ಶುಕ್ರವಾರ, ಆಗಸ್ಟ್ 18, 2017

ಸಾಲು ಸಾಲಾಗಿ ಹೋಗುತ್ತಿರುವ ಚಿಟ್ಟೆಗಳೇ|
ನನ್ನ ನಾಯಕಿಯನ್ನು ಎಲ್ಲಿ ಬಿಟ್ಟು ಬಂದಿರುವಿರಿ||
ಮೋಡಗಳಿಗೆ ಉಯ್ಯಾಲೆಯನ್ನು ಕಟ್ಟಿ ತೂಗಿಕೊಳ್ಳುವ ಸಮಯವಾಯಿತು |
ತಡಮಾಡದೆ ನನ್ನ ಅರಸಿಯನ್ನು  ಹುಡುಕಿಕೊಂಡು ಬನ್ನಿ||

ಮಲ್ಲಿಗೆಯ ಗುಂಪಿನಲ್ಲಿ ತುಸು ಸಾವಧಾನದಿಂದಲೇ ಹುಡುಕಿ|
ಇವಳ ಬಿಳುಪು ಮಲ್ಲಿಗೆಯಷ್ಟೇ ಹೊಳಪು|
ಬಣ್ಣದ ಮುಖವೂ ಆಗಿರಬಹುದು ಎನಿಸುತ್ತಿದೆ|
ಇಷ್ಟು ಸಮಯ ನಿಮ್ಮ ಜೊತೆಗೂಡಿ ಆಡಿರುವುದಕ್ಕೆ ||

ಕವಿಯೊಬ್ಬನು ಅವಳನ್ನು ವರ್ಣಿಸುವ ಮುನ್ನ |
ಶಿಲ್ಪಿಯೊಬ್ಬನ ಕಣ್ಣಿಗೆ ಕಾಣುವ ಮುನ್ನ  ಅವಳನ್ನು ಕರೆತನ್ನಿ||
ಮೇಲಾಗಿ ನಾನಿಲ್ಲವೆಂದು ಹೆದರಿಬಿಟ್ಟಿರುವಳು |
ನಮ್ಮಿಬ್ಬರನು ಜೊತೆಯಲ್ಲಿ ತೂಗುವುರಂತೆ ,ಹೊರಡಿ ನನ್ನ ನಾಯಕಿಯನ್ನು ಅರಸುತ್ತಾ||

ಆಭಿಲಾಷ್ ಟಿ ಬಿ
ತಿಪಟೂರು




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ