ಏಕನಾಥೇಶ್ವರ.....
ಹೆಸರೇ ಹೇಳುವಂತೆ ಅದು ಹುಲಿಗುಡ್ಡ|
ಹುಲಿ ಗುಡ್ಡದಲ್ಲಿಲ್ಲ,ತಪ್ಪಲಿನ ಊರಿನಲ್ಲಿ ಬಹಳ ಮಂದಿ|
ಗುಡ್ಡದಲ್ಲಿರುವ ಏಕನಾಥೇಶ್ವರನ ಕಲ್ಲಿನ ಕಳಸ |
ದೂರದ ಹತ್ತು ಮೈಲಿ ತಿಪಟೂರಿನವರಿಗೂ ಕಾಣುವುದು||

ಉರಿಬಿಸಿಲು , ಒಂಭತ್ತಕ್ಕೆ ಇನ್ನು ಅರ್ಧ ತಾಸು|
ಏಕನಾಥೇಶ್ವರನ ಬಸವ ಏಕಾಂತದಲ್ಲಿ ಮೇಯುತ್ತಿತ್ತು|
ಉಸಿರುಸಿರು ಬಿಡುತ್ತಾ ,ಹೆಜ್ಜೆ ಹೆಜ್ಜೆಗೂ ನಿಂತರು ಜೋಯಿಸರು |
ಗುಡಿಯ ದ್ವಾರದಲ್ಲಿ ಮಡಿನೀರ ಬಿಂದಿಗೆಯಿಟ್ಟು,ಕಂಬಕ್ಕೊರಗಿ ಕೂತರು||

ನನ್ನಜ್ಜ ಕಟ್ಟಿಸಿದ್ದು,"ನನ್ನಪ್ಪ ತಂದೆ ,ಕಾಪಾಡು "|
ಪುಟ್ಟಜ್ಜಿ ಊರುಗೋಲು ಹಿಡಿದು ಅಂತೂ ಹತ್ತಿದ್ದಳು,ಗುಡ್ಡದ ಮೆಟ್ಟಲ|
ಬಿಸಿಲ ತಾಪ ,ಕಣ್ಣುಗತ್ತಲೆ ಆವರಿಸಿತು,ಕೋಲು ಬಿದ್ದಿತು |
ಜೋಯಿಸರು ಒಡನೆಯೆ ತಂದಿದ್ದ ಮಡಿನೀರು ಕುಡಿಸಿದರು ||
"ನನ್ನಪ್ಪ ಕಾಪಾಡಿದ "ಎಂದಳು ಮುದುಕಿ ಪುಟ್ಟಜ್ಜಿ|

ಅಭಿಲಾಷ್ ಟಿ ಬಿ
ತಿಪಟೂರು
ತಿಪಟೂರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ