ದೇಹವಾಗಲಿ ರಾಯರ ಬೃಂದಾವನ |..........
" ಶ್ರೀರಾಘವೇಂದ್ರಾಯ ನಮ: "
ದೇಹವಾಗಲಿ ರಾಯರ ಬೃಂದಾವನ |
ಮನವು ನುಡಿಯಲಿ ರಾಘವೇಂದ್ರರ ನಾಮವ||
ಮನವು ನುಡಿಯಲಿ ರಾಘವೇಂದ್ರರ ನಾಮವ||
ದೇಹ ಶುದ್ಧಿ ತುಂಗೆಯು ಮಾಡುವಳಂತೆ |
ಮನಸ್ಸಿನ ಶುದ್ಧಿ ಮಂತ್ರಾಲಯದ ಯತಿ ಮಾಡುವರಂತೆ |
ಮಾಡಿದ ಪಾಪವು ಮುಂದಿನ ಜನ್ಮಕ್ಕೂ ಸಾಗುವುದಂತೆ|
ಮಾಡಿದ ಪಾಪವ ಕರಗಿಸಲು ಧ್ಯಾನಿಸೋ ಗುರುರಾಯರ||
ಮನಸ್ಸಿನ ಶುದ್ಧಿ ಮಂತ್ರಾಲಯದ ಯತಿ ಮಾಡುವರಂತೆ |
ಮಾಡಿದ ಪಾಪವು ಮುಂದಿನ ಜನ್ಮಕ್ಕೂ ಸಾಗುವುದಂತೆ|
ಮಾಡಿದ ಪಾಪವ ಕರಗಿಸಲು ಧ್ಯಾನಿಸೋ ಗುರುರಾಯರ||
ಸತ್ಯವಿರಲಿ ನಿನ್ನ ನುಡಿಯಲಿ,ಮಿಥ್ಯವಿರದಿರಲಿ ಆತನ ಭಕ್ತಿಯಲ್ಲಿ|
ನಿಷ್ಠುರವಿರದಿರಲಿ ನಿನ್ನ ನಡತೆಯಲ್ಲಿ ಆಪ್ತರಲ್ಲಿ ,ಬಂಧುಗಳಲ್ಲಿ ||
ಭವಸಾಗರದ ಬಂಧನವ ಬಿಡಿಸುವ ಬಂಧು ಆತನು|
ದೈವಾಂಶಗುಣಗಳನ್ನು ಕೂಡಿಸುತ್ತಾ ಬಂದು ನೆಲೆಸು ವನು ನಿಮ್ಮಲ್ಲಿ,ಶ್ರೀರಾಘವೇಂದ್ರಯತಿಯು ||
ನಿಷ್ಠುರವಿರದಿರಲಿ ನಿನ್ನ ನಡತೆಯಲ್ಲಿ ಆಪ್ತರಲ್ಲಿ ,ಬಂಧುಗಳಲ್ಲಿ ||
ಭವಸಾಗರದ ಬಂಧನವ ಬಿಡಿಸುವ ಬಂಧು ಆತನು|
ದೈವಾಂಶಗುಣಗಳನ್ನು ಕೂಡಿಸುತ್ತಾ ಬಂದು ನೆಲೆಸು ವನು ನಿಮ್ಮಲ್ಲಿ,ಶ್ರೀರಾಘವೇಂದ್ರಯತಿಯು ||
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ