ಮಂಗಳವಾರ, ಏಪ್ರಿಲ್ 25, 2017

ಹೇಮಾದ್ರಿ

ಕವಿತೆ: ಹೇಮಾದ್ರಿ






ಹೇಮಾದ್ರಿ ಪರ್ವತದ ಹಸಿರ ಸಾಲು |
ತಪ್ಪಲಲ್ಲಿ ನೂರು ಮನೆಯ ದ್ಯಾವನೂರು||
ಮಲ್ಲಿಕಾರ್ಜುನ ಬೀದಿ ದಾಟಿದರೆ ಹತ್ತೇ ಹತ್ತು ಹೆಜ್ಜೆ|
ಹೇಮಾವತಿಯ ಹೊಳೆ ದಂಡೆಯ ವಾಗಧೀಶ್ವರಿಯ ಸನ್ನಿಧಿ ||
ಹೇಮಾದ್ರಿಯ ಮರೆಯಿಂದ ಬೆಳಗುವ ಸೂರ್ಯ|
ಮೊದಲು ಸ್ಪರ್ಶಿಸುವುದೇ ವಾಗಧಿಶ್ವರಿಯ ಕಲ್ಲಿನ ಕಳಸವ||
ನೋಡುವವರಿಗೆ ಅದೊಂದು ಸೋಜಿಗವೇ ಸರಿ|
ಕಲ್ಲಿನ ಕಳಸಕ್ಕೆ ಕನಕ ಲೇಪನ ಮಾಡುವ ಭಾಸ್ಕರನ ಚಮತ್ಕಾರವ ||
ಗರ್ಭಗುಡಿಯಲ್ಲಿ ಕಾಣುವುದು ಇನ್ನೆಷ್ಟು |
ನಂದಾದೀಪದಂತೆ ಉರಿಯುತ್ತಿರುವ ಎರಡು ಸೊಡರುಗಳಲ್ಲಿ ||
ಒಂದರಲ್ಲಿ ಓಲೆ ,ಬಿದಿಗೆ ಚಂದ್ರ ,ಇನ್ನೊಂದರಲ್ಲಿ ಮೂಗುತಿ|
ಸೂಕ್ಷ್ಮ ಕಣ್ಣುಗಳಿಗೆ ವೀಣೆ,ಗಿಣಿ,ತಾಳೆಗರಿಗಳು ಕಂಡಾವು||
ಒಂದು ಕೊಡ ಹೇಮಾವತಿ ,ಜೊಯಿಸರ ಮನೆಯ ಗುಡಾನ್ನ|
ಹೇಮಾದ್ರಿಯ ಕಾಡು ಮಲ್ಲಿಗೆ,ಕಾಡು ಸಂಪಿಗೆ ಬಹಳಷ್ಟು ಇವಳ ಪೂಜೆಗೆ||
ದನ ಹಿಡಿದು ಹೇಮಾದ್ರಿಯ ಕಡೆಗೆ ಹೊರಟ ಮಂದಿಗೆ|
ಒಂದಿಷ್ಟು ಗುಡಾನ್ನ ಕೊಟ್ಟರೆ ,ಬೆಳಗಿನ ತನಕ ಚಿಂತೆಯಿಲ್ಲ ಜೋಯಿಸರಿಗೆ||
ಇವೆಲ್ಲವೂ ಆ ಕಾಲಕ್ಕೆ,ಈ ಕಾಲಕ್ಕೆ ಏನಾಗಿದೆ?
ಹೇಮಾದ್ರಿಗೆ ಗಣಿಗಾರಿಕೆಯ ಭೂತ ಅಂಟಿಕೊಂಡಿದೆ||
ಹೇಮಾವತಿ ಹೈರಾಣಾಗಿದ್ದಾಳೆ,ಹಸಿರ ಕೋಟೆ ಲೂಟಿಯಾಗೋಗಿದೆ|
ವಾಗಧೀಶ್ವರಿ ಸಮೇತವಾಗಿ ದ್ವಾವನೂರೇ ಕೆಂಪೇರಿದೆ||
ಅಭಿಲಾಷ್ ಟಿ ಬಿ
ತಿಪಟೂರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ