ಭಾವ ವರ್ಷಿಣಿ -2
೧.
ನಾನು ಅದ್ದೂರಿ ಸ್ಟೈಲ್ ತರ ಡೈಲಾಗ್ ಹೊಡ್ದೆ." ನೀವೇನೋ ಟೆಕ್ ಪಾರ್ಕ್ ಜನ ,ಎ.ಸಿ ಬಸ್ ಹತ್ಕಂಡು ಬರ್ತಿರಾ..ನಾವೇನ್ ಮಾಡದು..ಹೆಬ್ಬಾಳ ಪ್ಲೈಒವರ್ ಹತ್ಕಂಡು ಬರದು ಎಷ್ಟು ಕಷ್ಟ ಅಂತ ಗೊತ್ತಾ..ಸುಮ್ನೆ ಹಿಂಗೆ ಮುಖ ಊದುಸ್ಕಂಡು ಕುತ್ ಬಿಟ್ರೆ..."
ಆದ್ರೂ ಒಂದು ಮಾತಾಡಲಿಲ್ಲ.ಮತ್ತೆ ಹೇಳ್ದೆ " ರಚ್ಚು,ನನ್ಗೆ ಗೊತ್ತೆ,ನೀನ್ ಆಗ್ಲೆನೇ ಬಂದೆ ಅಂತ ..ನಾನ್ ಹೇಳಿರಲಿಲ್ವ ..ಇವತ್ ಬೇಡ,ವೀಕೆಂಡ್ ಸಿಕ್ತಿನಿ " ಅಂತ.
ನನ್ಗೂ ಸಿಟ್ ಹತ್ತಿತ್ತು.ಸಿಟ್ ಮಾಡ್ಕಂಡ್ರೆ ರಚ್ಚು ಅಷ್ಟು ಒಳ್ಳೆ ಹುಡ್ಗಿ ಸಿಗ್ತಳಾ ಅನ್ಕಂಡು ಹಾಡ್ ಹೇಳ್ತಾ ಕುತ್ಕಂಡೆ.
ಮುಖವು ಕೆಂಪೇರಿತ್ತು,ಕಣ್ಣುಗಳು ಎತ್ತಲೋ ಹೊರಳಿದ್ದವು|
ಗೆಳೆಯ ಬಂದರೂ,ತಿರುಗಿ ನೋಡದೆ ಕುಳಿತಿಹಳು||
ಗೆಳೆಯ ಬಂದರೂ,ತಿರುಗಿ ನೋಡದೆ ಕುಳಿತಿಹಳು||
ಬೃಂದಾವನದ ನಂದನದಲ್ಲಿ ಕಾಯುತ್ತಿದ್ದ ರಾಧೆಯ ಹಾಗೆ|
ನೀ ನನ್ನ ಕಾಯುತ್ತಿದ್ದೆ,ಎಂದು ತಿಳಿಯದೆ ನನಗೆ||
ಗೋಪಾಲಕರ,ಗೋಪಾಲ ಸ್ತ್ರೀಯರ ಕಣ್ಣ ತಪ್ಪಿಸಿ ಕೃಷ್ಣ ಬರುವ ಹಾಗೆ|
ನಿನ್ನ ಅರಸಿ ಬಂದರೂ ,ಕೋಪವೇಕೆ ಬಾಲೆ||
ನೀ ನನ್ನ ಕಾಯುತ್ತಿದ್ದೆ,ಎಂದು ತಿಳಿಯದೆ ನನಗೆ||
ಗೋಪಾಲಕರ,ಗೋಪಾಲ ಸ್ತ್ರೀಯರ ಕಣ್ಣ ತಪ್ಪಿಸಿ ಕೃಷ್ಣ ಬರುವ ಹಾಗೆ|
ನಿನ್ನ ಅರಸಿ ಬಂದರೂ ,ಕೋಪವೇಕೆ ಬಾಲೆ||
ನಿನಗಾಗಿ ನಾನು,ನನಗಾಗಿ ನೀನು ಎಂದವಳು|
ಇಳೆಯನ ಸಮಯಪ್ರಜ್ಞೆಯನ್ನು ಮನ್ನಿಸಬೇಡವೇ?|
ಮತ್ತೊಮ್ಮೆ, ಮಗದೊಮ್ಮೆ ಈ ತಪ್ಪು ನಡೆಯಲ್ಲ ನನ್ನಾಣೆ ಎಂದೊಡನೆ|
ಹುಣ್ಣಿಮೆಯ ಕಳೆ ತುಂಬಿದ ಮೊಗವ ತಿರುಗಿಸಿದಳು ಬಾಲೆ||
ಇಳೆಯನ ಸಮಯಪ್ರಜ್ಞೆಯನ್ನು ಮನ್ನಿಸಬೇಡವೇ?|
ಮತ್ತೊಮ್ಮೆ, ಮಗದೊಮ್ಮೆ ಈ ತಪ್ಪು ನಡೆಯಲ್ಲ ನನ್ನಾಣೆ ಎಂದೊಡನೆ|
ಹುಣ್ಣಿಮೆಯ ಕಳೆ ತುಂಬಿದ ಮೊಗವ ತಿರುಗಿಸಿದಳು ಬಾಲೆ||
ಅಭಿಲಾಷ್ ಟಿ ಬಿ
ತಿಪಟೂರು
ತಿಪಟೂರು
೧.
" ಚಂದಿರನ ಕಲೆಯಷ್ಟೂ ನಿನ್ನ ಮೊಗದಲಿಲ್ಲ|
ಚಂದಿರನ ಬೆಳಕಷ್ಟೆ ಹೊಳೆಯುತ್ತಿರುವೆಯಲ್ಲ ||"
" ಲೇ ಶಿಷ್ಯ ,ಎಷ್ಟು ಢವ್ ಹೊಡಿತ್ಯೋ,ನನ್ನಷ್ಟು ಕಲೆ ಇಲ್ವ..ಅಚ್ಚುಕಟ್ಟಾಗಿ ನೋಡು...ಮೊದ್ಲು ನೋ ಮಾರ್ಕ್ ಹಚ್ಚಕ್ಕೆ ಹೇಳು "
" ರೀ ಚಂದ್ರು,ಈ ಟೈಮಲ್ಲಿ ಏನ್ ನಿಮ್ದು ...ನೀವ್ ಲವ್ ಆಲ್ಲಿ ಇರದಾ ನಾನ್ ಲವ್ ಆಲ್ಲಿ ಇರದ...ಸುಮ್ನೆ ಪ್ರೇಮಿಗಳನ್ನ ನೋಡ್ತಾ ಇರಿ...ತೊಂದ್ರೆ ಕೊಡಬೇಡಿ"
ಬಾನಲ್ಲಿ ಹಾರಾಡುವ ತಾರೆಯ ಬೆಳಕಲ್ಲಿ|
ತಾರೆಯನ್ನೆ ಮುಡಿಸುವೆ ನಿನ್ನ ಹಾವಿನಂತ ಜಡೆಗೆ|
ತಾರೆಗಳ ತೋಟದಲ್ಲಿ ನೀನೆ ಹೊಳೆಯುತಿರುವೆ ಚಂದಿರನಂತೆ|
ಚಂದಿರನು ಬೆಳಕ ಬೀರುವುದ ನಿಲ್ಲಿಸಿಬಿಟ್ಟಾನು ನಿನ್ನ ಮೊಗವ ಕಂಡು||
ತಾರೆಯನ್ನೆ ಮುಡಿಸುವೆ ನಿನ್ನ ಹಾವಿನಂತ ಜಡೆಗೆ|
ತಾರೆಗಳ ತೋಟದಲ್ಲಿ ನೀನೆ ಹೊಳೆಯುತಿರುವೆ ಚಂದಿರನಂತೆ|
ಚಂದಿರನು ಬೆಳಕ ಬೀರುವುದ ನಿಲ್ಲಿಸಿಬಿಟ್ಟಾನು ನಿನ್ನ ಮೊಗವ ಕಂಡು||
" ನಾನ್ ಇನ್ ಸಹಿಸಲ್ಲ....ನಾನ್ ಹೊರಟೆ..ಬರೀ ಸುಳ್ಳು....ಗೋಧಿ ಬಣ್ಣ ಇದೆ ಮುಖ ...ಕಥೆ ಹೊಡಿತಿದನೆ"
ಪ್ರೀತಿಯೆಂಬ ಆವರಣದಲ್ಲಿ ಪ್ರೇಮ ಯಾನವ ಕೈಗೊಂಡು|
ನಂಬಿಕೆ,ವಿಶ್ವಾಸಗಳನ್ನು ಭಂಗವಿಲ್ಲದೆ ದಾಟಿರುವೆವು||
ಹುಚ್ಚು ಮನಸ್ಸು ಹತ್ತು ಬಾರಿ ಕವಲೊಡೆದರೂ|
ನಿನ್ನ ಮೇಲಿನ ಪ್ರೀತಿಗೆ ಗ್ರಹಣವು ಬಂದಿಲ್ಲ ಗೆಳತಿ||
ನಂಬಿಕೆ,ವಿಶ್ವಾಸಗಳನ್ನು ಭಂಗವಿಲ್ಲದೆ ದಾಟಿರುವೆವು||
ಹುಚ್ಚು ಮನಸ್ಸು ಹತ್ತು ಬಾರಿ ಕವಲೊಡೆದರೂ|
ನಿನ್ನ ಮೇಲಿನ ಪ್ರೀತಿಗೆ ಗ್ರಹಣವು ಬಂದಿಲ್ಲ ಗೆಳತಿ||
" ಇದ್ದನ್ನು ಒಂದೆ ಸತ್ಯ ಹೇಳಿದ್ದು ನನ್ ಮಗ"
" ಅಭಿಲಾಷ್ ಗಿಂತ ಒಳ್ಳೆ ಹುಡ್ಗ ಸಿಗಲ್ಲ ಕಣೆ...ಸುಮ್ನೆ ಒಪ್ಕೊ "
ಅಭಿಲಾಷ್ ಟಿ ಬಿ
ತಿಪಟೂರು
ತಿಪಟೂರು
೧.
ಇದು ನಿಜವಾಗ್ಲೂ ಕವಿತೆ ಅಲ್ಲ.....
" ಜಸ್ಟ್ ಸಿಂಪಲ್ ಆಗಿ ಕಣ್ಣು ಹೊಡಿ " ಅಷ್ಟೆ ಶಿಷ್ಯ
" ಜಸ್ಟ್ ಸಿಂಪಲ್ ಆಗಿ ಕಣ್ಣು ಹೊಡಿ " ಅಷ್ಟೆ ಶಿಷ್ಯ
ತುಟಿಗಳು ತೆರೆದವು,ಹೃದಯ ಮಾತಾಡಿತು|
ಸಿಂಪಲ್ ಆಗಿ ಒಂದು ಕಣ್ಣು ಹೊಡಿ ಎಂದಿತು||
ಸಿಂಪಲ್ ಆಗಿ ಒಂದು ಕಣ್ಣು ಹೊಡಿ ಎಂದಿತು||
ಮತ್ತೆ ಮತ್ತೆ ಅವಳನ್ನೆ ನೋಡು ಎಂದಿತು|
ಅವಳು ನಿನ್ನ ನೋಡುತ್ತಿರುವಳ ? ಎಂದು ಕೇಳಿತು||
ಹಾಗನ್ನುಸ್ಸುತ್ತಿಲ್ಲ ಎಂದು ಬೇಜಾರಿನಿಂದಲೇ ಹೇಳಲು|
ನೀನು ನೋಡುವುದ ಬಿಡಬೇಡ ಶಿಷ್ಯ ಎಂದಿತು||
ಅವಳು ನಿನ್ನ ನೋಡುತ್ತಿರುವಳ ? ಎಂದು ಕೇಳಿತು||
ಹಾಗನ್ನುಸ್ಸುತ್ತಿಲ್ಲ ಎಂದು ಬೇಜಾರಿನಿಂದಲೇ ಹೇಳಲು|
ನೀನು ನೋಡುವುದ ಬಿಡಬೇಡ ಶಿಷ್ಯ ಎಂದಿತು||
ಜೊತೆಯಲ್ಲಿ ನಿಂತು ಹೈಟ್ ನೋಡು ಎಂದಿತು|
ಅವಳ ಬಳಿ ಸುಳಿಯಲು ಭಯವಾಗುತ್ತೆ ಎಂದೆನು||
ದೂರದಿಂದಲೆ ಅಂದಾಜು ಮಾಡು ಎಂದು ಗದರಿಸಿತು|
ಭುಜಕ್ಕೆ ಸರಿಯಾಗಿ ಅವಳ ತಲೆ ನೇರವಾಗುತ್ತೆ ಎಂದೆನು||
ಅವಳ ಬಳಿ ಸುಳಿಯಲು ಭಯವಾಗುತ್ತೆ ಎಂದೆನು||
ದೂರದಿಂದಲೆ ಅಂದಾಜು ಮಾಡು ಎಂದು ಗದರಿಸಿತು|
ಭುಜಕ್ಕೆ ಸರಿಯಾಗಿ ಅವಳ ತಲೆ ನೇರವಾಗುತ್ತೆ ಎಂದೆನು||
ಕುತ್ತಿಗೆಗೆ ಹಾಕಿರೋ ಕಾರ್ಡ್ ಚೆಕ್ ಮಾಡು ಎಂದಿತು|
ಕಾಲೇಜಿನದೋ ,ಸಾಫ್ಟ್ ವೇರ್ ದೋ ಎಂದು ಬಿಡ ಬಿಡದೆ ಕೇಳಿತು||
ಸಾಫ್ಟ್ ವೇರ್ ದು ಆದರೆ ಅದು ಸಾಫ್ಟ್ ಮನವು ಎಂದಿತು|
ಸಿಂಪಲ್ ಆಗಿ ಕಣ್ಣು ಹೊಡೆದು ಅವಳ ಚಿತ್ತದಲ್ಲಿ ಚಿತ್ತಾರವ ಮೂಡಿಸು ಎಂದಿತು||
ಕಾಲೇಜಿನದೋ ,ಸಾಫ್ಟ್ ವೇರ್ ದೋ ಎಂದು ಬಿಡ ಬಿಡದೆ ಕೇಳಿತು||
ಸಾಫ್ಟ್ ವೇರ್ ದು ಆದರೆ ಅದು ಸಾಫ್ಟ್ ಮನವು ಎಂದಿತು|
ಸಿಂಪಲ್ ಆಗಿ ಕಣ್ಣು ಹೊಡೆದು ಅವಳ ಚಿತ್ತದಲ್ಲಿ ಚಿತ್ತಾರವ ಮೂಡಿಸು ಎಂದಿತು||
ಅಭಿಲಾಷ್ ಟಿ ಬಿ
ತಿಪಟೂರು
ತಿಪಟೂರು
೨.
ನಾವು ನೋಡುವ ದೃಷ್ಠಿ ಬದಲಾಗಬೇಕೆ ಹೊರತು ಜಗತ್ತು ಬದಲಾಗುವುದಿಲ್ಲ........
ಕವಿತೆ...."ಕಿಟಕಿ"
ಮನೆಯೊಳಗಿನಿಂದ ಕಿಟಕಿಯಾಚೆ ನೋಡಿದೆಡೆ|
ಗಾಳಿಗಿಂತಲೂ ವೇಗವಾಗಿ ಹತ್ತು ಯೋಚನೆಗಳು ಮನಸ್ಸನ್ನು ಆವರಿಸಿಕೊಂಡವು||
ಗಾಳಿಗಿಂತಲೂ ವೇಗವಾಗಿ ಹತ್ತು ಯೋಚನೆಗಳು ಮನಸ್ಸನ್ನು ಆವರಿಸಿಕೊಂಡವು||
ನೂರು ಜನ ನಡೆಯುತ್ತಿದ್ದರು,ಒಬ್ಬಿಬ್ಬರು ಓಡುತ್ತಿದ್ದರು||
ಒಬ್ಬನ್ನು ಎಮ್ಮೆಯನ್ನು ಎಳೆಯುತ್ತಿದ್ದರೆ,ಮತ್ತೊಬ್ಬನು ಎಮ್ಮೆಯ ಮೇಲೆ ಏರಿಹನು||
ಇವನ ಕಥೆ ಮುಗಿಯಿತು ಎಂದೆನಿಸಿತು ,ನಾಲ್ಕು ಜನ ಹೊತ್ತೊಯ್ಯುತ್ತಿದ್ದವನ ಕಂಡು|
ಬೂದಿಯಾಗುವುದೊಂದು ಉಳಿದಿದೆ ಎಂದು ಹೇಳಿ ಮತ್ತೆ ಮಲಗಿದನು||
ಒಬ್ಬನ್ನು ಎಮ್ಮೆಯನ್ನು ಎಳೆಯುತ್ತಿದ್ದರೆ,ಮತ್ತೊಬ್ಬನು ಎಮ್ಮೆಯ ಮೇಲೆ ಏರಿಹನು||
ಇವನ ಕಥೆ ಮುಗಿಯಿತು ಎಂದೆನಿಸಿತು ,ನಾಲ್ಕು ಜನ ಹೊತ್ತೊಯ್ಯುತ್ತಿದ್ದವನ ಕಂಡು|
ಬೂದಿಯಾಗುವುದೊಂದು ಉಳಿದಿದೆ ಎಂದು ಹೇಳಿ ಮತ್ತೆ ಮಲಗಿದನು||
ಲಲನೆಯರ ಕೈಹಿಡಿದು ಜೊತೆಯಲ್ಲೆ ಸಾಗುತ್ತಿದ್ದರು|
ಪುರುಷತ್ವ ಪರೀಕ್ಷಿಸಿಕೊಳ್ಳಲೋ,ಅಗಾಧ ಪ್ರೇಮವೋ ತಿಳಿಯದು||
ಯಾವುದಾದರೇನು? ಮೊಳಗೆಯೊಡೆದು ಹಣ್ಣು ಬಂದಾಯಿತು|
ರೈತನಾಗುವನೋ,ಶಿಕ್ಷಕನಾಗುವನೋ,ಶಿಕ್ಷೆಗೆ ಒಳಪಡುವನೋ ತಿಳಿಯದು||
ಪುರುಷತ್ವ ಪರೀಕ್ಷಿಸಿಕೊಳ್ಳಲೋ,ಅಗಾಧ ಪ್ರೇಮವೋ ತಿಳಿಯದು||
ಯಾವುದಾದರೇನು? ಮೊಳಗೆಯೊಡೆದು ಹಣ್ಣು ಬಂದಾಯಿತು|
ರೈತನಾಗುವನೋ,ಶಿಕ್ಷಕನಾಗುವನೋ,ಶಿಕ್ಷೆಗೆ ಒಳಪಡುವನೋ ತಿಳಿಯದು||
ಮುಂಬಾಗಿಲಿನ ಕಿಟಕಿಯ ಮುಚ್ಚಿ ಹಿಂಬಾಗಿಲಿನ ಕಡೆಗೆ ಓಡಿದೆ|
ಸತ್ಯವು ಸುಳ್ಳಾಗಿತ್ತು,ಸುಳ್ಳು ಸತ್ಯವಾಗಿತ್ತು||
ಎಮ್ಮೆಯ ಮೇಲೆ ಕುಳಿತವನು ,ಎಮ್ಮೆಗೆ ನೀರು ಕುಡಿಸುತಿಹನು|
ಎಮ್ಮೆಯ ಎಳೆಯುತ್ತಿದ್ದವ ,ಹಾಲು ಹಿಂಡುತ್ತಿದ್ದನು||
ಸತ್ಯವು ಸುಳ್ಳಾಗಿತ್ತು,ಸುಳ್ಳು ಸತ್ಯವಾಗಿತ್ತು||
ಎಮ್ಮೆಯ ಮೇಲೆ ಕುಳಿತವನು ,ಎಮ್ಮೆಗೆ ನೀರು ಕುಡಿಸುತಿಹನು|
ಎಮ್ಮೆಯ ಎಳೆಯುತ್ತಿದ್ದವ ,ಹಾಲು ಹಿಂಡುತ್ತಿದ್ದನು||
ಅಭಿಲಾಷ್ ಟಿ ಬಿ
ತಿಪಟೂರು
ತಿಪಟೂರು
೩.
ನನ್ನ ಅಮ್ಮ......
ವೆಂಕಟೇಶ್ವರ ಥಿಯೇಟಿರ್ ನಿಂದ ಬರ್ತಾ ಇದ್ದೆ.ಸ್ಕೂಲ್ ಬ್ಯಾಗ,ಹಾಕಿಕೊಂಡಿದ್ದ ಪುಟ್ಟ ಮಗನನ್ನು ಎತ್ತಿಕೊಂಡು ರಸ್ತೆ ದಾಟುತ್ತಿದ್ದಳು.ಆ ಕ್ಷಣ ನೆನಾಪಿಗಿದ್ದು ನನ್ನ ಅಮ್ಮ.ಆದರೆ ನನ್ನ ಅಮ್ಮನಿಗೆ ಈಗ ವಯಸ್ಸಾಗಿದೆ.ಬಿಳಿ ಕೂದಲಾಗಿದೆ,ನಡೆಯುವಾಗ ಸ್ವಲ್ಪ ನಡುಗುತ್ತಾಳೆ ,ಆದರೆ ಅವಳು ಮಾಡುವ ರೊಟ್ಟಿ,ಕಲಸಿದ ಅನ್ನ ಎಂದೂ ಭಿನ್ನವಾಗುತ್ತಿಲ್ಲ.ಮಕ್ಕಳು ಎಷ್ಟು ಸೀರೆ ತಂದು ಕೊಟ್ಟರೇನು,ತನ್ನ ಮದುವೆಯ ಸಮಯದ ಧಾರೆ ಸೀರೆಯನ್ನು ಕಂಡರೆ ಅವಳಿಗೆ ಎಲಿಲ್ಲದ ಆನಂದ.ಆ ಚಿತ್ರಣವನ್ನು ವ್ಯಕ್ತಪಡಿಸುವ ಸಾಲುಗಳೇ ಈ ಕೆಳಗಿನ ಕವನ.
ಕೈಯ ಬಳಸಿ,ತನ್ನ ಕುತ್ತಿಗೆಯ ಸುತ್ತಿ|
ಕಂದನ ಉಪ್ಪು ಮೂಟೆ ಹೊತ್ತಿ ನಲಿಯುತಿಹಳು||
ಕಂದನ ಉಪ್ಪು ಮೂಟೆ ಹೊತ್ತಿ ನಲಿಯುತಿಹಳು||
ಕಾಡಿಗೆಯ ಕಣ್ಣು ಎಂದೋ ಮರೆತಾಯಿತು|
ಕಪ್ಪುಕೂದಲುಗಳು ಸರಿದು ಬೆಳ್ಳಿಗೂದಲು ಆವರಿಸಿರುವುದು||
ಕಾವಲಿ ಮೇಲೆ ತಟ್ಟಿದ ರೊಟ್ಟಿಯ |
ಯಾವ ಸಮಯಕ್ಕೆ ತೆಗೆಯಬೇಕೆಂಬ ಪ್ರಜ್ಞೆ ಕೊಂಚವು ತಗ್ಗಿಹದು||
ಕಪ್ಪುಕೂದಲುಗಳು ಸರಿದು ಬೆಳ್ಳಿಗೂದಲು ಆವರಿಸಿರುವುದು||
ಕಾವಲಿ ಮೇಲೆ ತಟ್ಟಿದ ರೊಟ್ಟಿಯ |
ಯಾವ ಸಮಯಕ್ಕೆ ತೆಗೆಯಬೇಕೆಂಬ ಪ್ರಜ್ಞೆ ಕೊಂಚವು ತಗ್ಗಿಹದು||
ಕೈಯಲ್ಲಿ ಪಂಚವಾಳ,ತಾಲಿ ಹಿಡಿದು|
ತುಳಸಿಯ ಪೂಜಿಸುವಾಗ ಕೈ ತುಸು ನಡುಗುತಿಹುದು||
ತನ್ನ ಕೊರಳಿನ ಮಾಂಗಲ್ಯ ಶಾಶ್ವತವಿರಲಿ ಎಂಬ ಬೇಡಿಕೆ|
ತುಳಸಿಯ ಮುಂದೆ ಅಂದಿನಿಂದಲೂ ಜೀವಂತವಾಗಿಯೇ ಇರುಹುದು||
ತುಳಸಿಯ ಪೂಜಿಸುವಾಗ ಕೈ ತುಸು ನಡುಗುತಿಹುದು||
ತನ್ನ ಕೊರಳಿನ ಮಾಂಗಲ್ಯ ಶಾಶ್ವತವಿರಲಿ ಎಂಬ ಬೇಡಿಕೆ|
ತುಳಸಿಯ ಮುಂದೆ ಅಂದಿನಿಂದಲೂ ಜೀವಂತವಾಗಿಯೇ ಇರುಹುದು||
ಚುಕ್ಕಿಯಂತೆ ಇದ್ದ ಹಣೆಯ ಕುಂಕುಮ|
ಪೂರ್ಣ ಚಂದ್ರನಾಗಿ ತಿರುಗಿಹಳು||
ನಾಗೋಲಿ,ಧಾರೆಯ ಸೀರೆಯ ಹಿಡಿದು|
ತನ್ನ ತವರನ್ನು ಮತ್ತೆ ಮತ್ತೆ ನೆನೆಯುತಿಹಳು||
ಪೂರ್ಣ ಚಂದ್ರನಾಗಿ ತಿರುಗಿಹಳು||
ನಾಗೋಲಿ,ಧಾರೆಯ ಸೀರೆಯ ಹಿಡಿದು|
ತನ್ನ ತವರನ್ನು ಮತ್ತೆ ಮತ್ತೆ ನೆನೆಯುತಿಹಳು||
ಅಭಿಲಾಷ್ ಟಿ ಬಿ
ತಿಪಟೂರು
ತಿಪಟೂರು
೪.
ಕವನ " ಕರ್ಪೂರದ ಗೊಂಬೆ"
ಯಾರಿಗೂ ಕಾಣದ ನಿನ್ನ ಕಂಗಳ ಕಾಂತಿ|
ನನ್ನ ಕಣ್ಣಲ್ಲಿ ಕಲೆತು ಕರಗದೆ ನಿಂತಿದೆ||
ನನ್ನ ಕಣ್ಣಲ್ಲಿ ಕಲೆತು ಕರಗದೆ ನಿಂತಿದೆ||
ಕನಸು ,ಕನವರಿಕೆಯಲ್ಲೂ ಕಣ್ಣೀರ ಒರೆಸುತ್ತಿರುವೆ|
ಕಣ್ಣಿಂದ ಕಣ್ಣಿಗೆ ಕಣ್ಣಾಮುಚ್ಚಾಲೆಯಾಡುತ್ತಿರುವೆ||
ಕಣ್ಣಂಚಿನಲ್ಲಿ ಕುಳಿತು ಕುಶಲವ ಕೇಳುತ್ತಿರುವೆ|
ಕಾಡಿಗೆ ಹಚ್ಚಿದ ಕಣ್ಣು ಬಹಳಷ್ಟು ಕಾಡಿಸುತ್ತಿದೆ||
ಕಣ್ಣಿಂದ ಕಣ್ಣಿಗೆ ಕಣ್ಣಾಮುಚ್ಚಾಲೆಯಾಡುತ್ತಿರುವೆ||
ಕಣ್ಣಂಚಿನಲ್ಲಿ ಕುಳಿತು ಕುಶಲವ ಕೇಳುತ್ತಿರುವೆ|
ಕಾಡಿಗೆ ಹಚ್ಚಿದ ಕಣ್ಣು ಬಹಳಷ್ಟು ಕಾಡಿಸುತ್ತಿದೆ||
ಕಂಪಿಸಿತು ಹೃದಯ ಕೋಪಗೊಂಡ ನಿನ್ನ ಮುಂದೆ ನಿಲ್ಲಲ್ಲು|
ತುಸು ಬೆವರಿತು ನಿನ್ನ ಮುಂದೆ ಗುಲಾಬಿಯ ಹಿಡಿಯಲು||
ಕರ್ಪೂರದ ಗೊಂಬೆ ನೀ ಎಂದು ತಿಳಿದಿತ್ತು ನನಗೆ|
ಕೆಂಪೇರಿದ ನಿನ್ನ ಕೆನ್ನೆ ನಗುವ ಬೀರಿತು ,ನಾ ಕೈ ಹಿಡಿದೆಡೆ||
ತುಸು ಬೆವರಿತು ನಿನ್ನ ಮುಂದೆ ಗುಲಾಬಿಯ ಹಿಡಿಯಲು||
ಕರ್ಪೂರದ ಗೊಂಬೆ ನೀ ಎಂದು ತಿಳಿದಿತ್ತು ನನಗೆ|
ಕೆಂಪೇರಿದ ನಿನ್ನ ಕೆನ್ನೆ ನಗುವ ಬೀರಿತು ,ನಾ ಕೈ ಹಿಡಿದೆಡೆ||
ಅಭಿಲಾಷ್ ಟಿ ಬಿ
ತಿಪಟೂರು
ತಿಪಟೂರು
೫.
ಉಪ್ಪು ತುಪ್ಪ ಅನ್ನ ಇಷ್ಟ ಪಡದವರು ಯಾರಿದ್ದಾರೆ ಹೇಳಿ....
"ಸಂಪಿಗೆ"...
ನಿನ್ನೆ ಕಾಯುತ್ತಿರುವೆ ಅಮೃತ ಪ್ರೀತಿ ಹರಿಸುತ್ತಿರುವ|
" ಅಮ್ಮ" ಎಂಬ ರತ್ನದ ಹೊಳೆಯ||
" ಅಮ್ಮ" ಎಂಬ ರತ್ನದ ಹೊಳೆಯ||
ತುತ್ತು ಅನ್ನವ ತಿನ್ನಲು,ಅತ್ತು ಅತ್ತು ಗೋಗರೆಯಲು|
ಚಂದಿರನನ್ನೆ ಚಂದಮಾಮನನ್ನಾಗಿ ಮಾಡಿದಳು||
"ಹಾ" ಎಂದು ಮೋಡದೆಡೆಗೆ ಬಾಯ ತೆರೆದು ನೋಡಿದೆಡೆ|
ಉಪ್ಪು ತುಪ್ಪ ಕಲಸಿದನ್ನವ ತುರುಕಿದಳು ಬಾಯೋಳಗೆ||
ಚಂದಿರನನ್ನೆ ಚಂದಮಾಮನನ್ನಾಗಿ ಮಾಡಿದಳು||
"ಹಾ" ಎಂದು ಮೋಡದೆಡೆಗೆ ಬಾಯ ತೆರೆದು ನೋಡಿದೆಡೆ|
ಉಪ್ಪು ತುಪ್ಪ ಕಲಸಿದನ್ನವ ತುರುಕಿದಳು ಬಾಯೋಳಗೆ||
ಕಂದನಿಗೆ ಆಹಾರವರಸಿ ಹೋದ ತಾಯಿ|
ಇನ್ನು ಬರಲಿಲ್ಲವೆಂದು ಕೊರಗುವ ಮರಿಹಕ್ಕಿಯ ಹಾಗೆ||
ತಾಯಿಯ ನೆನೆದು ಕೊಟ್ಟಿಗೆಯಲ್ಲಿ ಕರುವು ನೆನೆಯುವ ಹಾಗೆ|
ನಿನ್ನ ಕಾಯುತ್ತಾ ನಿಂತಿರುವೆ ಸಂಪಿಗೆ ಮರದಡಿಯಲ್ಲಿ ನಿಂತು||
ಇನ್ನು ಬರಲಿಲ್ಲವೆಂದು ಕೊರಗುವ ಮರಿಹಕ್ಕಿಯ ಹಾಗೆ||
ತಾಯಿಯ ನೆನೆದು ಕೊಟ್ಟಿಗೆಯಲ್ಲಿ ಕರುವು ನೆನೆಯುವ ಹಾಗೆ|
ನಿನ್ನ ಕಾಯುತ್ತಾ ನಿಂತಿರುವೆ ಸಂಪಿಗೆ ಮರದಡಿಯಲ್ಲಿ ನಿಂತು||
ಅಭಿಲಾಷ್ ಟಿ ಬಿ
ತಿಪಟೂರು
ತಿಪಟೂರು
೬. ಬೆಳ್ಳಿಕಾಲುಂಗುರ
ಕೋಟಿ ತಾರೆಗಳಲ್ಲೂ ಮಿಂಚುತಿಹಳು|
ಚುಕ್ಕಿ ಸರಿದು ಕೆಂಪೇರಿದ ಸೂರ್ಯನ ಕಿರಣಗಳಲ್ಲೂ ಕಾಣುತಿಹಳು||
ಚುಕ್ಕಿ ಸರಿದು ಕೆಂಪೇರಿದ ಸೂರ್ಯನ ಕಿರಣಗಳಲ್ಲೂ ಕಾಣುತಿಹಳು||
ಪಾಳು ಬಿದ್ದಿಹ ಹೃದಯ ಮಂದಿರದಲ್ಲಿ|
ಪ್ರೇಮ ಮೂರ್ತಿಯ ಸ್ಥಾಪಿಸಿ,ಒಲುಮೆ ಕಳಸವಿಟ್ಟಳು|
ಏಳು ಜನ್ಮದ ಬಂಧನವಿದೆಂದು ತಿಳಿದು|
ಏಳು ಹೆಜ್ಜೆ ಜೊತೆಯಲ್ಲೆ ಇಡುವುದೆಂದಾಯಿತು||
ಪ್ರೇಮ ಮೂರ್ತಿಯ ಸ್ಥಾಪಿಸಿ,ಒಲುಮೆ ಕಳಸವಿಟ್ಟಳು|
ಏಳು ಜನ್ಮದ ಬಂಧನವಿದೆಂದು ತಿಳಿದು|
ಏಳು ಹೆಜ್ಜೆ ಜೊತೆಯಲ್ಲೆ ಇಡುವುದೆಂದಾಯಿತು||
ಎಕ್ಕ ಹುಟ್ಟುವಂತಾಗಿದ್ದ ಮನದ ಮನೆಯಲ್ಲಿ|
ಚಿಗುರು ಮಾವಿನ ಎಲೆಗಳ ತೋರಣವ ಕಟ್ಟಿದಳು|
ಬಾಲೆಗೆ ಬಹುಮಾನವ ನಾ ಕೊಡುವುದೇನು?
ಬೆಳ್ಳಿಕಾಲುಂಗರ,ಕರಿಮಣಿ ಸರ ಸಾಕೆಂದಳು||
ಚಿಗುರು ಮಾವಿನ ಎಲೆಗಳ ತೋರಣವ ಕಟ್ಟಿದಳು|
ಬಾಲೆಗೆ ಬಹುಮಾನವ ನಾ ಕೊಡುವುದೇನು?
ಬೆಳ್ಳಿಕಾಲುಂಗರ,ಕರಿಮಣಿ ಸರ ಸಾಕೆಂದಳು||
ಅಭಿಲಾಷ್ ಟಿ ಬಿ
ತಿಪಟೂರು
೭.
ತಿಪಟೂರು
೭.
ಯಾಕೋ ಅವಳು ಇಂದು ಬಹಳ ಸಿಟ್ಟಾಗಿದ್ದಳು.ಸಮಾಧಾನ ಮಾಡಲೇ ಬೇಕಲ್ಲವೇ? ಆ ಸಂದರ್ಭವೇ ಈ ಕೆಳಗಿನ ಕವಿತೆ "ಅರಗಿಣಿ"...
ಯಾರನ್ನು ಯಾತಕ್ಕೆ ನೋಡಲೇ ಚೆಲುವೆ|
ನೀನೆ ನನ್ನ ಮನದ ಅರಗಿಣಿಯು||
ನೀನೆ ನನ್ನ ಮನದ ಅರಗಿಣಿಯು||
ಮೀನಿನಂತ ಕಣ್ಣು ನಿನ್ನದಾಗಿಹುದು|
ಸಿಂಹದ ಕಟಿಯೂ ಇರಬಹುದೆನೋ||
ಹಂಸದ ನಡಿಗೆಯೋ,ಆನೆಯ ನಡಿಗೆಯೋ|
ನಾಚಿ ಒಳಹೊಕ್ಕ ಮೊಗವೇ ಕಣ್ಮುಂದಿರುವುದು||
ಸಿಂಹದ ಕಟಿಯೂ ಇರಬಹುದೆನೋ||
ಹಂಸದ ನಡಿಗೆಯೋ,ಆನೆಯ ನಡಿಗೆಯೋ|
ನಾಚಿ ಒಳಹೊಕ್ಕ ಮೊಗವೇ ಕಣ್ಮುಂದಿರುವುದು||
ಕಣ್ಣಲ್ಲಿ ಕಾಡಿಗೆ,ತಲೆಯಿಂದ ಬೈತಲೆ ಬೊಟ್ಟು|
ಶಾಂತದಿಂದ ಕೂಡಿದ ಹುಬ್ಬುಗಳ ಮಧ್ಯೆ ಕುಂಕುಮವು||
ಕಾಲಲ್ಲಿ ಝಣ್ ಝಣ್ ಗೆಜ್ಜೆ,ಕಿವಿಯಲ್ಲಿ ಝುಮುಕಿ|
ರಾಣಿ ಹಂಗೆ ಕಾಣ್ಣುತ್ತಿದೆ ನಾಟ್ಯದುಡುಗೆಯಲ್ಲಿ ||
ಶಾಂತದಿಂದ ಕೂಡಿದ ಹುಬ್ಬುಗಳ ಮಧ್ಯೆ ಕುಂಕುಮವು||
ಕಾಲಲ್ಲಿ ಝಣ್ ಝಣ್ ಗೆಜ್ಜೆ,ಕಿವಿಯಲ್ಲಿ ಝುಮುಕಿ|
ರಾಣಿ ಹಂಗೆ ಕಾಣ್ಣುತ್ತಿದೆ ನಾಟ್ಯದುಡುಗೆಯಲ್ಲಿ ||
ತುಟಿಯ ಮೇಲೆ ಬೆರಳಿಟ್ಟು ,ಹುಬ್ಬು ಗಂಟಿಕ್ಕಿ|
ನನ್ನ ನೋಡದೆ ಕೂರಲು ಕಾರಣವೇನು||
ಯಾವ ಹುಡುಗಿಯನ್ನೂ ಕತ್ತೆತ್ತಿಯೂ ನೋಡಲ್ಲ ,ನಿನ್ನಾಣೆ|
ಹೃದಯದ ಅನುರಾಗದ ಅಲೆಗಳು ಸದಾ ನಿನ್ನೆಡೆಗೆ ಚೆಲುವೆ||
ನನ್ನ ನೋಡದೆ ಕೂರಲು ಕಾರಣವೇನು||
ಯಾವ ಹುಡುಗಿಯನ್ನೂ ಕತ್ತೆತ್ತಿಯೂ ನೋಡಲ್ಲ ,ನಿನ್ನಾಣೆ|
ಹೃದಯದ ಅನುರಾಗದ ಅಲೆಗಳು ಸದಾ ನಿನ್ನೆಡೆಗೆ ಚೆಲುವೆ||
ಆಭಿಲಾಷ್ ಟಿ ಬಿ
ತಿಪಟೂರು
ತಿಪಟೂರು
೮.
ಅದು ಜ್ಯೇಷ್ಠ ಮಾಸದ ಸಮಯ,ಸಂಜೆ ಆರು ಗಂಟೆ ,ಮಳೆ ಸ್ವಲ್ಪ ಚೆನ್ನಾಗಿಯೇ ಸುರಿಯುತ್ತಿದೆ.ಮೋಡ ಕವಿದಿದೆ,ಮೋಡಗಳು ಗುಡುಗುತ್ತಿವೆ.ಶಾರದೆ ತನ್ನ ಒಂದು ವರ್ಷದ ಮಗುವಿನೊಡನೆ ಮನೆಯಲ್ಲಿ ಒಬ್ಬಳೇ ಇದ್ದಾಳೆ.ತನ್ನ ಗಂಡ ನರಸಿಂಹಯ್ಯ ದನಗಳೊಡನೆ ತೋಟಕ್ಕೆ ಹೋದವನು ಇನ್ನೂ ಬಂದಿಲ್ಲ.ಹೊರಗೆ ಸಾಕಷ್ಟು ಮಳೆ
,ಗುಡುಗು,ಸಿಡಿಲು.ಶಾರದೆಗೆ ಮನಸ್ಸಿನಲ್ಲಿ ತಳಮಳ.ಮನೆಯ ಹೊರಗಡೆ ಬಂದು ತನ್ನ ಗಂಡನಿಗಾಗಿ ಕಾಯುತಿರುವಳು.ಆ ಸಂದರ್ಭವನ್ನು ವ್ಯಕ್ತ ಪಡಿಸುವ ಪ್ರಯತ್ನವೇ ಈ ಕೆಳಗಿನ ಸಾಲುಗಳು.
ಇಳಯನಿಗಾಗಿ ಕಾಯುತಿಹಳು|
ಮಳೆಯ ಹನಿಗಳ ಚೆಲ್ಲುತ್ತಿರುವ ಸೂರಿನಡಿಯಲಿ ನಿಂತು||
ಮಳೆಯ ಹನಿಗಳ ಚೆಲ್ಲುತ್ತಿರುವ ಸೂರಿನಡಿಯಲಿ ನಿಂತು||
ಬಾನಿನಲಿ ಮೋಡಗಳ ಆರ್ಭಟ|
ಹೃದಯದಂಗಳದಲಿ ಭಯದ ಕಂಪನ||
ತೊಟ್ಟಿಲಲಿ ಮಲಗಿರುವ ಕಂದನ ತೂಗಿ|
ಮತ್ತೆ ಬಂದು ನಿಲ್ಲುತಿಹಳು ಸೂರಿನಡಿಯಲ್ಲಿ||
ಹೃದಯದಂಗಳದಲಿ ಭಯದ ಕಂಪನ||
ತೊಟ್ಟಿಲಲಿ ಮಲಗಿರುವ ಕಂದನ ತೂಗಿ|
ಮತ್ತೆ ಬಂದು ನಿಲ್ಲುತಿಹಳು ಸೂರಿನಡಿಯಲ್ಲಿ||
ಮೋಡಗಳ ಮರೆಯಿಂದ ಶರಧಿಯಲ್ಲಿ ಮುಳುಗಿ|
ಇಳೆಯಿಂದ ಹೊತ್ತು ಮುಳುಗಿ ಹೊತ್ತೂ ಮೀರಿಹುದು||
ನೆರೆಯವರ ,ದಾರಿಹೋಕರು ಕೇಳುವ ಪ್ರಶ್ನೆಗಳಿಗೆ|
ಮಂದಹಾಸದಿಂದಲೇ ಉತ್ತರಿಸುತ್ತಿಹಳು ಶಾಂತಚಿತ್ತದಿ||
ಇಳೆಯಿಂದ ಹೊತ್ತು ಮುಳುಗಿ ಹೊತ್ತೂ ಮೀರಿಹುದು||
ನೆರೆಯವರ ,ದಾರಿಹೋಕರು ಕೇಳುವ ಪ್ರಶ್ನೆಗಳಿಗೆ|
ಮಂದಹಾಸದಿಂದಲೇ ಉತ್ತರಿಸುತ್ತಿಹಳು ಶಾಂತಚಿತ್ತದಿ||
ಕೊಟ್ಟಿಗೆಯಲ್ಲಿ ಅಮ್ಮನ ನೆನೆದು ಕರುವು ಅರುಚುತಿಹುದು|
ಊರ ತುರು
,ಕುರಿ,ಜನಗಳೆಲ್ಲರು ಮನೆಯ ಸೇರಿಹರು||
ಮುಂಗಾರಿನ ಮಿಂಚಿನ ಬೆಳಕಿನಲಿ ಹತ್ತಿರದಲ್ಲೆ ಕಾಣುತಿವುದು|
ಮೂರು ಹಸುಗಳ ಹಿಂದೆ ಹೊರೆ ಹೊತ್ತು ಬರುತ್ತಿದ್ದ ಗೃಹಿಣಿಯ ಇಳೆಯನು||
ಊರ ತುರು
,ಕುರಿ,ಜನಗಳೆಲ್ಲರು ಮನೆಯ ಸೇರಿಹರು||
ಮುಂಗಾರಿನ ಮಿಂಚಿನ ಬೆಳಕಿನಲಿ ಹತ್ತಿರದಲ್ಲೆ ಕಾಣುತಿವುದು|
ಮೂರು ಹಸುಗಳ ಹಿಂದೆ ಹೊರೆ ಹೊತ್ತು ಬರುತ್ತಿದ್ದ ಗೃಹಿಣಿಯ ಇಳೆಯನು||
ಆಭಿಲಾಷ್ ಟಿ ಬಿ
ತಿಪಟೂರು
ತಿಪಟೂರು
೯.
ನನ್ನ ಕಾರ್ತಿಕ......
ಹಾಗೆ ಬಂದು ಹೀಗೆ ಹೋಗುತಿಹಳು|
ಸಪ್ತ ಮಾಸವ ದಾಟಿ ಬಂದ ನನ್ನ ಕಾರ್ತಿಕ||
ಸಪ್ತ ಮಾಸವ ದಾಟಿ ಬಂದ ನನ್ನ ಕಾರ್ತಿಕ||
ಈ ಭುವಿಯೇ ಬಸಿರಾದಂತಾಗಿಹುದು|
ರಾಗಿ ಜ್ವಾಳ ಉಚ್ಚೆಳ್ಳು ತುಂಬಿ ತುಳುಕುತಿಹುದು|
ಹಿಂಗಾರು ಮಳೆಯ ಚುಂಬನ,ಬಣ್ಣದ ಹಕ್ಕಿಗಳ ಒಡನಾಟ|
ನವಮಾಸಕ್ಕೆ ಹಡೆದಳು ರಾಗಿ ,ಜೋಳದ ಕಾಳುಗಳ||
ರಾಗಿ ಜ್ವಾಳ ಉಚ್ಚೆಳ್ಳು ತುಂಬಿ ತುಳುಕುತಿಹುದು|
ಹಿಂಗಾರು ಮಳೆಯ ಚುಂಬನ,ಬಣ್ಣದ ಹಕ್ಕಿಗಳ ಒಡನಾಟ|
ನವಮಾಸಕ್ಕೆ ಹಡೆದಳು ರಾಗಿ ,ಜೋಳದ ಕಾಳುಗಳ||
ಬಲಿಯೇ ಮೊದಲಾಗಿ ಸ್ವಾಗತಿಸಿಹನು|
ಸಾಲು ಸಾಲು ಹಣತೆಗಳು,ಮನದ ಅಂಧಕಾರಕ್ಕೆ ಬೆಳಕು||
ಮಗಳೊಡನೆ ಬಂದ ಅಳಿಯನು ಕೃಷ್ಣನಂತೆ|
ಅಳಿಯನು ತಿಂಗಳಾದರೂ ಇರುವನು,ನನ್ನ ಕಾರ್ತಿಕ
ಹೊರಡುತಿಹಳು||
ಸಾಲು ಸಾಲು ಹಣತೆಗಳು,ಮನದ ಅಂಧಕಾರಕ್ಕೆ ಬೆಳಕು||
ಮಗಳೊಡನೆ ಬಂದ ಅಳಿಯನು ಕೃಷ್ಣನಂತೆ|
ಅಳಿಯನು ತಿಂಗಳಾದರೂ ಇರುವನು,ನನ್ನ ಕಾರ್ತಿಕ
ಹೊರಡುತಿಹಳು||
ಆಭಿಲಾಷ್ ಟಿ ಬಿ
ತಿಪಟೂರು
ತಿಪಟೂರು
೧೦.
ಮತ್ತೆ ಮತ್ತೆ ಕಾಡುತಿದೆ ನೆನಪು|
ಹುಸಿಯಿಲ್ಲದ ನಗೆ ತುಂಬಿದ ನಿನ್ನ ಮೊಗವು||
ಹುಸಿಯಿಲ್ಲದ ನಗೆ ತುಂಬಿದ ನಿನ್ನ ಮೊಗವು||
ತೆಂಗಿನಮರದ ಮೇಲೆ ಕುಳಿತಿರುವ ಚಂದಿರನ ನೋಡುತಿರಲು|
ಚಂದಿರನು ಸರಿಯಲು ಬಾನಿನಲ್ಲಿ ನಿನ್ನ ಮೊಗವೇ ಕಾಣುತಿಹದು||
ಚಂದಿರನ ಬೆಳಕಿಗೆ ಸಾಗರವೇ ಉಬ್ಬೇರಲು|
ನಿನ್ನ ನಗುವಿನ ಮೊಗವ ಕಂಡು|
ನನ್ನ ಹೃದಯದಲ್ಲಿ ಭಾವತರಂಗಗಳು ತೇಲಾಡುತಿಹುದು||
ಚಂದಿರನು ಸರಿಯಲು ಬಾನಿನಲ್ಲಿ ನಿನ್ನ ಮೊಗವೇ ಕಾಣುತಿಹದು||
ಚಂದಿರನ ಬೆಳಕಿಗೆ ಸಾಗರವೇ ಉಬ್ಬೇರಲು|
ನಿನ್ನ ನಗುವಿನ ಮೊಗವ ಕಂಡು|
ನನ್ನ ಹೃದಯದಲ್ಲಿ ಭಾವತರಂಗಗಳು ತೇಲಾಡುತಿಹುದು||
ಕಣ್ಣು ಮುಚ್ಚಿದರೆ ಕಣ್ಣೋಳಗೆ ಬಂದು ಅವಿತಿರುವೆ|
ಕಣ್ಣು ತೆರೆದರೆ ಲೋಕವೇ ನೀನಾಗಿರುವೆ||
ಲೋಕದ ನಿಂದನೆಗೆ ಹೆದರುವುದೇತಕೆ ಗೆಳತಿ|
ನಿರ್ಮಲ ಪ್ರೀತಿಯ ಸ್ವೀಕರಿಸೇ ಲತಾಂಗಿ||
ಕಣ್ಣು ತೆರೆದರೆ ಲೋಕವೇ ನೀನಾಗಿರುವೆ||
ಲೋಕದ ನಿಂದನೆಗೆ ಹೆದರುವುದೇತಕೆ ಗೆಳತಿ|
ನಿರ್ಮಲ ಪ್ರೀತಿಯ ಸ್ವೀಕರಿಸೇ ಲತಾಂಗಿ||
ಆಭಿಲಾಷ್ ಟಿ ಬಿ
ತಿಪಟೂರು
ತಿಪಟೂರು
೧೧. ಕವಿತೆ "ತಾಯಿ ಭಾರತಾಂಬೆಗೆ"
ಅಂಬರದ ಚುಕ್ಕಿಗಳ ಸೇರಿಸಿ|
ಬೆಳಕಿನ ರಂಗೋಲಿಯನ್ನಿಡುವ ಆಸೆ||
ತಾಯಿ ಭಾರತಾಂಬೆಗೆ....
ಬೆಳಕಿನ ರಂಗೋಲಿಯನ್ನಿಡುವ ಆಸೆ||
ತಾಯಿ ಭಾರತಾಂಬೆಗೆ....
ಮುಂಜಾವಿನ ಹುಲ್ಲುಹಾಸಿನ ಮೇಲೆ ಬಿದ್ದ|
ಮಂಜಿನ ಹನಿಗಳ ಕೂಡಿಸಿ ಕಾವೇರಿಯನ್ನಾಗಿಸುವಾಸೆ||
ನೂರು ಸಾವಿರ ಜನರ ಕಷ್ಟ ಕಂಡು ಕೊರಗುತ್ತಿರುವ|
ಭಾರತಾಂಬೆಯ ಕಣ್ಣೀರನ್ನು ಒರೆಸುವಾಸೆ||
ಮಂಜಿನ ಹನಿಗಳ ಕೂಡಿಸಿ ಕಾವೇರಿಯನ್ನಾಗಿಸುವಾಸೆ||
ನೂರು ಸಾವಿರ ಜನರ ಕಷ್ಟ ಕಂಡು ಕೊರಗುತ್ತಿರುವ|
ಭಾರತಾಂಬೆಯ ಕಣ್ಣೀರನ್ನು ಒರೆಸುವಾಸೆ||
ಎತ್ತರದ ಗಿರಿಶಿಖರಗಳನ್ನು ಒಂದುಗೂಡಿಸಿ|
ದುರ್ಗದ ಕೋಟೆಯ ನಿರ್ಮಿಸುವ ಆಸೆ||
ಸಾವಿರ ಮಾಮರಗಳ ಬೆಳೆಸಿ|
ಭಾರತಾಂಬೆಗೆ ಹಸಿರಿನ ನೆರಳಿನ ಚಪ್ಪರ ನಿರ್ಮಿಸುವ ಆಸೆ||
ದುರ್ಗದ ಕೋಟೆಯ ನಿರ್ಮಿಸುವ ಆಸೆ||
ಸಾವಿರ ಮಾಮರಗಳ ಬೆಳೆಸಿ|
ಭಾರತಾಂಬೆಗೆ ಹಸಿರಿನ ನೆರಳಿನ ಚಪ್ಪರ ನಿರ್ಮಿಸುವ ಆಸೆ||
ಬೆವರು ಸುರಿಸಿ ಧಾನ್ಯವ ಕೊಡುವ|
ರೈತನ ಸತ್ಕರಿಸುವ ಆಸೆ||
ಕೋಗಿಲೆ,ವೈಣಿಕರ ಕಲೆಹಾಕಿ|
ಭಾರತಾಂಬೆಗೆ ಜೋಗುಳವಾಡಿಸುವಾಸೆ||
ರೈತನ ಸತ್ಕರಿಸುವ ಆಸೆ||
ಕೋಗಿಲೆ,ವೈಣಿಕರ ಕಲೆಹಾಕಿ|
ಭಾರತಾಂಬೆಗೆ ಜೋಗುಳವಾಡಿಸುವಾಸೆ||
ಕೋವಿ ಹಿಡಿದು ಶತ್ರುಗಳನ್ನು ರಣಚಂಡಿಗೆ|
ಔತಣಮಾಡಿಸುವ ಯೋಧರ ನೆನೆಯುವಾಸೆ||
ಕಾನನದ ಮಲ್ಲಿಗೆ,ಸಂಪಿಗೆ ಕಲೆತು ಹಾಕಿ|
ಭಾರತಾಂಬೆಯ ಪಾದಕ್ಕೆ ಪೂಜಿಸುವಾಸೆ||
ಔತಣಮಾಡಿಸುವ ಯೋಧರ ನೆನೆಯುವಾಸೆ||
ಕಾನನದ ಮಲ್ಲಿಗೆ,ಸಂಪಿಗೆ ಕಲೆತು ಹಾಕಿ|
ಭಾರತಾಂಬೆಯ ಪಾದಕ್ಕೆ ಪೂಜಿಸುವಾಸೆ||
ಅಭಿಲಾಷ್ ಟಿ ಬಿ
ತಿಪಟೂರು
ತಿಪಟೂರು
೧೨.
ಕವಿತೆ "ಮಯೂರಿ"
ನೆನಪಿದೆಯಾ ಗೆಳತಿ|
ನಿನ್ನ ಕಂಡ ಮೊದಲ ಮಧುರ ಕ್ಷಣವು||
ನಿನ್ನ ಕಂಡ ಮೊದಲ ಮಧುರ ಕ್ಷಣವು||
ಹಿಂದಿನ ಜಡೆಗೆ ಮುಡಿದಿದ್ದೆ ಪುಟ್ಟ ಸೇವಂತಿಗೆ ಮೊಗ್ಗು|
ಮುಂಗುರುಳು ಸರಿಸುತ್ತಾ ಬಸ್ಸಿನ ಮುಂದಿನ ಬಾಗಿಲಲ್ಲಿ ಇಳಿದೆ ನೀನು||
ಮುದ್ದಾದ ಬಾಲೆಯ ಕಂಡೊಡೆ ಹಿಂದಿನ ಬಾಗಿಲಲ್ಲಿ ಇಳಿದೆ ನಾನು|
ಹಿಂದೆ ಹಿಂದೆ ನನ್ನ ನೋಡುತ್ತಾ ಮನೆಯ ಕಡೆಗೆ ಹೊರಟೆ ನೀನು||
ಮುಂಗುರುಳು ಸರಿಸುತ್ತಾ ಬಸ್ಸಿನ ಮುಂದಿನ ಬಾಗಿಲಲ್ಲಿ ಇಳಿದೆ ನೀನು||
ಮುದ್ದಾದ ಬಾಲೆಯ ಕಂಡೊಡೆ ಹಿಂದಿನ ಬಾಗಿಲಲ್ಲಿ ಇಳಿದೆ ನಾನು|
ಹಿಂದೆ ಹಿಂದೆ ನನ್ನ ನೋಡುತ್ತಾ ಮನೆಯ ಕಡೆಗೆ ಹೊರಟೆ ನೀನು||
ಮೊದಮೊದಲು ತಂದೆಗೆ ಹೆದರಿ ನಡೆದೇ ಹೋಗುತ್ತಿದ್ದ ನೀನು|
ಮಧುರ ಪ್ರೀತಿಗೊಪ್ಪಿ ನನ್ನ ಗಾಡಿಯ ಹಿಂದೆ ಏರಿದೆ ನೀನು||
ವಿಶ್ವಾಸವ ಹೆಚ್ಚಿಸಿತು ಭುಜದ ಮೇಲೆ ನೀನಿಟ್ಟ ಹಸ್ತವು|
ಬಾಲೆಯ ಪ್ರೇಮ ಚಂದಿರ ನನ್ನ ಹೃದಯದಲ್ಲಿ ಅವಿತುಕೂತಿತು||
ಮಧುರ ಪ್ರೀತಿಗೊಪ್ಪಿ ನನ್ನ ಗಾಡಿಯ ಹಿಂದೆ ಏರಿದೆ ನೀನು||
ವಿಶ್ವಾಸವ ಹೆಚ್ಚಿಸಿತು ಭುಜದ ಮೇಲೆ ನೀನಿಟ್ಟ ಹಸ್ತವು|
ಬಾಲೆಯ ಪ್ರೇಮ ಚಂದಿರ ನನ್ನ ಹೃದಯದಲ್ಲಿ ಅವಿತುಕೂತಿತು||
ನಾ ರಚಿಸಿದ ಸಾಹಿತ್ಯಕ್ಕೆ ಸಂಗೀತವಾದೆ ನೀನು|
ನನ್ನ ಹೃದಯದಂಗಳದಲ್ಲಿ ನಾಟ್ಯವಾಡಿದ ಮಯೂರಿ ನೀನು||
ಹೂವನು ಅರಸಿ ದುಂಬಿಯ ಬಂದ ಹಾಗೆ|
ನನ್ನ ಅರಸಿಯ ಅರಸಿದೊಡೆ ಪುಷ್ಪದಂತೆ ಕಂಡೆ ನೀನು||
ನನ್ನ ಹೃದಯದಂಗಳದಲ್ಲಿ ನಾಟ್ಯವಾಡಿದ ಮಯೂರಿ ನೀನು||
ಹೂವನು ಅರಸಿ ದುಂಬಿಯ ಬಂದ ಹಾಗೆ|
ನನ್ನ ಅರಸಿಯ ಅರಸಿದೊಡೆ ಪುಷ್ಪದಂತೆ ಕಂಡೆ ನೀನು||
ಅಭಿಲಾಷ್ ಟಿ ಬಿ
ತಿಪಟೂರು
ತಿಪಟೂರು
೧೩.
ಗರಿಬಿಚ್ಚಿ ಹಾರಾಡಿದೆವು|
ಕೆಂಪೇರಿದ ಮುಗಿಲಲ್ಲಿ,ಚುಕ್ಕಿಗಳಾಗಮಿಸುವ ಹೊತ್ತಿನಲ್ಲಿ||
ಕೆಂಪೇರಿದ ಮುಗಿಲಲ್ಲಿ,ಚುಕ್ಕಿಗಳಾಗಮಿಸುವ ಹೊತ್ತಿನಲ್ಲಿ||
ಬಾನಂಗಳದಲ್ಲಿ ಕಾಣುತ್ತಿಹುದು ಹಕ್ಕಿಗಳ ಹಿಂಡು|
ಪ್ರೇಮ ಪ್ರೀತಿ ಹರಟುತ್ತಾ ಗೂಡಿನತ್ತ ಹೊರಟಿವವು||
ಏಕಾಂಗಿಯಾಗಿದ್ದ ಪುಟ್ಟ ಹಕ್ಕಿಯೊಂದು |
ಸಂಗಾತಿಯನ್ನರಸುತ್ತಾ ಕಾಡಿನತ್ತ ಹೊರಟಿತು||
ಪ್ರೇಮ ಪ್ರೀತಿ ಹರಟುತ್ತಾ ಗೂಡಿನತ್ತ ಹೊರಟಿವವು||
ಏಕಾಂಗಿಯಾಗಿದ್ದ ಪುಟ್ಟ ಹಕ್ಕಿಯೊಂದು |
ಸಂಗಾತಿಯನ್ನರಸುತ್ತಾ ಕಾಡಿನತ್ತ ಹೊರಟಿತು||
ನೀರವ ಮೌನ,ಪುಟ್ಟ ಚುಕ್ಕಿಗಳ ಬೆಳಕಿನಲಿ|
ಹಸಿರಿನ ಕಾನನ ಬೆಳಗುತ್ತಿತ್ತು||
ಜುಳುಜುಳು ನಾದವ ಮಾಡುತ್ತಾ,ನೀರವ ಮೌನ ಮುರಿಯುತ್ತ|
ಹರಿಯುತ್ತಿದ್ದ ನದಿಯಲ್ಲಿ ಪುಟ್ಟ ಬಾಲೆಯೊಂದು ಹಾಡುತ್ತಾ,ಕುಣಿಯುತ್ತಾ ವಿಹರಿಸುತ್ತಿತು||
ಹಸಿರಿನ ಕಾನನ ಬೆಳಗುತ್ತಿತ್ತು||
ಜುಳುಜುಳು ನಾದವ ಮಾಡುತ್ತಾ,ನೀರವ ಮೌನ ಮುರಿಯುತ್ತ|
ಹರಿಯುತ್ತಿದ್ದ ನದಿಯಲ್ಲಿ ಪುಟ್ಟ ಬಾಲೆಯೊಂದು ಹಾಡುತ್ತಾ,ಕುಣಿಯುತ್ತಾ ವಿಹರಿಸುತ್ತಿತು||
ಸಂಗಾತಿಯರಸುತ್ತಾ ಹೊರಟ ಹಕ್ಕಿಗೆ|
ನಾಟ್ಯವಾಡುತ್ತಿದ್ದ ಬಾಲೆ ಕಂಡಳು||
ಬಾಲೆಯ ಜೊತೆಗೂಡಿ ನಾಚಿಕೆಯಿಂದಲೇ|
ಹೆಜ್ಜೆ ಹಾಕಿತು,ಧ್ವನಿಗೂಡಿಸಿತು,ಮುಗಿಲೆತ್ತರಕ್ಕೆ ಜೊತೆಯಾಗಿ ಹಾರಿದವು||
ನಾಟ್ಯವಾಡುತ್ತಿದ್ದ ಬಾಲೆ ಕಂಡಳು||
ಬಾಲೆಯ ಜೊತೆಗೂಡಿ ನಾಚಿಕೆಯಿಂದಲೇ|
ಹೆಜ್ಜೆ ಹಾಕಿತು,ಧ್ವನಿಗೂಡಿಸಿತು,ಮುಗಿಲೆತ್ತರಕ್ಕೆ ಜೊತೆಯಾಗಿ ಹಾರಿದವು||
ಆಭಿಲಾಷ್ ಟಿ ಬಿ
ತಿಪಟೂರು
ತಿಪಟೂರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ