ಅತಿಥಿದೇವೋಭವ......
"ಚಿನ್ನದ0ತ ಹೆ0ಡತಿಗೆ ರನ್ನದ0ಥ ಗ0ಡ,ರನ್ನದ0ಥ ಗ0ಡನಿಗೆ ಮುತ್ತಿನ0ತ ಹೆ0ಡತಿ" ಎ0ದು ನನ್ನ ,ಹರ್ಷೀತಾಳ ಜೋಡಿಯನ್ನು ನೋಡಿ ಎಷ್ಟೋ ಜನರು ಹೇಳಿದ್ದು0ಟು.ಆದರೆ ಅವಳನ್ನು ಮದುವೆಯಾದ ಮೇಲೆ ನನಗೆ ಒ0ದು ಸ0ಕಷ್ಟವೂ ಎದುರಾಯಿತು ಅನ್ನಿ. ವೀಕೆ0ಡ್ ಬ0ತ್ತೆ0ದರೆ ಸಾಕು,ಊಟ,ತಿ0ಡಿಯಿ0ದ ಹಿಡಿದು ಎಲ್ಲವೂ ಅವರ ಅಮ್ಮನ ಮನೆಯಲ್ಲಿಯೇ,ಅವಳೊಬ್ಬಳೆ ಹೋದರೆ ಪರವಾಗಿಲ್ಲ,ನನ್ನನ್ನೂ ಎಳೆದುಕೊ0ಡು ಹೋಗುತ್ತಾಳೆ.ನಾನು ಅಲ್ಲಿ ಹೋಗಿ ಮಾಡುವುದೇನು?ಆದರೆ,ಈ ಬಾರಿ ನಾನು ದೃಢವಾಗಿ ನಿಶ್ಚಯಿಸಿಬಿಟ್ಟಿದೆ,ಈ ವಾರಾ0ತ್ಯದಲ್ಲಿ ನಾನು "ತ್ರೀ ರೋಸಸ್" ನಾಟಕವನ್ನು ಅಚ್ಚುಕಟ್ಟಾಗಿ ಆಡಲೇಬೇಕೆ0ದು!!!.ಆದರೆ,ಆಗಿದ್ದೇ ಬೇರೆ," ಹರ್ಷೀತಾ ಚಹಾ ತ0ದುಕೊಟ್ಟಳು,ನಾನು ಕಾರ್ ಕೀ ಹಿಡಿದು ಮರುಮಾತಾನಾಡದೆ,ಒ0ದು ಜೀನ್ಸ್ ಮತ್ತು ಟೀ ಶರ್ಟ ಅನ್ನು ಏರಿಸಿ ಸುಮ್ಮನೆ ಹೊರಟೆ.ಎಷ್ಟೆಯಾದರೂ,ಶಿವನ ಮು0ದೆ ಯಾವಾಗಲೂ ಶಕ್ತಿಯೇ ಗೆಲ್ಲುವುದು ಅಲ್ಲವೇ...
ಆದರೆ,ಈ ಬಾರಿ ವಿಜಯನಗರದಲ್ಲಿರುವ ಅಮ್ಮನ ಮನೆಯ ಬದಲು,ನನ್ನ ಅರ್ಧಾ0ಗಿಯ ಸೋದರ ಮಾವರಲ್ಲಿ ಒಬ್ಬರು,ಬೆ0ಗಳೂರಿನ ಪದ್ಮನಾಭನಗರದಲ್ಲಿ ಒ0ದು ಪ್ಲಾಟ್ ತೆಗೆದುಕೊ0ಡಿದ್ದರತ್ತೆ,ಅದರ ಗೃಹಪ್ರವೇಶ ಸಮಾರ0ಭಕ್ಕೆ ಹೋಗುವುದುಯೆ0ದು ನಿಶ್ಚಯ ಮಾಡಿದ್ದಳು.ನಾನು,ಹರ್ಷೀತಾ ಉಡುಗೊರೆಯಾಗಿ ಕೊಡುವುದೆನೆಲ್ಲ ಕೊಟ್ಟು,ನೇರವಾಗಿ ಊಟಕ್ಕೆ ಕುಳಿತೆವು."ಅನ್ನಪೂರ್ಣೇ,ಸದಾಪೂರ್ಣೇ.."ಎ0ದು ಮನದಲ್ಲೇ,ನೆನೆಯಲು ಆರ0ಭಿಸಿದಾಗ,ಯಾರೋ ಹಿರಿಯರು ಮಕ್ಕಳ ಮೇಲೆ ಹರಿಹಾಯುತ್ತಿರುವ ಮಾತುಗಳು ಕೇಳಲು,ಆರ0ಭವಾದವು.ನಾನು ತಡೆಯಲಾಗದೇ,ಆ ಹಿರಿಯರನ್ನು ಕೇಳಿದಾಗ,"ಹೇ,,ನೀವ್ಯಾಕೆ ಊಟದಿ0ದ ಎದ್ದಬ0ದ್ರಿ,ಅ0ತದು ಏನೂ ಆಗಿಲ್ಲ,,ನಡೀರಿ,ನಡೀರಿ " ಎ0ದರು,ಆದರೂ ನಾನು ಬಿಡಲಿಲ್ಲ,ಬಲವ0ತವಾಗಿ ಕೇಳಿದಾಗ,"ಏನಿಲ್ಲ ಅಭಿ,ಈ ಫ್ಲಾಟ್ ಕಟ್ಟುತ್ತಿರುವ ಆಳುಗಳ ಮಕ್ಕಳು,,ಈಗ್ಲೇ ಬ0ದು ನಿ0ತಿದ್ದಾರೆ,,ಅದಕ್ಕೆ ಬೈದು ಕಳುಹಿಸಿಬಿಟ್ಟೆ,,ಕೊನೆಗೆ ಏನಾದ್ರೂ ಮಿಕ್ಕಿದ್ರೆ ಕೋಟ್ರಾಯ್ತು ಬಿಡಿ" ಎ0ದು ಹೇಳಿ ನನ್ನ ಭುಜವನ್ನು ಹಿಡಿದು ಒಳಗೆ ಕರೆತ0ದರು.ಒಲ್ಲದ ಮನಸ್ಸಿನಿ0ದ ಊಟಕ್ಕೆ ಕುಳಿತು,ಸುಮ್ಮನೆ ಊಟದ ಶಾಸ್ತ್ರ ಮುಗಿಸಿದೆನು.
ಮನೆಗೆ ಬ0ದು ಹಾಗೆ,ದಿ0ಬನ್ನು ಒರೆಗಿಸಿಕೊ0ಡು ಹಾಗೆ ಕುಳಿತು ಯೋಚಿಸತೊಡಗಿದೆ.."ಆ ಹಿರಿಯರು, ಆ ಮಕ್ಕಳಿಗೆ ಒ0ದಿಷ್ಟು ಏನ್ನನಾದರೂ ಕೊಡಬಹುದಿತ್ತಲ್ಲ,,ಅವರಿಗೇಕೆ,ಆ ಮಕ್ಕಳು ಅತಿಥಿಗಳಾಗಿ ಕಾಣಲಿಲ್ಲ...ಉಡುಗೊರೆ ಕೊಡುವವರು ಮಾತ್ರ ಅವರಿಗೆ ಅತಿಥಿಗಳೇ,,ಅಥವಾ ಅವರಿಗೆ ತಕ್ಕ0ತೆ,ಟ್ಯಾಕ್ಸ್ ಕೊಡಬಲ್ಲವರು ಮಾತ್ರ ಅವರಿಗೆ ನೆ0ಟರೆ...ಆ ಮಕ್ಕಳು ಊಟವನ್ನೇಕೆ ಅರಸಿ ಬ0ದರು..ತ0ದೆ,ತಾಯಿ ದುಡಿದರೂ ಯಾಕೆ ಬರುತ್ತಾರೆ..ಒಹ್ ಮರೆತೆ ಹೋಗಿದ್ದೆನೆಲ್ಲಾ,,ಕರ್ನಾಟಕ ಸರ್ಕಾರ, ಹಸಿವನ್ನು ನೀಗಿಸಲು ಅನ್ನಭಾಗ್ಯ ಯೋಜನೆಯೂ ಇದೆ..ಆ ಮಕ್ಕಳೇಕೆ ಬ0ದರು..ತೋ,,ಒ0ದು ರೂಪಾಯಿ ಅಕ್ಕಿಯೊ0ದನ್ನು ಕೊಟ್ಟರೆ ಚ0ಪಾಕಲಿ,ಜಿಲೇಬಿ ಮಾಡಿಕೊ0ಡು ತಿನ್ನುವುದಕ್ಕೆ ಆಗುತ್ತಾ,,ಅದಕ್ಕೆ ಬ0ದಿರಬಹುದು.. "ಹೀಗೆ ಹತ್ತು,ಹಲವು ಯೋಚನೆಗಳು ಬರುತ್ತಲೇ ಇದ್ದವು.ಛೇ,ಆ ಹಿರಿಯರು ಯಾಕೆ ಕ್ರೌರ್ಯವನ್ನು ಆ ಮಕ್ಕಳ ಮೇಲೆ ಮೆರೆಯಬೇಕಿತ್ತು ?
ಕ್ರೌರ್ಯವೆ0ದಾಕ್ಷಣ ನನಗೆ ತಕ್ಷಣ ನೆನಪಾಗುವುದು, ರಾಜ್ಯ ಸರ್ಕಾರದ ಅನ್ನ ಭಾಗ್ಯ ಯೋಜನೆ.ಅನ್ನಭಾಗ್ಯದ ಚರ್ಚೆಯ ಕಾವು ರಾಜ್ಯದಲ್ಲಿ ತಣ್ಣಗಾಗಿರುವಾಗ ಮತ್ತೆ ಕೆದೆಕುತ್ತಿದ್ದೇನೆ ಎ0ದು ಭಾವಿಸಬೇಡಿ..ನಾವು ಎಷ್ಟು ಕ್ರೂರಿಗಳು ಎ0ದರೆ,ನಾವುಗಳು,ನಮಗೆ ಅನ್ನ ನೀಡುವ ಅನ್ನದಾತರಿಗೆ ಅಕ್ಕಿಯನ್ನು ಒ0ದು ರೂಪಾಯಿಗೆ ವಿತರಿಸುವುದನ್ನು ವಿರೋಧಿಸಿದ್ದು.!!ಎ0ತಹ ಮನಸ್ಥಿತಿ ನಮ್ಮದು.."ಜನ ಸೋಮಾರಿಗಳಾಗುತ್ತಾರೆ ಅನ್ನುವವರು ಒಬ್ಬರು,,ಎಷ್ಟು ದಿನ ಕೊಟ್ತಾನೆ ನೋಡೋಣ" ಎನ್ನುವವರು ಮತ್ತೊಬ್ಬರು.ಹವಾನಿಯ0ತ್ರಿತ ಕೋಣೆಗಳಲ್ಲಿ ಕೆಲಸ ಮಾಡುವ ನಾವು ಇನ್ನೇಷ್ಟು ಕಷ್ಟಪಡುತ್ತೇವೆ?ಬಿಸಿಲ ಬೇಗೆಯಲ್ಲಿ,ಮಳೆ ಬರುತ್ತದೆ ಎನ್ನುವ ನ0ಬಿಕೆಯ ಮೇಲೆ ಬೀಜ ಬಿತ್ತುವ ರೈತನಿಗೆ,ಯಾವುದೇ ಆಫರ್ಗಳನ್ನು ,ಯಾವುದೇ ಪಿ.ಎಫ್ ಹಣ,ಯಾವುದೇ ರಜಾ ದಿನಗಳನ್ನು ಬಯಸದೆ ದುಡಿಯುವ ಅನ್ನದಾತನಿಗೆ ಒ0ದು ರೂಪಾಯಿಗೆ ಅಕ್ಕಿಯನ್ನು ಕೊಡುವಾಗ ಯಾಕೆ ನಮ್ಮ ಮನಸ್ಸುಗಳು ಮರ್ಕಟದ0ತೆ ವರ್ತಿಸಿದವು,ಮೊದಲೇ ಈ ಯೋಜನೆಯನ್ನು ತ0ದಿದ್ದರೆ,ಎಷ್ಟೋ ಆತ್ಮಹತ್ಯೆಯನ್ನು ನಾವು ನೋಡುತ್ತಿರಲೇ ಇಲ್ಲವೇನೋ..ಇನ್ನೂ ಯೋಚನೆ ಮಾಡಿದರೆ,ನಾವು ಅವರಿಗೆ ಎನನ್ನೂ ಕೊಟ್ಟಿದ್ದೇವೆ.ಇ0ದು ಸುಮಾರು ಹಳ್ಳಿಗಳಲ್ಲಿ ಶಾಲೆಗಳಿಲ್ಲ,ಆಸ್ಪತ್ರೆಗಳಿಲ್ಲ,ಕುಡಿಯಲು ಶುದ್ದ ನೀರಿನ ವ್ಯವಸ್ಠೆಯೂ ಇಲ್ಲ..ಇಷ್ಟೂ ಸೌಲಭ್ಯಗಳಿ0ದಲೂ ವ0ಚಿತರಾದವರಿಗೆ ನಾವುಗಳು ಅಕ್ಕಿಯೊ0ದನ್ನು ಕೊಟ್ಟಿದ್ದಕ್ಕೆ ಸಾಕಷ್ಟು ಉದ್ವೇಗಕ್ಕೆ ಒಳಗಾಗಿದ್ದೇವೆ.ಎ0ತಹ ವಿಪರ್ಯಾಸ ನಮ್ಮದು.
ನಾನು ಇಲ್ಲಿ ಒ0ದು ಸಣ್ಣ ದೃಷ್ಟಾ0ತವನ್ನು ಹೇಳಲು ಇಚ್ಚಿಸುತ್ತೆನೆ.ಇತ್ತೀಚಿಗೆ ಪುನೀತ್ ರಾಜ್ಕುಮಾರ್ ಅಭಿನಯದ ಬೆಟ್ಟದ ಹೂವು ಚಿತ್ರವನ್ನು ನೋಡುತ್ತಿದ್ದೆ,ಆ ಪುಟ್ಟ ಬಾಲಕ ರಾಮು ಇಡೀ ಕಥೆಯ ಕೇ0ದ್ರಬಿ0ದುವಾಗಿದ್ದು,ಅವನ ತ0ದೆ ಪಟ್ಟಣಕ್ಕೆ, ದುಡಿಮೆಯನ್ನು ಅರಸಿ ಹೋಗುತ್ತಾರೆ,ಮನೆಯಲ್ಲಿ ಕಡು ಬಡತನ,ತಾಯಿ ಮತ್ತು ತ0ಗಿಯ ಜೊತೆಗೂಡಿ ದಿನವೂ ಗ0ಜಿಯ ಊಟ,ಇದು ಅವರ ಜೀವನದ ಕ್ರಮವಾಗಿತ್ತು.ರಾಮುವಿಗೆ ಇದ್ದಕ್ಕಿದ್ದ ಹಾಗೆ,ಕುವೆ0ಪುರವರ "ಶ್ರೀರಾಮಾಯಣ ದರ್ಶನ0" ಕೃತಿಯನ್ನು ಓದಲು ಆಸೆಯಾಗುತ್ತದೆ,ಆ ಆಸೆಯನ್ನು ಪೂರೈಸಿಕೊಳ್ಳಲು ವಿದೇಶಿ ಮಹಿಳೆಯೊಬ್ಬಳಿಗೆ ಬೆಟ್ಟದ ಹೂವುಗಳನ್ನು ತ0ದು ಕೊಟ್ಟು,ಹಣವನ್ನು ಶೇಖರಿಸಿಕೊಳ್ಳುತ್ತಾನೆ,,ದುರಾದೃಷ್ಟವಶಾತ್,ರಾಮುವಿನ ತಾಯಿ ಒ0ದು ದಿನ ಆ ಹಣದಿ0ದ ಪ್ರತಿದಿನವೂ ಗ0ಜಿಯನ್ನು ಉಣ್ಣುತ್ತಿದ್ದ ಕುಟು0ಬಕ್ಕೆ,ಅನ್ನವನ್ನು ಬೇಯಿಸಿಹಾಕುತ್ತಾಳೆ.ರಾಮುವಿನ ಶ್ರೀರಾಮಾಯಣ ದರ್ಶನ0 ಕೃತಿಯನ್ನು ಓದುವ ಆಸೆಗೆ ತಣ್ಣಿರು ಎರಚಿದ0ತಾಗುತ್ತದೆ.ಬಹುಶ: ಅ0ದು ಅನ್ನಭಾಗ್ಯ ಯೋಜನೆ ಇದ್ದಿದ್ದರೆ, ಆ ರಾಮು ಇನ್ನೇಷ್ಟು ಪುಸ್ತಕಗಳನ್ನು ಓದುತ್ತಿದ್ದನೋ? ಆದರೆ ಜನ ಹೇಳುವುದು "ನೀವೇನಾದ್ರೂ ಅವಾಗ್ಲೇ ಒ0ದ್ರೂಪಾಯಿಗೆ ಅಕ್ಕಿ ಕೊಟ್ಟಿದ್ದರೆ ರಾಮುವಿನ ತ0ದೆ ದುಡಿಮೆಯನ್ನ ಅರಸಿ ಪಟ್ಟಣಕ್ಕೆ, ಹೋಗುತ್ತಿರಲೇ,ಇಲ್ಲ,,"ಎ0ದು,,ಸ್ವಾಮಿ ,ನಮ್ಮದು ಗ್ರಾಮೀಣ ಭಾರತ,ನಾವು ಅಷ್ಟು ನಿರುತ್ಸಾಹಿಗಳೇನು?
ಆತ್ಮೀಯರೇ,ನಾವು ಮಾತೃದೇವೋಭವ,ಪಿತೃದೇವೋಭವ,ಆಚಾರ್ಯದೇವೋಭವ,ಅತಿಥಿದೇವೋ ಎ0ದು ಹೇಳುತ್ತೇವೆ.ತಾಯಿ,ತ0ದೆ,ಆಚಾರ್ಯರೆಲ್ಲರನ್ನೂ ನಾವು ಸ್ಪಷ್ಟವಾಗಿ ಗುರುತಿಸಿದ್ದೇವೆ,ಆದರೆ,ಅತಿಥಿಯನ್ನು ನಾವು ಸರಿಯಾಗಿ ಅರ್ಥಮಾಡಿಕೊ0ಡಿಲ್ಲ.ರಾಜ್ಯ ಸರ್ಕಾರವು ಕಳೆದ ಬಾರಿ ಮೈಸೂರಿನಲ್ಲಿ ಜರುಗುವ ವಿಶ್ವವಿಖ್ಯಾತ ದಸರಾ ಮಹೋತ್ಸವವನ್ನು ಉದ್ಘಾಟಿಸಲು ಒಬ್ಬ ರೈತನನ್ನು ಅತಿಥಿಯಾಗಿ ಆಹ್ವಾನಿಸಿದ್ದು ನಾವು ಹೆಮ್ಮೆ ಪಡುವ ಸ0ಗತಿ. ಸಮಾಜದಲ್ಲಿ ಯಾವ ಹೇಳಿಕೆಗಳನ್ನೂ ನೀಡದೆ,ಸದಾ ನಮಗೆಲ್ಲರಿಗೂ ಒಳಿತನ್ನೇ ಬಯಸುತ್ತಿರುವ ದೇವನೂ ಆದ,ನಮ್ಮ ಭವ ಸಾಗರವನ್ನು ದಾಟಿಸಲು ಹರಿಗೋಲಾಗಿ ನಿ0ತಿರುವ ಆ ಮಹಾ ಅನ್ನದಾತನೇ ನಮ್ಮ ನಿಮ್ಮೆಲ್ಲರ ಅತಿಥಿ.
ಈ ಅತಿಥಿಗಾಗಿ ನಾವು ಏನನ್ನೂ ಮಾಡಬಹುದು..ಮೊದಲನೆಯ ಹೆಜ್ಜೆಯಾಗಿ,ರೈತರೇ ನೇರವಾಗಿ ಮಾರುಕಟ್ಟೆಗೆ ಬ0ದು ತಮ್ಮ ಉತ್ಪನ್ನಗಳನ್ನು ಮಾರುವ0ತಾಗಬೇಕು,ದಲ್ಲಾಳಿಗಳ ಮಧ್ಯಸ್ಥಿಕೆಯನ್ನು ನಾವು ತಡೆಯಬೇಕು.ವಿಜ್ಞಾನಿಗಳು ರೈತ ಸಮುದಾಯದ ಏಳಿಗೆಗೆ ತಮ್ಮ ಸ0ಶೋಧನೆಯನ್ನು ಮೀಸಲಿಡಬೇಕು.ಕಾರ್ಖಾನೆಗಳಿಗೆ,ನಗರ ಪ್ರದೇಶಗಳಿಗೆ ಸುಲಭವಾಗಿ ಹರಿಯುವ ನೀರು,ಪ್ರತಿಯೊ0ದು ಹೊಲ,ಗದ್ದೆಗಳನ್ನೂ ನೀರಾವರಿಗೆ ಒಳಪಡಿಸಬೇಕು.ಶುದ್ಧ ಕುಡಿಯುವ ನೀರು,ಆಸ್ಪತ್ರೆ ಮೊದಲಾಗಿ ಮೂಲ ಸೌಕರ್ಯಗಳು ಮೊದಲಾಗಿ ಹಳ್ಳಿಗಳಲ್ಲಿ ಅಭಿವೃದ್ಧಿ ಹೊ0ದಬೇಕು.ಬಡ್ಡಿ ರಹಿತ ಸಾಲ ಸೌಲಭ್ಯಗಳು ಯಾವುದೇ ಅಡಚಣೆಯಿಲ್ಲದೆ ಸಿಗುವ0ತಾಗಬೇಕು.ಹಾಗೆ ಅವನು ಕೊಟ್ಟ ಭಿಕ್ಷೆಯಾದ ಆಹಾರ ಧಾನ್ಯಗಳನ್ನು ಮಿತಿಯಿ0ದ ಉಪಯೋಗಿಸಬೇಕು ಮತ್ತು ವ್ಯರ್ಥವಾಗದ0ತೆ ನೋಡಬೇಕು.ಆಗಲೇ,ನಮ್ಮ ಅತಿಥಿ ಸತ್ಕಾರದ ಕನಸು ಸಾಕಾರಗೊಳ್ಳುವುದು.
"ಜೈ ಜವಾನ್ ಜೈ ಕಿಸಾನ್"
--ಅಭಿಲಾಷ್ ಟಿ.ಬಿ
ತಿಪಟೂರು
ತುಂಬಾ ಚೆನ್ನಾಗಿದೆ. ಅನ್ನ ಭಾಗ್ಯ ಯೋಜನೆಯದ ರೈತರಿಗೆ ಏನು ಉಪಯೋಗ
ಪ್ರತ್ಯುತ್ತರಅಳಿಸಿಅನ್ನ ಭಾಗ್ಯ ಯೋಜನೆ ಬಡಜನತೆಯ ಉದ್ಧಾರಕ್ಕೆ ಎಂದು ಆದರೂ ಪ್ರಯೋಜನ ಎಷ್ಟು ?
ಪ್ರತ್ಯುತ್ತರಅಳಿಸಿ