುದು||
ಕರಿ ಕರೆದೊಡೆ ಕಮಲಾಕ್ಷ ಬರಲಿಲ್ಲವೇ|
ಬಾಲಕನ ನಂಬಿಕೆಗೆ ಕಂಬವೇ ಒಡೆಯಲಿಲ್ಲವೇ||
ನಾಲಿಗೆ ಮೇಲೆ ಪರರ ನಿಂದಿಪ ನುಡಿ ಹೊರಳದಿರಲಿ|
ನಾರಾಯಣನೆಂಬ ನಳಿನಾಕ್ಷಿ ನಾಯಕ ನಿಮ್ಮವನಾಗುವನು||
ಅವಲಕ್ಕಿ ತಂದವಗೆ ಅರಸನ ಸಿರಿಕೊಟ್ಟ|
ಅವಗುಣ ಬಿಟ್ಟೊಡೆ ಅವನಲ್ಲೇ ನಿಂತ||
ಅರಿಯಿವನು ಅಸುರಗೆ ,ಹರಿಯಿವನು ದಾಸಗೆ|
ಸೌಭಾಗ್ಯಲಕ್ಷ್ಮೀನಾಥ ಶ್ರೀರಂಗನ ಸ್ಮರಿಸಿರೋ||
" ಶ್ರೀರಾಮ ಜಯರಾಮ ಜಯಜಯ ರಾಮ "
ಅಭಿಲಾಷ್ ಟಿ ಬಿ
ತಿಪಟೂರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ