ಕೃಷ್ಣ ನೀ ಬೇಗನೇ ಬಾರೋ .......
ಇಮೇಜ್ ಕರ್ಟಸಿ :http://www.udipikrishnamutt.com/photo-gallery/krishna-temple-udupi
೧. ಹೀಗೆ ಒ0ದು ದಿನ ನಮ್ಮ ತಿಪಟೂರಿನ ಪ್ರಭಾತ್ ಕಾಫಿ ಪುಡಿ ಮು0ದೆ ಇರೋ ರಾಮಮ0ದಿರದ ರಸ್ತೆಯಲ್ಲಿ ದಾಸರೊಬ್ಬರು ಹೋಗುತ್ತಿರುವಾಗ ರಾಮಮ0ದಿರದ ಮೆಟ್ಟಿಲುಗಳ ಮೇಲೆ ಯಾರೋ ಕೊರಗುತ್ತಾ ಕುಳಿತ್ತಿದ್ದರು.ದಾಸರು ಯಾರು ಎ0ದು ನೋಡಿದರೆ ಶ್ರೀಮಾನ್ ನಾರಾಯಣ,ಆ ಸ0ದರ್ಭದಲ್ಲಿ ದಾಸರು ಶ್ರೀಹರಿಯನ್ನು ಹೇಗೆ ಸಮಾಧಾನ ಪಡಿಸಿದರೆ0ದರೆ...
ವಿರಹವೇತಕ್ಕಯ್ಯ ಶ್ರೀನಿಧಿರಾಯ ವಿರಹವೇತಕ್ಕಯ್ಯ|
ಲಕ್ಷ್ಮೀ ಕಾಣಲಿಲ್ಲ ಅ0ತ ಏನಯ್ಯಾ|
ಲಕ್ಷ್ಮೀ ಕಾಣಲಿಲ್ಲ ಅ0ತ ಏನಯ್ಯಾ|
ತ್ರೇತಾಯುಗದಲ್ಲಿ ಸೀತೆಯಾಗಿ
ದ್ವಾಪರದಲ್ಲಿ ರುಕ್ಮಿಣಿಯಾಗಿ|
ನಿನ್ನ ಅರಸಿ ನಿನ್ನನ್ನು ಅರಸಿ ಬ0ದಿರಲಿಲ್ಲವೆನಯ್ಯ|
ದ್ವಾಪರದಲ್ಲಿ ರುಕ್ಮಿಣಿಯಾಗಿ|
ನಿನ್ನ ಅರಸಿ ನಿನ್ನನ್ನು ಅರಸಿ ಬ0ದಿರಲಿಲ್ಲವೆನಯ್ಯ|
ಸಿ0ಹಮುಖವಾದರೇನು ವರಾಹವಾದರೇನ0ತೆ|
ನೀ ಸದಾ ಲಕ್ಷ್ಮಿಯ ನಾರಾಯಣನಯ್ಯ|
ಸದಾ ಲಕ್ಷ್ಮಿಯ ಧ್ಯಾನದಲ್ಲಿ ಕುಳಿತರೆ ಹೇಗಯ್ಯಾ|
ಬಾರಯ್ಯ ಮ0ತ್ರಾಲಯಕ್ಕೆ ಹೋಗೋಣಯ್ಯ,ಗುರುರಾಯರ ಸೇವೆ ಮಾಡಿ ಬರೋಣಯ್ಯ|
ನೀ ಸದಾ ಲಕ್ಷ್ಮಿಯ ನಾರಾಯಣನಯ್ಯ|
ಸದಾ ಲಕ್ಷ್ಮಿಯ ಧ್ಯಾನದಲ್ಲಿ ಕುಳಿತರೆ ಹೇಗಯ್ಯಾ|
ಬಾರಯ್ಯ ಮ0ತ್ರಾಲಯಕ್ಕೆ ಹೋಗೋಣಯ್ಯ,ಗುರುರಾಯರ ಸೇವೆ ಮಾಡಿ ಬರೋಣಯ್ಯ|
ಅಭಿಲಾಷ್ ಟಿ ಬಿ
ತಿಪಟೂರು
ತಿಪಟೂರು
2.
ಒಂದು ಹಿಡಿ ಉಪ್ಪಿನಷ್ಟು ಅವಲಕ್ಕಿ ಸಾಕು ಶ್ರೀಕೃಷ್ಣನನ್ನು ಕಾಣಲು ಎಂದು ದಾಸರು ಮೊದಲೇ ಹೇಳಿದ್ದಾರೆ,ಆದ್ರೆ ನನ್ನ ಮಡದಿ ಚಕ್ಕುಲಿ,ಒಬ್ಬಟ್ಟು ಎಲ್ಲವನ್ನು ಮಾಡಿಕೊಂಡು ಆ ರಂಗನನ್ನು ನೋಡಲು ನನ್ನನ್ನೂ ಕರೆದುಕೊಂಡು ಹೊರಟ್ಟಿದ್ದಾಳೆ ......
ನನ್ನಾಕೆ ಕರೆದಳು ಹೋಗೋಣ ಬನ್ನಿ ಎಂದು
ದೇವಕಿನಂದನ ಕೃಷ್ಣನ ನೋಡಲು|
ದೇವಕಿನಂದನ ಕೃಷ್ಣನ ನೋಡಲು|
ಕೋಡುಬಳೆ ಚಕ್ಕುಲಿ ತುಂಬಿದಳು ಡಬ್ಬಿಯಲ್ಲಿ|
ನವನೀತವನ್ನು ಹಾಕಿದಳು ಮಜ್ಜಿಗೆ ಇದ್ದ ಗಡಿಗೆಯಲ್ಲಿ|
ಒಬ್ಬಟ್ಟು,ಉಸಲಿಯನ್ನು ಕಟ್ಟಿದಳು ಮುತ್ತುಗದಲ್ಲಿ|
ಅವಲಕ್ಕಿಯನ್ನೇ ಮರೆತ್ತಿದ್ದಳು ನನ್ನ ನಲ್ಲೆ |
ನವನೀತವನ್ನು ಹಾಕಿದಳು ಮಜ್ಜಿಗೆ ಇದ್ದ ಗಡಿಗೆಯಲ್ಲಿ|
ಒಬ್ಬಟ್ಟು,ಉಸಲಿಯನ್ನು ಕಟ್ಟಿದಳು ಮುತ್ತುಗದಲ್ಲಿ|
ಅವಲಕ್ಕಿಯನ್ನೇ ಮರೆತ್ತಿದ್ದಳು ನನ್ನ ನಲ್ಲೆ |
ಮಲ್ಲಿಗೆ ಮಲ್ಲೆ ತೋಳ್ಬ್ಂದಿಗೆಂದು|
ಕಮಲ ತಾವರೆ ಕಮಲಾಕ್ಷಿಗೆಂದು|
ಮಾಣಿಕ್ಯದ ಹಾರವೆಂದು ಸೇವಂತಿಗೆಯನ್ನು ಕಟ್ಟಿದ್ದಳು|
ತುಳಸಿಯನ್ನೆ ಮರೆತ್ತಿದ್ದಳು ನನ್ನ ಪ್ರಿಯ ನಲ್ಲೆ|
ಕಮಲ ತಾವರೆ ಕಮಲಾಕ್ಷಿಗೆಂದು|
ಮಾಣಿಕ್ಯದ ಹಾರವೆಂದು ಸೇವಂತಿಗೆಯನ್ನು ಕಟ್ಟಿದ್ದಳು|
ತುಳಸಿಯನ್ನೆ ಮರೆತ್ತಿದ್ದಳು ನನ್ನ ಪ್ರಿಯ ನಲ್ಲೆ|
ಉಡುಪಿ,ಮಥುರಾ ಬೀದಿಗಳಲ್ಲಿ ಅಲೆದಿದ್ದಾಯಿತು|
ಗೋವೃಂದ,ರಥಬೀದಿಗಳಲ್ಲೂ ಹುಡುಕಿದ್ದಾಯಿತು|
ಗುರುವಾಯೂರಿನ ಒಡೆಯನ ಬಗ್ಗೆ ಗುರುರಾಯರನ್ನು ಕೇಳಿದಾಗ|
ಮನ ಮನದಲ್ಲೂ ನಲಿದಾಡುತ್ತಿರುವನು ಎಂದರು|
ಗೋವೃಂದ,ರಥಬೀದಿಗಳಲ್ಲೂ ಹುಡುಕಿದ್ದಾಯಿತು|
ಗುರುವಾಯೂರಿನ ಒಡೆಯನ ಬಗ್ಗೆ ಗುರುರಾಯರನ್ನು ಕೇಳಿದಾಗ|
ಮನ ಮನದಲ್ಲೂ ನಲಿದಾಡುತ್ತಿರುವನು ಎಂದರು|
ಅಭಿಲಾಷ್ ಟಿ ಬಿ
ತಿಪಟೂರು
ತಿಪಟೂರು
3.
ಇಂದಿನ ಕಂಪ್ಯೂಟರ್ ಯುಗದಲ್ಲಿ ಕೃಷ್ಣನು ನನ್ನ ಜೊತೆ ಕಣ್ಣಾಮುಚ್ಚಾಲೆ ಆಡಿದಾಗ ಏನಾಯಿತು,?
ಕಣ್ಣಮುಚ್ಚಾಲೆ ಆಡಿದೆನೋ|
ಶ್ರೀರಂಗಲಕ್ಷ್ಮಿಯ ರಂಗನಾಯಕನ ಜೊತೆಗೆ|
ಶ್ರೀರಂಗಲಕ್ಷ್ಮಿಯ ರಂಗನಾಯಕನ ಜೊತೆಗೆ|
ಮಾಧವನೆಂದು ಹಿಡಿದರೆ|
ಇಲ್ಲ ನಾನು ಅಚ್ಯುತನೆಂದು ತಪ್ಪಿಸಿಕೊಂಡನು|
ಸುಳ್ಳು ಹೇಳದಿರಯ್ಯ,ನೀ ಸತ್ಯಭಾಮೆ ರಮಣನಲ್ಲವೇ?|
ನಾ ಸೀತಾಪತಿ ಎಂದು ಕಣ್ಣು ಮಿಟುಕಿಸಿ ಓಡಿಹೋದನು|
ಇಲ್ಲ ನಾನು ಅಚ್ಯುತನೆಂದು ತಪ್ಪಿಸಿಕೊಂಡನು|
ಸುಳ್ಳು ಹೇಳದಿರಯ್ಯ,ನೀ ಸತ್ಯಭಾಮೆ ರಮಣನಲ್ಲವೇ?|
ನಾ ಸೀತಾಪತಿ ಎಂದು ಕಣ್ಣು ಮಿಟುಕಿಸಿ ಓಡಿಹೋದನು|
ನಾರದರು ನುಡಿಯುವ ನಾರಾಯಣ ನೀನೆ ಅಲ್ಲವೇ?
ನಾನೊಬ್ಬ ಯಕಶ್ಚಿತ್ ಗೊಲ್ಲ ಎಂದು ಹೇಳುವುದೇನು|
ಒಂದು ಉಂಡೆ ಬೆಲ್ಲ,ಅವಲಕ್ಕಿಯನ್ನು ಹಿಡಿದು ಕುಳಿತುಕೊಂಡಾಗ|
ತುಳಸಿಯ ಮರೆಯಿಂದ ನಾನು ಕೃಷ್ಣ ಎಂದು ಓಡಿಬಂದನು|
ನಾನೊಬ್ಬ ಯಕಶ್ಚಿತ್ ಗೊಲ್ಲ ಎಂದು ಹೇಳುವುದೇನು|
ಒಂದು ಉಂಡೆ ಬೆಲ್ಲ,ಅವಲಕ್ಕಿಯನ್ನು ಹಿಡಿದು ಕುಳಿತುಕೊಂಡಾಗ|
ತುಳಸಿಯ ಮರೆಯಿಂದ ನಾನು ಕೃಷ್ಣ ಎಂದು ಓಡಿಬಂದನು|
ಅಭಿಲಾಷ್ ಟಿ ಬಿ
ತಿಪಟೂರು
ತಿಪಟೂರು

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ