ಬಲ್ಲನೇ ಬಲ್ಲ ಗುರುರಾಯರ ಸೇವೆಯ ಫಲವ.......
|| ಶ್ರಿ ರಾಘವೇಂದ್ರ ನಮ: ||
|| ಶ್ರಿ ರಾಘವೇಂದ್ರ ನಮ: ||
ನಾಡಿ ನಾಡಿಯು ನುಡಿಯುತ್ತಿದೆ ನಾರಾಯಣ ನಾಮವ|
ದಮನಿ ದಮನಿಗಳೂ ಧ್ಯಾನಿಸುತಿದೆ ಮಂತ್ರಾಲಯದ ಯತಿಯ||
ದಮನಿ ದಮನಿಗಳೂ ಧ್ಯಾನಿಸುತಿದೆ ಮಂತ್ರಾಲಯದ ಯತಿಯ||
ಎಳೆಯ ಹಸುಗೂಸು ತಾಯಿಯ ಅರಸುವ ಹಾಗೆ|
ದೀನ ಜನರೆಲ್ಲ ನಿನ್ನ ಅರಸಿ ಬಂದಿಹರು||
ಚಂದ್ರಪ್ರಭೆಯಷ್ಟೆ ತಂಪಾಗಿರುವುದು ನೀನಿರುವ ಸ್ಥಾನವು|
ಧೈನ್ಯದಿಂದಲಿ ಬೇಡುವೇ ಸಲಹೋ ಯತಿರಾಯನೇ||
ದೀನ ಜನರೆಲ್ಲ ನಿನ್ನ ಅರಸಿ ಬಂದಿಹರು||
ಚಂದ್ರಪ್ರಭೆಯಷ್ಟೆ ತಂಪಾಗಿರುವುದು ನೀನಿರುವ ಸ್ಥಾನವು|
ಧೈನ್ಯದಿಂದಲಿ ಬೇಡುವೇ ಸಲಹೋ ಯತಿರಾಯನೇ||
ಸಾಗರದ ಆಳವ ಅಳೆಯುವುದುಂಟೇನು?|
ನಿನ್ನ ಮಹಿಮಾಗುಣಗಳಲ್ಲಿ ಸತ್ಯವ ಶೋಧಿಸುವುದುಂಟೇನು?||
ರಾಘವೇಂದ್ರ ಎನ್ನುವ ನಾಮವ ಬಿಟ್ಟು ಬೇರೇನು ನಾ ಬಲ್ಲೇನು|
ಬಲ್ಲನೇ ಬಲ್ಲ ಗುರುರಾಯರ ಸೇವೆಯ ಫಲವ||
ನಿನ್ನ ಮಹಿಮಾಗುಣಗಳಲ್ಲಿ ಸತ್ಯವ ಶೋಧಿಸುವುದುಂಟೇನು?||
ರಾಘವೇಂದ್ರ ಎನ್ನುವ ನಾಮವ ಬಿಟ್ಟು ಬೇರೇನು ನಾ ಬಲ್ಲೇನು|
ಬಲ್ಲನೇ ಬಲ್ಲ ಗುರುರಾಯರ ಸೇವೆಯ ಫಲವ||
ಅಭಿಲಾಷ್ ಟಿ ಬಿ
ತಿಪಟೂರು
ತಿಪಟೂರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ