ಕೊಳಲ ಊದುತ್ತಾ ಬಂದನು ,ರಂಗಯ್ಯಾ...
ಕೊಳಲ ಊದುತ್ತಾ ಬಂದನು,ರಂಗಯ್ಯ|
ದಾಸರು ಕರೆದೊಡೆ||
ಪರಿ ಪರಿಯಾಗಿ ಬೇಡಿದ ದಾಸರು|
ಪದುಮನಾಭನ ಮೂರುತಿಗೆ ಪುಷ್ಪವ ಅರ್ಪಿಸಿದರು|
ಪಕ್ಷಿರಾಜ ಕೂಡೆ ಭಿನ್ನಹವ ಕಳಿಸಿದರು|
ಪಾರ್ಥಸಾರಥಿಗಾಗಿ ಗುಡಿ ಗುಡಿ ಅಲೆದರು||
ಕುಟ್ಟಿದರು ಅವಲಕ್ಕಿಯ ಆತಗೆ ಪ್ರಿಯವೆಂದು|
ಬೆಣ್ಣೆ,ಮೊಸರು ಗಡಿಗೆಗಳ ಸಾಲಗಿ ತುಂಬಿದರು ||
ಕಮಲನಾಭಗೆ ಕಾದು ಕಾದು ,ಕಂಬಕ್ಕೆ ಒರಗಿದರು||
ಕಂಬದ ಮರೆಯಿಂದ ಕೊಳಲ ಊದುತ್ತಾ ಓಡಿಬಂದನು||
ಅಭಿಲಾಷ್ ಟಿ ಬಿ
ತಿಪಟೂರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ