ದೇವರು ಹಚ್ಚಿದ ದೀಪಗಳು
ಪ್ರಿಯ ಓದುಗರೆ.
ಇದು ನಿಮಗೆ ಗೊತ್ತಿರುವಂತಹ ವಿಷಯವೇ.ನಾವು ವಾಸಿಸುತ್ತಿರುವ ಈ ಭೂಮಂಡಲವು ಸೇರಿ ಇಡೀ ಜಗತ್ತೇ ಕತ್ತಲೆಯಿಂದ ಆವರಿಸಿತ್ತು .ಆದ್ದರಿಂದ ಒಂದು ದಿನ ನವಗ್ರಹಗಳಾದ ಗುರು,ಶನಿ,ಭೂಮಿ ಎಲ್ಲವೂ ಸೇರಿ ಭಗವಂತನನ್ನು ನಮ್ಮನ್ನು ಕತ್ತಲೆಯಿಂದ ಬೆಳಕಿನೆಡೆಗೆ ಸಾಗಿಸು ಎಂದು ಮೊರೆಯಿಟ್ಟವು.ನವಗ್ರಹಗಳ ಬೇಡಿಕೆಗಳ ಮೇರೆಗೆ ಭಗವಂತನು ಒಂದು ಪುಟ್ಟ ಮಣ್ಣಿನ ಹಣತೆಯಲ್ಲಿ ನಂದಾದೀಪವನ್ನು ಬುಧಗ್ರಹದ ಮುಂದೆ ಹಚ್ಚಿ ಇಟ್ಟನು .ನಂದಾದೀಪವು ಪ್ರಕಾಶಮಾನವಾಗಿ,ಸೌಮ್ಯವಾಗಿ ತನ್ನ ಕಿರಣಗಳನ್ನು ಸೂಸುತ್ತಿತ್ತು.ಹೀಗಿರುವಾಗ ಒಂದು ದಿನ ಶನಿದೇವನು ಭಗವಂತನಲ್ಲಿಗೆ ಹೋಗಿ " ಅಯ್ಯಾ ಪರಮಾತ್ಮ,ನೀನು ದೀಪವನ್ನೆನೊ ಹಚ್ಚಿದೆ,ಆದರೆ ಅದು ಆಷ್ಟು ಪ್ರಕಾಶಮಾನವಾಗಿ ಇರುವಂತೆ ಕಾಣುತ್ತಿಲ್ಲ.ಮೇಲಾಗಿ ಎಲ್ಲಾ ಬೆಳಕನ್ನು ಬುಧ,ಶುಕ್ರ,ಭೂಮಿಗಳೆ ತಿನ್ನುತ್ತಿವೆ,ನಮಗೆ ಅಲ್ಪ ಪ್ರಮಾಣದಲ್ಲಿ ಸಿಗುತ್ತದೆ" ಎಂದು ಗೋಳಿಟ್ಟಿತು.ಶನಿಯ ಮಾತು ಭಗವಂತನಿಗೆ ಸತ್ಯವೆನಿಸಿ ಮೊದಲು ಹಚ್ಚಿದ್ದ ದೀಪದಂತೆ ಅಂತಹ ಸಾವಿರಾರು ದೀಪಗಳನ್ನು ಹಚ್ಚಿದನು.

ಅಷ್ಟೂ ದೀಪಗಳು ಚೆನ್ನಾಗಿ ಉರಿಯುತ್ತಿದ್ದವು ಮತ್ತು ಎಲ್ಲಾ ಗ್ರಹಗಳಿಗೂ ಸಮಾನವಾಗಿ ಬೆಳಕು ದೊರೆಯುತ್ತಿತು.ಆದರೆ ಒಂದು ದಿನ ದೀಪಗಳ ನಡುವೆ ಏನೋ ಕಾರಣಕ್ಕೆ ಮನಸ್ತಾಪ ಉಂಟಾಗಿ ದೀಪಗಳ ಮನಸ್ಸು ಛಿದ್ರ,ಛಿದ್ರ ವಾಯಿತು.ನೂರಾರು ಸಂಘಗಳು ಪ್ರಾರಂಭವಾಯಿತು." ಮಣ್ಣಿನ ಹಣತೆಗಳ ಸಂಘ,ಪಿಂಗಾಣಿ ಹಣತೆಗಳ ಸಂಘ,ಶನಿನಾಯಕ ಸಂಘ,ಬೆಳ್ಳಿ ದೀಪಗಳ ಕ್ಷೇಮಾಭಿವೃದ್ದಿ ಸಂಘ " ಹೀಗೆ ಹತ್ತು ಹಲವು ಸಂಘಗಳು ಹುಟ್ಟುಕೊಂಡವು.ಸಂಘಗಳ ಮಧ್ಯೆ ವಿರಸ ಹೆಚ್ಚಾಗುತ್ತಾ ಹೋಯಿತು.ಒಂದು ಸಂಘದ ದೀಪಗಳು ಉರಿಯುತ್ತಿದ್ದರೆ,ಇನ್ನೊಂದು ಸಂಘದ ದೀಪಗಳು ನಂದಿ ಹೋಗುತ್ತಿದ್ದವು.ಈ ಜಗಳದಿಂದ ನವಗ್ರಹಗಳಿಗೆ ಒಮ್ಮೊಮ್ಮೆ ಬೆಳಕೇ ಇಲ್ಲದಂತಾಗಿತ್ತು ಹಾಗೂ ಈ ವಿಷಯ ಭಗವಂತನಲ್ಲಿಗೂ ಮುಟ್ಟಿತ್ತು.
ಭಗವಂತನು ಎಲ್ಲಾ ಸಂಘಗಳ ನಾಯಕರನ್ನು ಕರೆದು ಸಂಧಾನ ನಡೆಸಿದನು.ಅದೂ ವಿಫಲವಾಯಿತು.ಜೊತೆಗೆ ಮೊದಲು ಹಚ್ಚಿದ್ದ ನಂದಾದೀಪವು ಕೂಡ ಸಂಧಾನ ನಡೆಸಿತು.ಅದೂ ವಿಫಲವಾಯಿತು.ಆದ್ದರಿಂದ ಭಗವಂತ ಒಂದು ನಿಶ್ಚಯಮಾಡಿಕೊಂಡು ನಂದಾದೀಪದ ನಂತರ ಹಚ್ಚಿದ್ದ ದೀಪಗಳನೆಲ್ಲ ನವಗ್ರಹಗಳಿಂದ ದೂರ ಸರಿಸಿದನು.ನಂದಾದೀಪದ ಶಕ್ತಿ ಯನ್ನು ಸಾವಿರ ಪಟ್ಟು ಹೆಚ್ಚಿಸಿದನು.ಇದರಿಂದ ಜಗಳವು ನಿಂತಿಹೋಯಿತು ಹಾಗೂ ಎಲ್ಲಾ ಗ್ರಹಗಳಿಗೂ ಬೆಳಕು ದೊರೆಯುತ್ತಿತ್ತು.
ಇನ್ನೂ ಒಂದು ತಮಾಷೆ ಗೊತ್ತಾ? ಆ ನಂದಾದೀಪವೇ ನಮ್ಮ ಸೂರ್ಯ ,ಆ ಜಗಳವಾಡಿದ ದೀಪಗಳೆ ಮಿನುಗುವ ನಕ್ಷತ್ರಗಳು.ಈಗಲೂ ಅಷ್ಟೆ ,ನಕ್ಷತ್ರಗಳು ಜಗಳವಾಡುತ್ತಿರುತ್ತಂತೆ,ಆದರೆ ಸೂರ್ಯ ಮಾತ್ರ ಏನೂ ಮಾತಾಡಲ್ವಂತೆ.
ಆದ್ದರಿಂದ ನಾವು ಬೆಳಗುವ ಸೂರ್ಯನಾಗಬೇಕು ಹೊರತು ಮಿನುಗುವ ನಕ್ಷತ್ರಗಳಾಗಬಾರದು.
ಶುಭಮಸ್ತು
ಅಭಿಲಾಷ್ ಟಿ ಬಿ
ತಿಪಟೂರು
ತಿಪಟೂರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ