ಮಧುರ ಸ್ನೇಹ ....
ಮರೆಯುವುದುಂಟೆ ನಿನ್ನ ಸ್ನೇಹ |
ಗಾಳಿಯಲ್ಲಿ ತೇಲಿ ಬರುತಿದೆ ನಿನ್ನ ಮಧುರ ಭಾವ ||
ಗಾಳಿಯಲ್ಲಿ ತೇಲಿ ಬರುತಿದೆ ನಿನ್ನ ಮಧುರ ಭಾವ ||
ಅರ್ಪಿಸಿರುವೆ ನಿನಗೆ ನನ್ನ|
ನಿನ್ನ ಮುಂಗುರುಳು ಸರಿಸುವ ಭಾಗ್ಯ ನನಗೆ ಕೊಡುವೆಯಾ ||
ನಿನ್ನ ಮುಂಗುರುಳು ಸರಿಸುವ ಭಾಗ್ಯ ನನಗೆ ಕೊಡುವೆಯಾ ||
ಒಡವೆಗಳಿಲ್ಲದ ನಿನ್ನ ಕಾಲ್ಬೆರಳಿಗೆ |
ಕಾಲುಂಗರ ತೊಡಿಸುವ ಕೆಲಸ ಕೊಡುವೆಯಾ ||
ಕಾಲುಂಗರ ತೊಡಿಸುವ ಕೆಲಸ ಕೊಡುವೆಯಾ ||
ಒಂಟಿಯಾಗಿ ಗೂಡಲ್ಲಿ ಕೂತರೆ ಏನು ಚೆಂದ |
ಬಾನಿನಲ್ಲಿ ರೆಕ್ಕೆ ಬಿಚ್ಚಿ ಜೊತೆಯಲ್ಲಿ ಹಾರಾಡುವ ಬಾರಾ|
ಬಾನಿನಲ್ಲಿ ರೆಕ್ಕೆ ಬಿಚ್ಚಿ ಜೊತೆಯಲ್ಲಿ ಹಾರಾಡುವ ಬಾರಾ|
ಮಧುರ ಮಧುರ ಭಾವ ,ಭಾವಗಳ ಬಂಧನ|
ಭಾವನೆಗಳ ಮಂದಿರವ ಕಟ್ಟೋಣ,ಜೊತೆಯಲ್ಲಿ ಬಾಳೋಣ ಬಾರಾ|
ಭಾವನೆಗಳ ಮಂದಿರವ ಕಟ್ಟೋಣ,ಜೊತೆಯಲ್ಲಿ ಬಾಳೋಣ ಬಾರಾ|
ಅಭಿಲಾಷ್ ಟಿ ಬಿ
ತಿಪಟೂರು
ತಿಪಟೂರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ