ಮಲ್ಲಿಗೆಯ ಮಾತು....
" ಅಮ್ಮಾ ಮಲ್ಲಿಗೆಯ....ನೀನು ನನ್ನ ಹುಡುಗಿಯ ಜಡೆಯಲ್ಲಿ ಇದ್ದರೂ ಬತ್ತುವೆ,ನನ್ನ ತಾಯಿ,ಅಜ್ಜಿ ಮುಡಿದರೂ ಅಷ್ಟೆ,ತಾಯಿ ಶಾರದಮ್ಮನವರ ಪಾದಗಳಿಗೆ ಪೂಜಿಸಿದರೂ ಅಷ್ಟೆ.ಸುಮ್ಮನೆ ನೀನು ಹುಟ್ಟಿರುವ ಈ ಹಸಿರ ಬಳ್ಳಿಯಲ್ಲೆ ಯಾಕೆ ಸೊರಗಬಾರದು.."
" ಅಯ್ಯಾ,ಮಾನವ..ನಿನ್ನ ಹುಡುಗಿಯ ಜಡೆಯಲ್ಲಿ ನಾನು ಹೋದರೆ ನೀನು ನನ್ನನ್ನು ಪ್ರೀತಿಯ ಭಾವನೆಯಿಂದ ,ಅದೇ ನಿನ್ನ ಅಜ್ಜಿ , ತಾಯಿಯ ಜಡೆಯಲ್ಲಿ ಇದ್ದರೆ ವಾತ್ಸಲ್ಯದಿಂದ ಮತ್ತು ಆ ಜಗದಂಬೆಯ ಪಾದಗಳಲ್ಲಿ ಇದ್ದರೆ ಭಕುತಿಯ
ಭಾವದಿಂದ ನೋಡುತ್ತಿಯಾ,ಅದೇ ಈ ಬಳ್ಳಿಯಲ್ಲಿ ಇದ್ದರೆ ಮಾನವನು ಸೌಹಾರ್ದಯುತವಾಗಿ ಬಾಳಲು ಬೇಕಾಗಿರುವ ಪ್ರೀತಿ,ವಾತ್ಸಲ್ಯ,ಭಕ್ತಿ ಭಾವಗಳು ಉಂಟಾಗುತ್ತಿದ್ದವೆ? ಜಗತ್ತು ಸೌಖ್ಯವಾಗಿರಲು ನನ್ನದೂ ಒಂದು ಕೊಡುಗೆಯಷ್ಟೆ "
ಭಾವದಿಂದ ನೋಡುತ್ತಿಯಾ,ಅದೇ ಈ ಬಳ್ಳಿಯಲ್ಲಿ ಇದ್ದರೆ ಮಾನವನು ಸೌಹಾರ್ದಯುತವಾಗಿ ಬಾಳಲು ಬೇಕಾಗಿರುವ ಪ್ರೀತಿ,ವಾತ್ಸಲ್ಯ,ಭಕ್ತಿ ಭಾವಗಳು ಉಂಟಾಗುತ್ತಿದ್ದವೆ? ಜಗತ್ತು ಸೌಖ್ಯವಾಗಿರಲು ನನ್ನದೂ ಒಂದು ಕೊಡುಗೆಯಷ್ಟೆ "
ಅಭಿಲಾಷ್ ಟಿ ಬಿ
ತಿಪಟೂರು
ತಿಪಟೂರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ