ಕಥೆ: " ಪುರಂದರವಿಠಲಗೆ ಅಭಿಷೇಕ ಮಾಡುವೆ....."
ಅದು ಉತ್ತರಭಾರತದ ಸನ್ಮಿತ್ರ ಎಂಬ ರಾಜ್ಯದ ರಾಜಧಾನಿ.ಆ ದೇಶದ ರಾಜಮನೆತನವು ಶ್ರೀಹರಿಯನ್ನು ಆರಾಧ್ಯದೈವವಾಗಿ ಸ್ವೀಕರಿಸಿದ್ದರಿಂದ ತಮ್ಮ ರಾಜಧಾನಿಗೆ ವಿಠಲಾಪುರ ಎಂದು ಹೆಸರಿಸಿದ್ದರು.ಪ್ರಸ್ತುತ ಸನ್ಮಿತ್ರ ರಾಜ್ಯವನ್ನು ಶ್ರೀರಂಗಧಾಮ ಚಕ್ರವರ್ತಿಯು ಆಳುತ್ತಿದ್ದನು.ಆತನ ರಾಜ್ಯದಲ್ಲಿ ಎಲ್ಲವೂ ಸುಭಿಕ್ಷವಾಗಿದ್ದವು,ದಾನ ಧರ್ಮಗಳು,ಹೇರಳವಾದ ಹಣ್ಣು ಹಂಪಲುಗಳು,ಧವಸಧಾನ್ಯಗಳು,ತುಂಬಿಹರಿಯುತ್ತಿರುವ ಹಾಲಿನ ಕೊಡಗಳು,ಮೇಲಾಗಿ ತಮ್ಮ ಕುಲದೇವರಾದ ಶ್ರೀಹರಿಯ ಕೃಪ ಕಟಾಕ್ಷ ರಾಜ್ಯದ ಮೇಲಿತ್ತು.
ಶ್ರೀರಂಗಧಾಮನ ಅರಮನೆಯ ದಿನನಿತ್ಯದ ಕೆಲಸ ಆರಂಭವಾಗುತ್ತಿದ್ದದ್ದು,ತಮ್ಮ ಕುಲದೇವರಾದ ವಿಠಲನ ಪೂಜೆಯಿಂದ.ಅರ್ಚಕರು ಹೂವು,ತುಳಸಿ,ಗರಿಕೆಗಳು ಮೊದಲಾಗಿ ವಿಠಲನ ಪೂಜೆಯನ್ನು ಸಾಂಗವಾಗಿ ನೆರೆವೇರಿಸಿ,ಮಂಗಳಾರತಿಯ ಸಮಯಕ್ಕೆ ಸರಿಯಾಗಿ ಶ್ರೀರಂಗಧಾಮನು ಹಾಜರಾಗಿ ತೀರ್ಥ,ಪ್ರಸಾದಗಳನ್ನು ಸ್ವೀಕರಿಸಿ ಪ್ರಸನ್ನನಾಗುತ್ತಿದ್ದನು.
ಹೀಗೆ ಒಂದು ದಿನ ಶ್ರೀರಂಗಧಾಮನಿಗೆ ಅಂದು ತಾನೆ ವಿಠಲನ ಪೂಜೆ ನೆರೆವೇರಿಸಬೇಕೆಂದು ಬಯಕೆ ಹುಟ್ಟಿ,ಪ್ರಾತಕಾಲದಲ್ಲೇ ಎದ್ದನು.ಇಡಿ ಅರಮನೆಯೇ ಮಲಗಿತ್ತು,ಸ್ನಾನಾದಿಗಳನ್ನು ಮುಗಿಸಿ,ಅರಮನೆಯ ತೋಟಕ್ಕೆ ಪುಷ್ಪಾದಿಗಳನ್ನು ಕೊಯ್ಯಲು ಹೊರಟನು.ತನ್ನ ಸ್ಮಿತವದನದಿಂದ ಸಂಪಿಗೆಯನ್ನು ಕೇಳಿಕೊಂಡು ಹೂವನ್ನು ಕೀಳಲು ಹೋದಡೆ " ಅಯ್ಯಾ ರಾಜ,ಈ ನನ್ನ ಹೂವು ನಿನ್ನ ಆರಾಧ್ಯದೈವನ ಪೂಜೆಗಾದರೆ ,ನಾನು ಅನರ್ಹ.ದುಂಬಿಗಳು ನನ್ನ ಘ್ರಾಣವನ್ನು ಹೀರುವಾಗ ,ಎಂಜಲುಗಳನ್ನು ಬಿಟ್ಟಿವೆ.ಆದ್ದರಿಂದ ..."ಇದನ್ನು ಕೇಳಿದೊಡೆ ರಾಜನು ತುಸು ಸಿಟ್ಟಾಗಿ ಗರಿಕೆಯ ತೋಟಕ್ಕೆ ಹೋದನು.ಗರಿಕೆಯು ರಾಜನನ್ನು ಅಲ್ಲೇ ತಡೆದು " ರಾಜ,ನಾನು ನಿನಗೆ ಮೊದಲೇ ಕ್ಷಮೆ ಕೇಳುತ್ತೇನೆ.ನಿನ್ನ ಗೋಶಾಲೆಯಲ್ಲಿರುವ ಕೃಷ್ಣವೇಣಿಯೆಂಬ ಹಸುವು ಇನ್ನು ಹಡೆದು ಮೂರು ದಿನವೂ ಆಗಿಲ್ಲ.ಅವಳ ಇಲ್ಲೇ ಮೇಯಲು ಬಂದಿರುವಳು.ನಾನು ಆ
ಪುರುಡು ಸೂತಕದಿಂದ ಇನ್ನೂ ಹೊರಬಂದಿಲ್ಲ..." ರಾಜನು ಮತ್ತೆ ನಿರಾಶೆ ಹೊಂದಿ ಶ್ರೀಹರಿಯ ಪೂಜೆಗೆ ಸರ್ವಶ್ರೇಷ್ಠವಾದ ತುಳಸಿಯನ್ನು ತರಲು ತುಳಸಿವನದೆಡೆಗೆ ನಡೆದನು.
ಪುರುಡು ಸೂತಕದಿಂದ ಇನ್ನೂ ಹೊರಬಂದಿಲ್ಲ..." ರಾಜನು ಮತ್ತೆ ನಿರಾಶೆ ಹೊಂದಿ ಶ್ರೀಹರಿಯ ಪೂಜೆಗೆ ಸರ್ವಶ್ರೇಷ್ಠವಾದ ತುಳಸಿಯನ್ನು ತರಲು ತುಳಸಿವನದೆಡೆಗೆ ನಡೆದನು.
ತುಳಸಿವನದ ಬಾಗಿಲಲ್ಲಿ ಬಂದಾಗ ಅರಮನೆಯ ಪಂಡಿತರು ತುಳಸಿಯನ್ನು ಕೊಯ್ಯುತ್ತಿರುವುದು ಕಂಡಿತು.ಆಗ ರಾಜನಿಗೆ ಏನೋ ನೆನಪಾದಂತೆ "ಪಂಡಿತರ ತಾಯಿ ಸಾವನಪ್ಪಿ ಇನ್ನೂ ಹತ್ತು ದಿನದ ಸೂತಕವೂ ಮುಗಿದಿಲ್ಲ,ಅವರು ಈ ತುಳಸಿವನ್ನು ಮೈಲಿಗೆ ಮಾಡಿಬಿಟ್ಟರಲ್ಲ,ಇನ್ನು ಈ ತುಳಸಿದಳಗಳನ್ನು ವಿಠಲನಿಗೆ ಹೇಗೆ ಅರ್ಪಿಸಲಿ " ಎಂದು ಯೋಚಿಸಿ ವಿಠಲನಿಗೆ ಯಾವ ಪುಷ್ಪಾದಿಗಳು ಸಿಗಲಿಲ್ಲವಲ್ಲವೆಂದು ಯಾತನೆ ಪಡುತ್ತಿದ್ದನು.ತುಳಸಿ,ಗರಿಕೆ ,ಸಂಪಿಗೆ ಯಾವೂ ದೊರಕಲಿಲ್ಲ,ವಿಠಲನ ಪೂಜೆಯನ್ನು ಹೇಗೆ ಮಾಡಲಿ ಎಂದು ಕೊರಗುತ್ತಾ ಹತಾಶ ಭಾವದಿಂದ ಅಲ್ಲೇ ರೋಧಿಸುತ್ತಿದ್ದನು.
ಕೂಡಲೇ ಆ ಸಂದರ್ಭದಲ್ಲಿ ನಾರದರು ಪ್ರತ್ಯಕ್ಷರಾಗಿ ರಾಜನ ಯಾತನೆಗೆ ಕಾರಣವನ್ನು ಕೇಳಲು,ರಾಜನು ನಡೆದ ವೃತ್ತಾಂತವನ್ನೆಲ್ಲಾ ಹೇಳಲು,ನಾರದು ಒಂದು ಸಮಯೋಚಿತವಾದ ಸಲಹೆಯನ್ನು ಕೊಟ್ಟರು." ಅಯ್ಯಾ ರಾಜನೇ ,ನಿನ್ನ ರಾಜಧಾನಿಯ ಪಕ್ಕದಲ್ಲೆ ಗಂಗಾ ನದಿ ಹರಿಯುತ್ತಿದೆ,ಮುತ್ತೈದೆ ಸದಾ ಮಡಿ ಎನ್ನುವ ಹಾಗೆ ಗಂಗೆಗೆ ಕಟ್ಟಿಲ್ಲ.ಪರಶಿವನ ಜಡೆಯಲ್ಲಿ ಸ್ಥಾನ ಪಡೆದಿರುವ ಆ ತಾಯಿ ಮೈಲಿಗೆಯಾಗುವುದುಂಟೆ?ಹೋಗು ,ನಿನ್ನ ವಿಠಲನಿಗೆ ಅಭಿಷೇಕವನ್ನು ಮಾಡು,ಶ್ರೀಹರಿಯು ಸಂತೃಪ್ತನಾಗುವನು" ಎಂದು ಹೇಳಿದನು.

ಶ್ರೀರಂಗಧಾಮನು ನಾರದರು ಮಾತನ್ನು ಪಾಲಿಸಲು ಅರಮನೆಯ ದಿಕ್ಕಿಗೆ ಹೊರಟು , ಅರಮನೆಯಿಂದ ನೀರನ್ನು ತರಲು ಹೊರಟಿದ್ದ ಸುಹಾಸಿನಿಯರನ್ನು ಕುರಿತು " ತಾರಕ್ಕ ಬಿಂದಿಗೆ ,ನಾ ನೀರಿಗೆ ಹೋಗುವೆ " ಎಂದು ಕೇಳಲು ಸುಹಾಸಿನಿಯರು ಏತಕ್ಕಾಗಿ ಎಂದು ಪ್ರಶ್ನಿಸಲು " ಪುರಂದರವಿಠಲನಿಗೆ ಅಭಿಷೇಕ ಮಾಡಲು " ಎಂದು ಹೇಳಿ ಗಂಗಾ ನದಿಯೆಡೆಗೆ ನಡೆದನು.
ಮನವು ಸಂತೃಪ್ತಿಯಾಗುವವರೆಗೂ ಅಭಿಷೇಕವನ್ನು ಸಾಂಗವಾಗಿ ನೆರೆವೇರಿಸಿದನು.
"ಶ್ರೀಕೃಷ್ಣಾರ್ಪಣ ಮಸ್ತು "
ಅಭಿಲಾಷ್ ಟಿ ಬಿ
ತಿಪಟೂರು
ತಿಪಟೂರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ