ಮಧ್ಯಾಹ್ನ ಎರಡು ಘoಟೆ,ನನ್ನ ಅತ್ತಿಗೆ ಪೋನ್
ಮಾಡಿದರು."ಗೌತಮ್,ನಾನು ಅತ್ತಿಗೆ
ಮಾತಾಡ್ತಿರೋದು ,,ಇವತ್ತು ಸಾಯoಕಾಲ
ಅಕ್ಷರನಿಗೆ ಸ್ಕೂಲಲ್ಲಿ ಫ್ಯಾನ್ಸಿ ಡ್ರೆಸ್ ಕಾoಪಿಟೇಷನ್
ಇದೇ,ನೀವು,ಹರ್ಷಿತಾ ಸೇರ್ಕoಡು ಒoಚೂರು
ರೆಡಿ ಮಾಡಿ ಕರ್ಕ0ಡು
ಹೋಗಿ ಬನ್ನಿ,ನಾನು ಆಫೀಸಿನಿ0ದ ಬರಾದು ಸ್ವಲ್ಪ
ತಡವಾಗುತ್ತೇ" ಎoದು ಹೇಳಿ
ತಕ್ಷಣವೇ ಕಾಲ್ ಕಟ್ ಮಾಡಿಬಿಟ್ಟರು...ಅವನಿಗೆ ನಾನು ಏನೂ
ಅoತ ರೆಡಿಮಾಡೋದು,ಆಗ ಹೊಳೆದಿದ್ದೇ ನಮ್ಮ
ಪ್ರಭಾವತಿ ಮಿಸ್ ಐಡಿಯಾ
ನಾನು ಮೂರನೇ ಕ್ಲಾಸು
ಇರಬೇಕು ಅನ್ಸುತ್ತೇ, ಇರಬೇಕು ಏನೂ ಮೂರನೇ
ಕ್ಲಾಸೇ,ನಾನು ನಮ್ಮ ಮನೆಯಿoದ ಇಪ್ಪತ್ತು ಹೆಜ್ಜೆಗಿoತಲೂ ಹತ್ತಿರವಿದ್ದ ಕಲ್ಪಶ್ರೀ
ಕಾನ್ವೆoಟ್ಗೆ ಹೋಗುತ್ತಿದ್ದೆ.ಹೆಸರಿಗೆ ಕಾನ್ವೆoಟ್
ಅಷ್ಟೆ,ಅದನ್ನು ಯಾವ ಕ್ರೈಸ್ತ
ಮಿಷನರಿಗಳು ನಡೆಸುತ್ತಿರಲಿಲ್ಲ.ಎಲ್.ಕೆ.ಜಿಯಿoದ ಐದನೇ ತರಗತಿಯವರೆಗಿನ
ಮಕ್ಕಳನ್ನೂ ಒಟ್ಟಾಗಿಸಿದ್ದರೂ,ಸoಖ್ಯೆ ಮಾತ್ರ
ನೂರು ದಾಟುತ್ತಿರಲಿಲ್ಲ.ನನ್ನ ಅಮ್ಮ ಯಾವುದೋ
ಕಛೇರಿಗೆ ಹೋಗುತ್ತಿದ್ದರು ಎoಬುದಷ್ಟೇ ತಿಳಿದಿತ್ತು,ಅವಳು
ಹೊರಡುವಾಗಲೇ,ನನ್ನನ್ನು ಕಾನ್ವೆ0ಟಿನ ಗೇಟ್
ಬಳಿ ಬಿಟ್ಟು ಹೋಗುತ್ತಿದ್ದಳು.ಈಗಿನ
ಕಾಲದ ಹಾಗೆ ಬೆಳ್ಳಿಗ್ಗೆಯಿ0ದ
ಸಾಯ0ಕಾಲದವರೆಗೂ ಶಾಲೆ ನಡೆದದ್ದನ್ನು ನಾನು
ನೋಡಿಯೇ ಇಲ್ಲ.ನಮ್ಮ ಕಾನ್ವೆoಟ್ನ ಹುಡುಗರೆಲ್ಲರನ್ನೂ
ಮಧ್ಯಾಹ್ನ ಎರಡು ಗ0ಟೆ
ಹೊತ್ತಿಗಾಗಲೇ ಅವರ ತಾಯ0ದಿರು
"ಎತ್ತಿತ್ತ ನೋಡದಿರು,ಸುತ್ತು ಹೊರಳಾಡದಿರು.."
ಎನ್ನುತ್ತಾ ತಟ್ಟಿ ತಟ್ಟಿ ಮಲಗಿಸಿದರೆ,ಕೆಲವರನ್ನು ಎರಡು ತಟ್ಟಿ ಮಲಗಿಸುತ್ತಿದ್ದರು.ಆದರೆ ನಾನು ಎಲ್ಲಿ
ಹೋಗುವುದು,ಮನೆಯಲ್ಲಿ ಯಾರು ಇರುತ್ತಿರಲಿಲ್ಲ,ಅಪ್ಪ
,ಅಮ್ಮ ಇಬ್ಬರೂ ಕಛೇರಿಗೆ ಹೋಗುತ್ತಿದ್ದರು,ಆದ್ದರಿ0ದ ನಾನು
ಮಲಗುವ ಪ್ರಶ್ನೆಯಾಗಲಿ,ಸ0ಜೆಯ ತನಕ
ಮನೆಗೆ ಹೋಗುವ ಪ್ರಮೇಯವೇ ಇರುತ್ತಿರಲಿಲ್ಲ.ಅವಳು ಮಧ್ಯಾಹ್ನ ಬ0ದು ಕಛೇರಿಗೆ ಕರೆದುಕೊoಡು ಹೋಗೋಣವೆoದರೆ,ಅದು ಏನೂ ತು0ಬಾ ಹತ್ತಿರವೇನು ಇರಲಿಲ್ಲ,ಆದರೂ ಒ0ದೊ0ದು ಬಾರಿ ಅವಳ
ಊಟ ಬಿಟ್ಟು ದೂರದಿ0ದಲೇ
ಬoದು ನನ್ನನ್ನು
ಶಾಲೆಯಿ0ದ ಕರೆದುಕೊ0ಡು
ಹೋಗಿ ಕಛೇರಿಯಲ್ಲಿ ಕೂರಿಸಿಕ್ಕೊಳ್ಳುತ್ತಿದ್ದಳು.ಮಿಕ್ಕ ದಿನ ಏನು
ಮಾಡುವುದು,ಆಗ ನನಗೆ ಆಸರೆ
ನೀಡಿದ್ದೇ ನನ್ನ ಅಮ್ಮನ ವಯಸ್ಸೇ
ಇರಬಹುದೇನೋ,ಅ ಎಳೆಯ ಸ0ಪಿಗೆ ಮರ.ಆ
ಸ0ಪಿಗೆ ಮರವನ್ನು
ನಾನು ಆಯ್ಕೆ ಮಾಡಿಕ್ಕೊಳ್ಳಲು,ನನಗೆ
ಬೇರೆ ಕಾರಣವು ಇತ್ತು.ಅದು,ನಮ್ಮ ವಿದ್ಯಾನಗರದ ಮುಖ್ಯ
ರಸ್ತೆಯಲ್ಲಿತ್ತು ಹಾಗೂ ಪುಟ್ಟ
ಮರವಾಗಿದ್ದರಿ0ದ ಅದರ ಟೊ0ಗೆ ಮೇಲೆ ಕುಳ್ಳಿತುಕೊಳ್ಳಲು
ನಾನೇನು ಹರಸಾಹಸ ಮಾಡಬೇಕಿರಲಿಲ್ಲ ಮತ್ತು
ಆ ಮರದಿ0ದ
ನಮ್ಮ ಶಾಲೆಯು ಕಾಣುತ್ತಿತ್ತು ಹಾಗೂ
ನನ್ನ ಅಮ್ಮ ದೂರದಿ0ದ
ನಡೆದುಕೊ0ಡು ಬರುವುದು ಕ0ಡರೆ,ನಾನು ಬೇಗನೇ
ಅವಳ ಹತ್ತಿರ ಓಡಿ ಹೋಗಬಹುದಿತ್ತು.
ನಾನು ಕಾನ್ವೆ0ಟ್ ಬಿಟ್ಟ ನ0ತರ ಸ0ಪಿಗೆ
ಮರದ ಮೇಲೆ ದಿನನಿತ್ಯ ಕುಳ್ಳಿತುಕೊಳ್ಳುವುದು
ನನಗೆ ಅಭ್ಯಾಸವಾಗಿ ಹೋಗಿತ್ತು .ಒ0ದು ದಿನ
ನಮ್ಮ ಹೊಸ ಹೆಡ್ ಮಿಸ್
ಪ್ರಭಾವತಿ,ಮನೆಗೆ ಹೋಗಬೇಕಾದರೆ ನನ್ನನ್ನು
" ಸ್ಕೂಲ್ ಬಿಟ್ಟು ಎಷ್ಟು ಹೊತ್ತು ಆಗಿದೆ,ಯಾಕೋ ಮನೆಗೆ ಹೋಗಿಲ್ಲ,ಇಲ್ಲಿಕೂತ್ಕ0ಡು ಏನ್ ಮಾಡ್ತ್ದಿಯಾ"
ಎ0ದು ಜೋರು
ಧ್ವನಿಯಲ್ಲೇ
ಕೇಳಿದರು.ನಾನು ಒoದೇ
ಸಮನೇ ಅಳುತ್ತಾ ಇರೋ ವಿಷಯವನ್ನೆಲ್ಲ
ಹೇಳಿಬಿಟ್ಟೆ.ಅವರು ನನ್ನನ್ನು ಮರದಿ0ದ ಇಳಿಸಿ ಅವರ
ಮನೆಗೆ ಕರೆದುಕೊoಡು ಹೋದರು.ಮನೆಯಲ್ಲಿ ಅವರು ಮಗನ ಜೊತೆ
ಇದ್ದರು,ಯಜಮಾನರು ಯಾವುದೋ ದೂರದ
ಊರಲ್ಲಿ ಇದ್ರ0ತೆ."ಊಟ
ಮಾಡಿದ್ದೆಯಾ" ಎ0ದು ನಿಧಾನವಾಗಿ
ಕೇಳಿದರು,ನಾನು ನಾಚಿಕೆ ಬಿಟ್ಟು
ಜೋರಾಗಿಯೇ "ಇಲ್ಲ ಎನ್ನುವ0ತೆ"
ತಲೆ ಅಲ್ಲಾಡಿಸಿದೆ. ಅವರು ಒ0ದು
ತಟ್ಟೆಯಲ್ಲಿ ಇಡ್ಲಿ,ಸಕ್ಕರೆಯನ್ನು ಹಾಕಿಕೊಟ್ಟರು.ಸ0ಜೆಯಾಗುತ್ತಲೇ "ಬಾ
ನಿಮ್ಮ ಮನೆ ತೋರಿಸು,ನಾನೇ
ಬಿಟ್ಟುಬರ್ತೀನಿ "ಎ0ದರು.ಸoಜೆ ಆರುಘoಟೆ,ನಾನು ಸ0ಪಿಗೆ
ಮರದ ಬಳಿ ಇಲ್ಲದಿರುವುದನ್ನು ಕ0ಡು,ನನ್ನ ಅಮ್ಮ
,ನಮ್ಮ ಮನೆ ಮೇಲೆಲ್ಲ ಹುಡುಕಾಡುತ್ತಿದ್ದಳು.ಅಷ್ಷರಲ್ಲೇ ನಾನು ,ಪ್ರಭಾವತಿ ಮಿಸ್
ಜೊತೆ ಪ್ರತ್ಯಕ್ಷನಾದೆ.ಅವಳು ಒ0ದಿಷ್ಟು ನಿಟ್ಟಿಸಿರು
ಬಿಟ್ಟಳ್ಳು.ಪ್ರಭಾವತಿ ಮಿಸ್ಸೇ ನನ್ನ ಅಮ್ಮ
ಎಷ್ಟೋ ದಿನದ ಪರಿಚಯದ ಹಾಗೆ
,"ನಾಳೆಯಿoದ ನಿನ್ನ ಮಗ
ನೀನು ಬರೋ ತನಕ ನಮ್ಮ
ಮನೇಲೇ ಇರ್ತಾನೇ,ನೀನು ಸಾಯoಕಾಲ ಬ0ದು
ಕರೆದುಕೊ0ಡು ಹೋಗು,ಅಷ್ಟೇ"
ಎ0ದು ಹೇಳಿ
ಹೊರಟು ಹೋದರು.ಅ0ದಿನಿ0ದ ನಾನೂ ಪ್ರಭಾವತಿ
ಮಿಸ್ ಮನೆಯಲ್ಲಿ ನಿಸ್ಸ0ಕೋಚವಾಗಿ ಮಲಗಲು
ಶುರು ಮಾಡಿದೆ.
ಹೀಗೆ,ನಮ್ಮ ಶಾಲೆಯಲ್ಲಿ
ಈ ಬುಧವಾರ ಮಧ್ಯಾಹ್ನ
ಎರಡು ಗ0ಟೆಯ ಮೇಲೆ
ಛದ್ಮವೇಷ ಸ್ಪರ್ಧೆ ಇರುತ್ತದೆ ಎoದು ನಮ್ಮ ಕ್ಲಾಸಿನ
ಟೀಚರ್ ಹೇಳಿದ್ದರು.ನನಗೆ ಮೊದಲೇ ಖಾತ್ರಿಯಾಗಿತ್ತು,ಆವೋತ್ತು ಪ್ರಭಾವತಿ ಮಿಸ್
ಮನೆಗೆ ಹೋಗಲು ಸಾಧ್ಯವಿಲ್ಲ ಎoದು,ಮೊದಲೇ ನಿಶ್ಚಯಿಸಿದ0ತೆ ನಾನು ಸ0ಪಿಗೆ ಮರದಿ0ದಲೇ,ನೋಡಲು ನಿರ್ಧರಿಸಿದ್ದೆನು.ನನಗೂ
ವೇಷಹಾಕಿಕೊಳ್ಳುವ ಆಸೆ,ಎಲ್ಲಾ ಆಸೆ
ಈಡೇರಲೇ ಬೇಕೇ0ದಿಲ್ಲ.ಎ0ತೆ0ತ ವೇಷಗಳು,ಸ0ಗೊಳ್ಳಿರಾಯಣ್ಣ,ವಿವೇಕಾನ0ದ,ಕಿತ್ತೂರು ಚೆನ್ನಮ್ಮ,ಶಂಕರಾಚಾರ್ಯರು ,ನೆಹರು ಹೀಗೆ
ಹಲವಾರು ವೇಷಗಳು,,ಕೆಲವೊ0ದು
ವೇಷಗಳ0ತೂ ಸುಮಾರು ಮಕ್ಕಳು
ಹಾಕಿಕೊ0ಡಿದ್ದರು.ಅದರಲ್ಲಿ ಕೃಷ್ಣನ
ಪಾತ್ರವೇ ಹೆಚ್ಚಾಗಿತ್ತು.ನನಗೆ ಬೇಸರವಾಗಿದ್ದು ಯಾವಾಗವೆ0ದರೆ, ಎದುರುಗಡೆ ಮನೆ
ಹರ್ಷಿತಾ,ರಾಧೆ ವೇಷ ಹಾಕಿಕೊ0ಡು ನನ್ನ ಮು0ದೆ ಹೋದಾಗಲೇ.ನನಗೂ
ಕೃಷ್ಣನ ವೇಷ ಹಾಕಿಕೊಳ್ಳಬೇಕೆ0ದು
ಆಸೆಯಾಯಿತು.ನಿಜವಾಗಲೂ ಹೇಳಬೇಕೆ0ದರೆ,
ಹರ್ಷಿತಾ
ಅವತ್ತು ತು0ಬಾ ಚೆನ್ನಾಗಿ
ಕಾಣ್ಣುತ್ತಿದ್ದಳು.ನವಿಲು ಬಣ್ಣದ ಲ0ಗ ಬ್ಲೌಸ್,ತಲೆಯಿ0ದ ಕಾಲಿನವರಗೆ ಒ0ದು ಕೆ0ಪು
ಬಣ್ಣದ ಬಟ್ಟೆಯನ್ನು ಕಪ್ಪು ಬಣ್ಣದ ಹೇರ್
ಪಿನ್ಗಳ ಸಹಾಯದಿ0ದ
ಹಾಕಿಕೊ0ಡಿದ್ದಳ್ಳು.ಕೈಯಲ್ಲಿ ಶೃ0ಗಾರಗೊ0ಡಿದ್ದ ಒ0ದು
ಬಿ0ದಿಗೆ,ಕಣ್ಣಿನ ಹುಬ್ಬುಗಳ
ಮಧ್ಯ ಪುಟ್ಟದಾಗಿ ಕು0ಕುಮವನ್ನು ಇಡಿಸಿಕೊ0ಡು,ಕ0ಕಳಲ್ಲಿ
ಎತ್ತಿಕ್ಕ0ಡು ಹೋಗುತ್ತಿದ್ದರು ಅವಳ
ತಾಯಿ.ಇದೇ ಹರ್ಷಿತಾ ನನಗೆ
ರಾಧೆಯಾಗುತ್ತಾಳೆ ಎ0ದು ನಾನು
ಎ0ದೂ ಊಹಿಸಿರಲಿಲ್ಲ.ನಾನು ಇನ್ನೂ ಅವಳನ್ನು
ನೋಡುತ್ತಿರುವಾಗಲೇ,ನಮ್ಮ ಶಾಲೆಯ ಆಯಾ
ಆ0ಟಿ ಬ0ದು,"ಗೌತಮ್,ಪ್ರಭಾವತಿ ಮಿಸ್
ನಿನ್ನ ಹುಡುಕ್ತಾ ಇದ್ದಾರೆ,ನೀನ್ ನೋಡಿದ್ರೆ
ಇಲ್ಲಿ ಇದ್ಯಾ,,,"ಅ0ತ ಒ0ದೇ ಸಮನೇ ಎಳೆದುಕೊ0ಡು ಹೋದರು.ನನಗೂ
ಒ0ದ್ ಥರ
ಭಯ ಶುರು ಆಗೋಕೆ,ಶುರುವಾಯಿತು.
ಪ್ರಭಾವತಿ ಮಿಸ್ ಮೊದಲೇ ಎಲ್ಲಾ
ತಯಾರು ಮಾಡಿಕೊ0ಡು ಬ0ದ0ತೆ ಕ0ಡಿತು.ಆವರು ಶಾಲೆಯ
ಕಛೇರಿಯಲ್ಲೇ,ನನ್ನ ಗೊಣ್ಣೆ ಒರೆಸಿ,ಒರೆಸಿ, ಒದ್ದೆಯಾಗಿದ್ದ ಬಟ್ಟೆಯನ್ನು
ಕಳಚಿ,ಒ0ದು ಕೇಸರಿ
ಬಣ್ಣದ ಮಗುಟವನ್ನು ಕಚ್ಚೆಯ0ತೆ ಉಡಿಸಿದರು.ಎರಡು ಆರ್ಟಿಪಿಶಿಯಲ್ ಹಾರಗಳನ್ನು
ಹಾಕಿದರು.ತಲೆಗೆ ಪುಟ್ಟ ನವಿಲುಗರಿ
ಇದ್ದ ಒ0ದು ಸಣ್ಣ
ಕಿರೀಟವನ್ನು ಕಟ್ಟಿದರು.ಕೈ ಮತ್ತು ತೋಳುಗಳಿಗೆ
,ಬಣ್ಣ ,ಬಣ್ಣದ ರಿಬ್ಬನ್ಗಳನ್ನು ಹಾಕಿಸಿಕೊ0ಡು ಇನ್ನೇನು ಕಾರ್ಯಕ್ರಮ ಮುಗಿಯುವ
ಹ0ತಕ್ಕೆ ಬ0ದಿತ್ತು..,ಪ್ರಭಾವತಿ ಮಿಸ್ ನನ್ನನ್ನು ವೇದಿಕೆಯ
ಹತ್ತಿರಕ್ಕೆ ತ0ದು ನಿಲ್ಲಿಸಿದರು.ಕಾಂiÀರ್iಕ್ರಮ
ನಡೆಸಿಕೊಡುತ್ತಿದ್ದವರು,,"ಈಗ ಕೃಷ್ಣನಾಗಿ,.ನಮ್ಮ
ಶಾಲೆಯ ಮುಖ್ಯೋಪಾಧ್ಯಿನಿಯ ಮಗ,ಮೂರನೇ ಕ್ಲಾಸಿನ
ಗೌತಮ್", ಎ0ದು ಹೇಳಬಿಡಬೀಕೇ..ಆಗ ಅಲ್ಲೇ ನಿ0ತಿದ್ದ ಹರ್ಷಿತಾ ಓಡಿ
¨ಬ0ದು "ಕೊಳಲನ್ನೇ ಮರೆತು ಬ0ದಿದ್ಯಲ್ಲೋ.....ತಗಾಳ್ಳೋ ಈ ಕೋಲನ್ನು,ಕೊಳಲನ್ನಾಗಿ ಇಟ್ಟಕೋ,....".ಆ ಸ0ದರ್ಭದಲ್ಲಿ
ಒ0ದು ಕಡೆ
ಆನ0ದ,ಇನ್ನೋ0ದು
ಕಡೆ ಅಳುವೇ ಬರುವ0ತಾಯಿತು.ಕೃಷ್ಣನನ್ನು ಯಶೋಧೆ ಸಾಕಿ ಸಲುಹಿದರೂ,ಅವನು ದೇವಕಿಯ ಮಗನಲ್ಲವೇ
ಅ0ದು ತಿಳಿಯಿತು.ಅ0ದಿನಿ0ದ
ನಾನು ಎ0ದಿಗೂ ಛದ್ಮವೇಷವೇನೂ
,ಯಾವುದೇ ಸ್ಪರ್ಧೆಗಳಲ್ಲಿ ನನ್ನ ಅಮ್ಮ ಬ0ದರೆ ಮಾತ್ರ ಭಾಗವಹಿಸಲು
ನಿರ್ಧರಿದೆನು,
ಹೀಗೆ,ಎಷ್ಡೋ ಜನ ತಾಯ0ದಿರು, ತಮ್ಮ ಮಕ್ಕಳ
ಭವಿಷ್ಯಕ್ಕಾಗಿ ದುಡಿಯುವದಕ್ಕಾಗಿ ಹೊರಗಡೆ ಹೋಗುತ್ತಿದ್ದಾರೆ.ಅವರಿಗೆ
ಎಷ್ಡೋ ಭಾರಿ ಯಶೋಧೆಯ ಸುಖವನ್ನು
ಅನುಭವಿಸುವ ಒ0ದು ಅವಕಾಶವು
ದೊರೆತಿರುವುದಿಲ್ಲ.ನನಗೆ ನನ್ನ ಅಮ್ಮ
ಹೊರಗೆ ದುಡಿಯಲು ಹೋದಾಗ ,ಹೇಗೆ
ನಾನು ಸ0ಪಿಗೆ ಮರದ
ಆಶ್ರಯದಲ್ಲಿ ಇದ್ದೇನೋ,ಹಾಗೆ,ಆ
ಮಹಾತಾಯಿಗಳು,ಸಾವಿರಾರು ಮಕ್ಕಳಿಗೆ ಸ0ಪಿಗೆ ಮರದ0ತೆ ನಿ0ತಿದ್ದಾರೆ,ಆ ವiಹಾಮಾತೆಯರೆಲ್ಲರಿಗೂ
ನನ್ನ ನಮನ.
ಕೊನೆಗೆ,ನಾನು, ಹರ್ಷೀತಾ,
ಅಕ್ಷರನಿಗೆ ಅದೇ ಕೃಷ್ಣನ ವೇಷವನ್ನು
ಹಾಕಿಸಿಕೊ0ಡು ಶಾಲೆಗೆ ಕರೆದುಕ0ಡು ಹೋದೆವು.
ಗೌತಮ್


Looking for continued part......
ಪ್ರತ್ಯುತ್ತರಅಳಿಸಿ