ಬೆಳದಿಂಗಳ ಬಾಲೆ...
ಹುಣ್ಣಿಮೆ ಚಂದಿರನು ಬಾನಲ್ಲಿ ಬಂದಿಹನು|
ಇನ್ನೂ ಎಲ್ಲಿ ಅಡಗಿ ಕುಳಿತಿರುವೆ ಬಾಲೆ||
ಗಾಳಿಯಲ್ಲಿ ಎಲ್ಲೋ ತೇಲಿ ಬರುತಿದೆ ನಿನ್ನ ಉಸಿರು|
ನೀನು ಕಣ್ಣು ಮಿಟುಕಿಸುತ್ತಿರುವ ಸದ್ದೂ ಕೇಳುತಿಹುದು||
ಬಾನಿನ ತುಂಬ ಹಾಲನ್ನು ಚೆಲ್ಲಿಹನು ಚಂದಿರನು||
ಬಣ್ಣ ಬಣ್ಣದ ಚಿಟ್ಟೆಯಂತೆ ಹಾರಾಡುವ ಬಾರೆ ಬಾಲೆ||
ನಿನ್ನ ಜಡೆಗಾಗಿ ಕಾಯುತಿಹುದು ಮಲ್ಲಿಗೆಮೊಗ್ಗು|
ನನ್ನ ಕಣ್ಣುಗಳೂ ತವಕಿಸುತಿಹುದು|
ಭಾವ ಭಾವಗಳ ಬಂಧನವೇ ಮೇಲೆಂದು ಕೂರುವುದು ಸರಿಯೇ|
ಜೊತೆಯಲ್ಲಿ ಕೈಹಿಡಿದು ಕುಣಿಯೋಣ ಬಾರೆ ಬಾಲೆ,ಬೆಳದಿಂಗಳ ಬಾಲೆ||
ಅಭಿಲಾಷ್ ಟಿ ಬಿ
ತಿಪಟೂರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ