ಅಜ್ಜಿ ಹೇಳಿದ ಕಥೆ: ನೂರ ಒಂದು ಗಿಣಿಗಳು
ಒಂದಾನೊಂದು ಕಾಲದಲ್ಲಿ ಸುಮಂತ ಎಂಬ ದೊಡ್ಡ ರಾಜ್ಯವಿತ್ತು.ಆ ರಾಜ್ಯದ ದಕ್ಷಿಣಕ್ಕೆ ದೊಡ್ಡ ಅರಣ್ಯವೊಂದಿತ್ತು.ಅಲ್ಲಿ ಹುಲಿ,ಚಿರತೆ,ಆನೆ,ಜಿಂಕೆಗಳೆಲ್ಲವು ಇದ್ದವು.ಆ ಕಾಡಿನಲ್ಲಿ ಒಂದು ನದಿಯೂ ಹರಿಯುತ್ತಿತ್ತು.
ಆ ನದಿಯ ದಂಡೆಯಲ್ಲಿ ತುಂಬಾ ದೊಡ್ಡದಾಗಿ ಬೆಳೆದಿದ್ದ ಮಾವಿನ ಮರ ಮತ್ತು ಹುಣಸೆ ಮರವೊಂದಿತ್ತು.ಮಾವಿನ ಮರದಲ್ಲಿ ತುಂಬಾ ಹಣ್ಣುಗಳಿದ್ದವು ಹಾಗೂ ಆ ಮರದಲ್ಲಿ ನೂರ ಒಂದು ಗಿಣಿಗಳು ವಾಸವಾಗಿದ್ದವು.ಆದರೆ ಆ ಗಿಣಿಗಳಿಗೆ ಒಂದು ತೊಂದರೆಯೂ ಇತ್ತು.ಆ ಗಿಣಿಗಳಿಗೆ ಒಂದಕ್ಕೆ ಕಿವಿ ಕೇಳದಿದ್ದರೆ,ಇನ್ನೊಂದಕ್ಕೆ ಕಣ್ಣು ಕಾಣುತ್ತಿರಲಿಲ್ಲ.ಒಂದು ಕುಂಟ ಗಿಣಿಯಾಗಿದ್ದರೆ,ಇನ್ನೊಂದಕ್ಕೆ ಮಾತನ್ನೇ ಆಡಲು ಬರುತ್ತಿರಲಿಲ್ಲ.ಒಟ್ಟಿನಲ್ಲಿ ಗಿಣಿಗಳೆಲ್ಲವು ವಿಕಲಚೇತನ ಗಿಣಿಗಳಾಗಿದ್ದವು.

ನೀವೂ ಯೋಚನೆ ಮಾಡುತ್ತಿರಬಹುದು.ಗಿಣಿಗಳು ವಿಕಲಚೇತನರಾಗಿರುವಾಗ ಅವುಗಳಿಗೆ ಊಟವನ್ನು ಹೇಗೆ ಹುಡುಕುತ್ತಿದ್ದವು ಎಂದು? ಅಲ್ವಾ..
ಆ ಗಿಣಿಗಳ ಜೊತೆಗೆ ಒಂದು ಹುಡುಗಿಯೂ ವಾಸವಾಗಿದ್ದಳು.ಅವಳು ರೂಪವತಿಯೂ,ಸುಂದರವಾಗಿಯೂ ಇದ್ದಳು.ಅವಳು ಪ್ರತಿದಿನವು ಗಿಣಿಗಳನ್ನು ನಿಧಾನವಾಗಿ ಕಾಡಿನೆಲಲ್ಲ ಸುತ್ತಾಡಿಸಿಕೊಂಶು ಹಣ್ಣುಗಳನ್ನು ತಿನ್ನಿಸಿಕೊಂಡು ಬರುತ್ತಿದ್ದಳು.ಒಟ್ಟಿನಲ್ಲಿ ಹುಡುಗಿಗೆ ಗಿಣಿಗಳೆಂದರೆ ಪಂಚಪ್ರಾಣ .ಹಾಗೆನೆ ಗಿಣಿಗಳೂ ಕೂಡ ಹುಡುಗಿಯನ್ನು ಅಷ್ಟೆ ಪ್ರೀತಿಸುತ್ತಿದ್ದವು.
ಹೀಗೆ ಗಿಣಿಗಳೊಡನೆ ಸುಖವಾಗಿ ಜೀವನ ನಡೆಸುತ್ತಿದ್ದ ಹುಡುಗಿಗೆ ಒಂದು ವಿಪತ್ತು ಒದಗಿತು.ಮಾವಿನ ಮರದ ಪಕ್ಕದಲ್ಲೆ ಇದ್ದ ಹುಣಸೆಮರಕ್ಕೆ ಒಂದು ರಾಕ್ಷಸಿಯೊಂದು ಬಂದು ಸೇರಿಕೊಂಡಿತು.ಆ ರಾಕ್ಷಸಿಗೆ ಹುಡುಗಿಯ ಸೌಂದರ್ಯವನ್ನು ಕಂಡು ತುಂಬಾ ಹೊಟ್ಟೆ ಕಿಚ್ಚು ಇತ್ತು ಮತ್ತು ಗಿಣಿಗಳು ಕೂಡ ಆ ರಾಕ್ಷಸಿಯನ್ನು ಮಾತಾನಾಡಿಸುತ್ತಿರಲಿಲ್ಲ.ಆದ್ದರಿಂದ ರಾಕ್ಷಸಿಯು ಹುಡುಗಿಯನ್ನು ಕೊಲ್ಲಬೇಕೆಂದು ನಿರ್ಧರಿಸಿದಳು.
ಹೀಗೆ ಒಂದು ದಿನ,ರಾಕ್ಷಸಿಯು ಒಂದು ಘಮ ಘಮವೆನ್ನುವ ಹೂವೊಂದನ್ನು ತಂದು
" ಬಾಲೆ,ಈ ಹೂವು ಶ್ರೀರಾಮನು ವನವಾಸದಲ್ಲಿದ್ದಾಗ ಸೀತಾದೇವಿಗೆ ಈ ಹೂವನ್ನು ಮುಡಿಸಿದ್ದನಂತೆ.ಈ ಅಂದವಾದ ಹೂವನ್ನು ನಿನ್ನಂತ ಚೆಲುವೆಯೇ ಮುಡಿಯ ಬೇಕು " ಎಂದು ಹೇಳಿ ರಾಕ್ಷಸಿ ಹುಡುಗಿಗೆ ಹೂವನ್ನು ಕೊಟ್ಟಳು.

ಹೂವನ್ನು ಹುಡುಗಿ ಮುಡಿದೆಡೆ ಮೂರ್ಛೆ ಹೋಗಿ ಬಿದ್ದುಬಿಟ್ಟಳು.ರಾಕ್ಷಸಿಯು ಜೋರಾಗಿ ನಗುತ್ತಾ " ಏ ಗಿಣಿಗಳಾ ,ನಿಮ್ಮ ಹುಡಿಗಿ ಸತ್ತು ಹೋದಳು.ಇನ್ನು ಈ ಕಾಡಿಗೆ ನಾನೆ ಸೌಂದರ್ಯವತಿ.ಹೋಗಿ ಈ ಹುಡುಗಿಯನ್ನು ನದಿಗೆ ಎಸಿಯಿರಿ ." ಎಂದು ಹೇಳಿ ಹುಣಸೆಮರವನ್ನು ಹೊಕ್ಕಳು.ರಾಕ್ಷಸಿಯ ಮಾತನ್ನು ನಂಬಿದ ಗಿಣಿಗಳು ಬಹಳ ಗೋಳಿಟ್ಟವು.ಕೆಲವು ತುಂಬಾ ಅತ್ತರೆ ಕೆಲವು ಮೂರ್ಛೆ ಹೋದವು.
ಎಲ್ಲಾ ಗಿಣಿಗಳು ಏನು ಮಾಡುವುದೆಂದು ಯೋಚಿಸಿ ಒಂದು ಪೆಟ್ಟಿಗೆಯನ್ನು ಸಿದ್ಧಪಡಿಸಿ ಅದರೊಳಗೆ ಹುಡುಗಿಯ ದೇಹವನ್ನು ಇಟ್ಟು ನದಿಯಲ್ಲಿ ತೇಲಿಬಿಟ್ಟರು.ಪೆಟ್ಟಿಗೆ ತೇಲಿಹೋಗುತ್ತಿದ್ದನ್ನು ನೋಡಿತ್ತಿದ್ದ ಗಿಣಿಗಳು ಬಹಳ ಗೋಳಿಟ್ಟವು,ರಾಕ್ಷಸಿಯನ್ನು ಶಪಿಸಿದವು.

ಸುಮಂತ ದೇಶದ ರಾಜಕುಮಾರನು ಒಂದು ದಿನ ಬೇಟೆಗೆಂದು ಕಾಡಿಗೆ ಹೋಗಿದ್ದನು.ಅವನು ನದಿಯ ದಂಡೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾಗ ನದಿಯಲ್ಲಿ ಪೆಟ್ಟಿಗೆ ಬರುವುದನ್ನು ನೋಡಿದನು.ಒಡನೆಯೇ ತನ್ನ ಕಾವಲು ಭಟರಿಗೆ ಆ ಪೆಟ್ಟಿಗೆಯನ್ನು ನಿಲ್ಲಿಸಿ ತರಲು ಹೇಳಿದನು.ದಡಕ್ಕೆ ತಂದ ಪೆಟ್ಟಿಗೆಯನ್ನು ತೆಗೆದ ರಾಜಕುಮಾರನಿಗೆ ಆಶ್ಚರ್ಯವೇ ಕಾದಿತ್ತು.ಸುಂದರವಾದ ಚೆಲುವೆ ಪೆಟ್ಟಿಗೆಯಲ್ಲಿ ನಿದ್ರಿಸುತ್ತಿದ್ದಳು.
ಮೂರ್ಛೆ ಹೋಗಿದ್ದ ಚೆಲುವೆ ಸ್ವಲ್ಪ ಸಮಯದ ನಂತರ ಎಚ್ಚರಗೊಂಡಳು.ಎದುರಿಗಿದ್ದ ರಾಜಕುಮಾರನನ್ನು ಕಂಡು ಸ್ವಲ್ಪ ಗಲಿಬಿಯಾದಳು.ಹುಡುಗಿಯು ಎಷ್ಟು ಸುಂದರವಾಗಿದ್ದಳೋ,ಅದೇ ರೀತಿಯಲ್ಲೇ ಸುಮಂತ ದೇಶದ ರಾಜನೂ ಸುಂದರವಾಗಿದ್ದನು.ಇಬ್ಬರ ನಡುವೆ ಪ್ರೇಮದ ಮೊಳಕೆ ಒಡೆಯಿತು ಹಾಗೂ ಇಬ್ಬರೂ ತಮ್ಮ ಜೀವನದ ವೃತ್ತಾಂತವನ್ನು ಹಂಚಿಕೊಂಡರು.
ರಾಜಕುಮಾರನು ಹುಡುಗಿಯನ್ನು ಕುರಿತು
" ಏಲೈ ಬಾಲೆ,ನೀನು ನನ್ನ ಪಟ್ಟದರಾಣಿಯಾಗ ಬೇಕೆಂದು ನಾನು ಬಯಸುತ್ತೇನೆ " ಎಂದು ಹೇಳಲು ,ಹುಡುಗಿಯು ರಾಜಕುಮಾರನನ್ನು ಕುರಿತು "ನನ್ನದು ಏನು ಅಭ್ಯಂತರವಿಲ್ಲ.ಆದರೆ ನನ್ನದೊಂದು ಷರತ್ತು ಇದೆ .ನಾನು ನಿನ್ನನ್ನು ವಿವಾಹವಾಗಬೇಕೆಂದರೆ ನಾನು ವಾಸಿಸುತ್ತಿದ್ದ ಕಾಡಿನಲ್ಲಿದ್ದ ರಾಕ್ಷಸಿಯನ್ನು ಕೊಲ್ಲಬೇಕೆಂದು,ಹಾಗೂ ತನ್ನ ಜೊತೆಯಲಿದ್ದ ಗಿಣಿಗಳನ್ನು ಅರಮನೆಯ ಉದ್ಯಾವನದಲ್ಲಿ ವಾಸಿಸಲು ಅನುಮತಿ ಕೊಡಬೇಕೆಂದು " ಕೇಳಿದಳು.

ಇದಕ್ಕೆ ಸಮ್ಮತಿಸಿದ ರಾಜಕುಮಾರನು ತನ್ನ ಭಟರೊಂದಿಗೆ ಮಾವಿನಮರದೆಡೆಗೆ ಬಂದನು.ರಾಕ್ಷಸಿಗೂ ,ರಾಜಕುಮಾರನಿಗೂ ಘೋರವಾದ ಯುದ್ಧ ನಡೆಯಿತು.ಆದರೂ ರಾಕ್ಷಸಿ ಸಾಯಲಿಲ್ಲ.ಕೊನೆಗೆ ಕಾರ್ತಿಕಕುಮಾರನು ತನ್ನ ಬತ್ತಳಿಕೆಯಿಂದ " ಶ್ರೀರಾಮ ಬಾಣ" ವನ್ನು ಪ್ರಯೋಗಿಸಿದನು.ಒಡನೆಯೆ ರಾಕ್ಷಸಿಯು ಸುಟ್ಟು ಭಸ್ಮವಾಗಿ ಹೋದಳು.
ರಾಜಕುಮಾರನು ಹುಡುಗಿಯ ಜೊತೆ ತನ್ನ ರಾಜಧಾನಿ ಕಡೆಗೆ ಹೊರಟವು.ರಾಜಕುಮಾರನ ಜೊತೆ ನೂರ ಒಂದು ಗಿಣಿಗಳೂ ಅರಮನೆಯ ಉದ್ಯಾನವನಕ್ಕೆ ಹೋದವು.ಹೆಸರಿಲ್ಲದ ಹುಡುಗಿಗೆ ರಾಜಕುಮಾರನು ಅಶ್ವಿನಿಯೆಂದು ಹೆಸರಿಟ್ಟನು.ಗಿಣಿಗಳು " ಮಾಂಗಲ್ಯ ತಂತು ನಾನೇನ " ಅಂತ ಹುಡುಗಿಯನ್ನು ಅಣುಕಿಸಲು ಆರಂಭಿಸಿದವು.ಅಶ್ವಿನಿಯೂ ಸುಮಂತ ದೇಶದ ರಾಜನಾದ ಕಾರ್ತಿಕಕುಮಾರನ ಪಟ್ಟದ ರಾಣಿಯಾದಳು.
ಅಭಿಲಾಷ್ ಟಿ ಬಿ
ತಿಪಟೂರು
( ಮೂಲ ಕಥೆ : ನನ್ನ ಅಜ್ಜಿ ಜಯಮ್ಮನವರು )
ತಿಪಟೂರು
( ಮೂಲ ಕಥೆ : ನನ್ನ ಅಜ್ಜಿ ಜಯಮ್ಮನವರು )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ