ಬುಧವಾರ, ಜನವರಿ 25, 2017

ಯತಿರಾಜಗೆ ನಮಿಸೋಣ....

ಯತಿರಾಜಗೆ ನಮಿಸೋಣ.... 

೧. 
ಆರತಿ ಬೆಳಗೋಣ ಮಂತ್ರಾಲಯದ ಯತಿರಾಜಗೆ|
ಬೇಡಿದ ವರಗಳಿಗೆ ಅಸ್ತು ಎನ್ನುತಿಹನು|
ನಾ ಮಾಡಿದ ಪಾಪಗಳ,ತನ್ನಲ್ಲೇ ಕರಗಿಸಿಕೊಂಡನು||
ಕರದಲ್ಲಿ ವೀಣೆಯ ಹಿಡಿದು ರಾಮನ ಧ್ಯಾನಿಸುತಿಹನು|
ಅಂತರಂಗದಲ್ಲಿ ಭಕ್ತರ ಸಂಕಟಗಳಿಗೆ ಕಿವಿಗೊಟ್ಟಿಹನು||
ನಾನು ,ನನ್ನದು ಎಂಬುವನಲ್ಲಿ ಅವರೆಲ್ಲಿವರು?
ನಾನು ಎಂಬುದು ಹೋದಡೆ ಕಣ್ಣಿಗೆ ಕಾಣಸಿಗುವರು||
ಸಂಶಯ,ಸಂದೇಹ ಬಿಟ್ಟು ರಾಯಗೆ ಆರತಿಯ ಬೆಳಗಿರೆ|
ಅಂಧಕಾರವ ಸೀಳುವ ದೀಪವ ಹಿಡಿದು ಬರುವನು ರಾಘವೇಂದ್ರರಾಯನು||
ಅಭಿಲಾಷ್ ಟಿ ಬಿ
ತಿಪಟೂರು

೨. 
ನಿನ್ನನ್ನೇ ನಂಬಿ ಬಂದಿರುವೇ ,ಗುರುರಾಯ|
ಅಭಯ ಹಸ್ತವ ನೀಡೋ ಶ್ರೀರಾಘವೇಂದ್ರರಾಯ||
ಕನಕವು ಬೇಕಿಲ್ಲ,ಧನಕ್ಕೆ ಸಂಕಟವಿಲ್ಲ|
ಜೀವನವೇ ಮುಳ್ಳಿನ ಹಾಸಿಗೆಯಾಗಿಹುದು||
ಎನ್ನ ನಾಲಿಗೆ ಸದಾ ರಾಯ ಎನ್ನುತಿಹುದು|
ಭವಸಾಗರದಲ್ಲಿ ತೇಲಿಸೋ ಅಂಬಿಗನಾಗಿ ಬಾರಯ್ಯ||
ಹೆಜ್ಜೆ ಹೆಜ್ಜೆಯೂ ಹಾದಿ ತಪ್ಪುತಿಹುದು|
ನಡು ನಡುವೂ ಕಾಣುತಿಹರು ಹಿತಶತ್ರುಗಳು||
ರಾಘವೇಂದ್ರ ಬೇರೇನೂ,ರಾಘವ ಬೇರೇನು|
ಕೈ ಹಿಡಿದು ನಡೆಸು ಎನನ್ನು ,ಶ್ರೀರಾಮನನ್ನು ಪೂಜಿಸಿದಾತನೆ||
ಅಭಿಲಾಷ್ ಟಿ ಬಿ
ತಿಪಟೂರು

೩. 
ನಂಬಿ ಕೆಟ್ಟವರಿಲ್ಲವೊ ಈ ರಾಯನನ್ನು....
ರಕ್ಷಿಸೋ ಎನ್ನನು ಶ್ರೀರಾಘವೇಂದ್ರ|
ರಕ್ಷಿಸೋ ಎನ್ನನು ಶ್ರೀಗುರುರಾಯ|
ಆಳನು ನಂಬಿ ರಾಜನು ಕೆಟ್ಟಂತೆ|
ದೊರೆಯ ನಂಬಿ ಪ್ರಜೆಯು ಕೆಟ್ಟಂತೆ||
ಕಾಮಧೇನು,ಕಲ್ಪವೃಕ್ಷ ನೀನಾಗಿರುವಾಗ|
ನಿನ್ನನು ನಂಬಿ ಕೆಟ್ಟವರಿಲ್ಲಯ್ಯ ರಾಯ||
ಕೂಡಿಟ್ಟ ಅಕ್ಕಿ ಜೊಳ್ಳು ಹಿಡಿಯಬಹುದು|
ಕೂಡಿಟ್ಟ ಗಳಿಕೆಯು ಪರರ ಪಾಲಗಬಹುದು||
ನಿನ್ನ ಅನುಗ್ರಹ ಸದಾ ನಮ್ಮ ಮೇಲೆ ಇರಲು|
ಗ್ರಹಣದ ನೆರಳೂ ಸೋಕದು ರಾಯನೇ|
ಗ್ರಹಣದ ನೆರಳೂ ಸೋಕದು ರಾಯನೇ ||
ಅಭಿಲಾಷ್ ಟಿ ಬಿ

೪. 
ಅರಿವಿನ ಹರಿವು ನಿಂತಿದೆ|
ಸುಜ್ಞಾನವನ್ನು ಕರುಣಿಸೋ ಗುರುರಾಯ|
ವೇದ ಶಾಸ್ತ್ರ,
ವಿಜ್ಞಾನದ ವಿದ್ವತ್ತು ನಲಿದಾಡುತ್ತಿದೆ|
ದಶಮಾಂಶಗಳ ಲೆಕ್ಕವೂ ಮಸ್ತಕದಲ್ಲಿ ಪುಟಿಯುತಿದೆ|
ಮಾನವೀಯತೆ,ಅಂತಃಕರಣ ಎಂಬ ಗುಣಗಳು|
ಮನದ ಬತ್ತಳಿಕೆಯಲ್ಲಿ ಬತ್ತಿ ಹೋಗಿದೆ|
ತರ್ಕ ಮಾಡುವವರು ಎಷ್ಟೋ ಜನ|
ನೀತಿ,ತತ್ವ ಬೋಧನೆ ಮಾಡುವವರು ಲೆಕ್ಕವಿಲ್ಲದಷ್ಟು ಜನ|
ಏನಾದರೇನು?
ಕಿಚ್ಚು,ಮದ,ಮೊದಲಾದ ಗುಣಗಳು ಆರ್ಭಟಿಸುತಿದೆ|
ನಮ್ಮನು ಮನುಷ್ಯರನ್ನಾಗಿಸೋ ಗುರುರಾಯ|
ಅಭಿಲಾಷ್ ಟಿ ಬಿ
ತಿಪಟೂರು

೫. 
ಸಂದೇಹ ಪಟ್ಟರೆ ಹೇಗಯ್ಯಾ
ಶ್ರೀರಾಮನನ್ನು ಪೂಜಿಸುವವನು ಅವನಯ್ಯಾ|
ದೇವ ಬಲ ಗುರುವಿನ ಬಲ
ಯಾವ ಬಲ ಬಲವಯ್ಯಾ|
ಅರ್ಜುನನಿಗೆ ಕೃಷ್ಣನ ಬಲವಿದ್ದರೂ
ದ್ರೋಣರ ವಿದ್ಯೆಯ ಬಲ ಬೇಕಿರಲಿಲ್ಲವೇನಯ್ಯ|
ಜೋಡೆತ್ತಿನ ಬಂಡಿ ಅಲುಗದೆ ಹೋಗುವುದೇನು|
ಕಣ್ ಕಟ್ಟಿದ ಕುದುರೆ ಅತ್ತಿತ್ತ ನೋಡುವುದೇನು|
ಜೀವನವನ್ನು ಕಷ್ಟಗಳು ಅಲುಗಿಸಿದಾಗ|
ಅತ್ತಿತ್ತ ನೋಡದೆ ಗುರುರಾಜನ ಪಾದಕ್ಕೆ ಎರಗೋ ಮನುಜ |
ಆಭಿಲಾಷ್ ಟಿ ಬಿ
ತಿಪಟೂರು

೬. 
ಹರಿಯುತಿದೆ ಹರಿಯುತಿದೆ ಜೀವನದ ಹೊಳೆಯು
ರಾಯರು ತೋರಿಸಿದ ಪಥದಲ್ಲಿ ಹರಿಯುತಿದೆ ಹೊಳೆಯು|
ಮು0ಜಾವಿನ ಮ0ಜಿನ0ತೆ ಪಾಪ ಕರ್ಮಗಳು ಕರಗಿ |
ಸಸಿಯಾಗಿ ಹುಟ್ಟಿತು ಜೀವವೊ0ದು ತಾಯಿ ಉದರದಲಿ |
ರಾಯ ರಾಯ ಎ0ದು ತಾಯಿ ಬಸುರಿನಲಿ ಜಪಿಸಲು |
ರಾಮ ನಾಮದಷ್ಟೆ ಹಿತವಾಗಿತ್ತು ತಾಯಿ ಒಡಲಿನಲಿ|
ದಟ್ಟ ಕಾನನದಲ್ಲಿ ಕಲ್ಲುಮುಳ್ಳಿನ ಹಾದಿಯಲ್ಲಿ ರಭಸದಿ0ದ ನುಗ್ಗಿ |
ಎತ್ತರದ ಗಿರಿ ಶಿಖರಗಳಿ0ದ ಜಲಪಾತವನ್ನು ಸೃಷ್ಟಿಸಿ ಪ್ರಪಾತಕ್ಕೆ ಬಿದ್ದಿ |
ಜೀವನವೆ0ದರೆ ತಗ್ಗಿ ಬಗ್ಗಿ ಎದ್ದಿ ಬಿದ್ದಿ |
ಮಣ್ಣ ಕೊಡವಿ ಎಬ್ಬಿಸೊ ಗುರುರಾಯ|
ಸರ್ವರಿಗೂ ಸಮಬಾಳು ನೀಡೋ ಗುರುರಾಯ
ಸರ್ವರಿಗೂ ಸಹಬಾಳ್ವೆ ಜೀವನ ನಡೆಸಿಕೊಡೊ ಗುರುರಾಜ|
ಆಭಿಲಾಷ್ ಟಿ ಬಿ
ತಿಪಟೂರು

೭. 
ಹಿ0ಬಾಲಿಸುವ ಭಕ್ತರ ಪಾಲ
ಮ0ತ್ರಾಲಯ ವಾಸ ಶ್ರೀರಾಘವೇ0ದ್ರ |
ಪರಮ ಸತ್ಯ ಪರಮ ನಿತ್ಯ
ಪರಮಾತ್ಮನಲ್ಲಿ ಮಿಥ್ಯವೆನ್ನುವುದೆ ಪಥ್ಯ
ಪರಮ ಗುರುವಿನ ಪಾದ ಸೇವೆಯಿ0ದ
ಪತಿತ ಪಾವನನೆಡೆಗೆ ಪಥವು ಸುಲಭ
ಮ0ತ್ರವು ತಿಳಿದಿಲ್ಲ,ತ0ತ್ರವು ಮೊದಲೇ ಇಲ್ಲ
ವಾರ,ನಕ್ಷತ್ರಾದಿಗಳ ನೆನಪೇ ಇಲ್ಲ
ರಾಯರ ಸೇವೆ ಹೇಗೆ0ದು ಯೋಚಿಸಿದಾಗ
ಸ್ಮರಣೆಯೊ0ದೆ ಸಾಲದೆ ಎ0ದ ಲಕ್ಷ್ಮೀರಾಯ|
ಅಭಿಲಾಷ್ ಟಿ ಬಿ
ತಿಪಟೂರು

೮. 
ಸದಾ ಸ್ಮರಣೆ ಮಾಡಿರೋ
ಶ್ರೀ ರಾಘವೇಂದ್ರನನ್ನು |
ಕರದಲ್ಲಿ ವೀಣೆ ,ಕೊರಳಲ್ಲಿ ತುಳಸೀಮಾಲೆ
ಹಣೆಯಲ್ಲಿ ಗೋಪಿ ಚಂದಿರನಂತೆ |
ಶಿಖೆಯಲ್ಲಿ ವಿದ್ವತ್ತು ಬೆಳಗುವ ಸೂರ್ಯನಂತೆ
ಮನದಲ್ಲಿ ಹರಿಯುತಿದೆ ಕರುಣೆ ತುಂಗೆಯಂತೆ |
ದ್ವೈತ ಅದ್ವೈತ ದ್ ಇಬ್ಬಂದಿ ತನದ ನಡುವೆ
ಗುರು ಪೀಠ ದಲ್ಲೊಂದು ಅರಳಿತು ಮಲ್ಲಿಗೆ |
ಗುರು ಮಹಿಮೆಯನ್ನು ಅರಿತ ಮಂಚಾಲತ್ತೆ
ತಪಸ್ಸಿಗೆ ಅನುವು ಮಾಡಿ ಕೊಟ್ಟಳು ಕಲಿಯುಗದ
ಕಲ್ಪವೃಕ್ಷನಿಗೆ ,ಶ್ರೀ ಗುರುರಾಜನಿಗೆ |
ಅಭಿಲಾಷ್ ಟಿ ಬಿ
ತಿಪಟೂರು
೯. 
ದಯೆ ತೋರು ಗುರುವೇ
ತುಂಗಭದ್ರ ತೀರದ ಋಷಿಯೇ ,
ಜನನ ಮರಣಗಳ ನಡುವೆ 
ನವವಿಧ ಕಷ್ಟಗಳ ಸರಮಾಲೆ
ಅಂದು ಕಾಣಿಸಿತು ದೀವಿಗೆ
ರಾಯರ ಅನುಗ್ರಹವೆಂಬ ತುಳಸಿಮಾಲೆ,
ಜ್ಞಾನ ವಾಹಿನಿಗೆಂದು ವಾಗ್ದೇವಿ
ಕುಬೇರನಿಗೆ ಧನ ಸಂಪತ್ತು
ಕರುಣೆ ಎಂಬುದು ಮಿಕ್ಕಿ ಉಳಿಯಿತು
ಆಗ ನೆನಪಾದರು ಶ್ರೀ ರಾಘವೇಂದ್ರ ತೀರ್ಥರು ,

೧೦. 
ರಾಯನನ್ನು ನೆನೆ ಮನವೇ
ಶ್ರೀಗುರುರಾಯನನ್ನು ನೆನೆ ಮನವೆ||
ಮಂತ್ರಾಲಯ ನಿವಾಸ
ಮಂಚಾಲಮ್ಮನವರ ಆವಾಸ
ಮನ ನೊಂದು ಬಂದವರಿಗೆ ಉಚ್ವಾಸ ನಿಶ್ವಾಸ
ಬಂದು ನೆಲೆಸಿ ನಮ್ಮ ಮನೆಗೆ ವಾಸ ||
ವಿದುಷಕ ನೆಂದರೆ ತಪ್ಪಿಲ್ಲ
ರಾಜ ರಾಯ ಎಂದರೆ ನನಗೆ ಭಯವಿಲ್ಲ
ಅಂದು ನಿಮಗೆ ಗೋವಿಂದ ಇದ್ದ
ಇಂದು ನನಗೆ ರಾಜ ರಾಯ ಇರುವ
ಇಂದು ನನಗೆ ಗುರು ರಾಜ ಇರುವ....||
------- ಅಭಿಲಾಶ್ ತಿಪಟೂರು

೧೧. 
ಗುರುರಾಯರು ನೆಂಟನಾಗಿ ಬಂದರು....

ನೆಂಟನು ಬಂದಿಹನು,ಮಂತ್ರಾಲಯದಿಂದ|
ಬಾಗಿಲ ತೆರೆದು ಕರೆಯಿರೆ,ಬಾಗಿಲ ತೆರೆದು ಕರೆಯಿರೆ||

ನಲಿವಿನಿಂದಿರುವಾಗ ನಲಿದಾಡುತ ಬರುವ ನೆಂಟನಲ್ಲ|
ಕಷ್ಟಗಳು ಎರಗಿದಾಗ ಗಂಟು ಕಟ್ಟಿ ಹೋಗುವ ನೆಂಟನಲ್ಲ||
ಸಂಸಾರವೆಂಬ ಬಾಳಿನ ನೌಕೆಯ|
ಶ್ರೀಹರಿಯ ಪಾದಕ್ಕೆ ಸೇರಿಸೋ ನೆಂಟನಿವನು||

ಒಪ್ಪತ್ತು,ಎರಡು ದಿನ ಇದ್ದು ಹೋಗುವ ನೆಂಟನಲ್ಲ|
ಹಬ್ಬದ ಅಡಿಗೆ ಮಾಡಿ ಬಡಿಸಲಿ ಎಂದು ಕಾಯುವ ನೆಂಟನಲ್ಲ||
ದೈನ್ಯದಿಂದ ಬೇಡಿದ ಭಕುತರ ಮನದ ಮಂದಿರದಲ್ಲಿ|
ಸಲುಹುತ್ತಾ ನಿಂತಿರುವ ನೆಂಟ ಇವನಮ್ಮಾ,ಶ್ರೀರಾಘವೇಂದ್ರರಾಯರಮ್ಮ||

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ